Ad Widget

ಅಂತಾರಾಜ್ಯ ಸಂಪರ್ಕಿಸುವ ಪೆರಾಜೆ ಕೂರ್ನಡ್ಕ ರಸ್ತೆ ಅವ್ಯವಸ್ಥೆ

ಶ್ರಮದಾನದ ಮುಖಾಂತರ ರಸ್ತೆ ದುರಸ್ತಿ ಮಾಡಿದ ನಿವಾಸಿಗಳು

ಅಂತಾರಾಜ್ಯ ಸಂಪರ್ಕಿಸುವ ಕೇರಳ ಗಡಿಭಾಗದ ಸಮೀಪದಲ್ಲಿ ಹಾದುಹೋಗುವ ಪೆರಾಜೆ ಕೂರ್ನಡ್ಕ ರಸ್ತೆ ಕೆಲವೆಡೆ ತೀರ ಹದಗೆಟ್ಟಿದ್ದು ಜನಪ್ರತಿನಿಧಿಗಳು ಹಾಗೂ ಸ್ಥಳೀಯಾಡಳಿತದ ನಿರ್ಲಕ್ಷ್ಯದಿಂದ ಈ ಭಾಗದ ನಿವಾಸಿಗಳು ಸಂಕಷ್ಟ ಅನುಭವಿಸುವಂತಾಗಿದೆ.‌
ಇದೀಗ ಗ್ರಾಮಸ್ಥರೇ ಸೇರಿ ಶ್ರಮದಾನ ನಡೆಸಿ ರಸ್ತೆಯನ್ನು ದುರಸ್ತಿ ಮಾಡಿದ್ದಾರೆ.‌ ಶ್ರಮದಾನದಲ್ಲಿ ಚಿದಾನಂದ ಮಾವಾಜಿ, ಸಂದೇಶ್ ಗರುಗುಂಜ, ಜಯಪ್ರಕಾಶ ಹೊದ್ದೆಟ್ಟಿ, ಅನಂತ ಗರುಗುಂಜ, ವಿನಯ ಗರುಗುಂಜ, ಪವಿತ್ರ ಗೂಡಿಂಜ, ಕಿರಣ ಗೂಡಿಂಜ, ಮೋಹನ್ ಅರಂಬೂರು, ಅರುಣ ಅರಂಬೂರು, ರಂಜಿತ್ ಕುಂದಲ್ಪಾಡಿ, ಪುರುಪೋತ್ತಮ ಗರುಗುಂಜ, ಭುವನೇಶ್ ಕುಡೆಕಲ್ಲು, ವಿನಯಕುಮಾರ್ ಗೂಡಿಂಜ, ಮೋಹನ್ ಪೆರುಮುಂಡ, ಹರೀಶ್ ಹೊನ್ನೇಡಿ, ದಾಮೋದರ ಕುಂದಲ್ಪಾಡಿ, ಸನತ್ ಮಾವಾಜಿ ಮತ್ತಿತರರು ಭಾಗವಹಿಸಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading