Ad Widget

ಸುಬ್ರಹ್ಮಣ್ಯ : ನೇಜಿ ನಾಟಿ ಮಾಡಿ ಖುಷಿಪಟ್ಟ ಕೆ.ಎಸ್.ಎಸ್. ಕಾಲೇಜಿನ ವಿದ್ಯಾರ್ಥಿಗಳು

ಸುಬ್ರಹ್ಮಣ್ಯ : ಸದಾ ಸಮವಸ್ತ್ರ ಧರಿಸಿ ಕಾಲೇಜಿನಲ್ಲಿ ಪಾಠ ಕೇಳುವ ವಿದ್ಯಾರ್ಥಿಗಳು ಕೆಸರು ತುಂಬಿದ ಗದ್ದೆಗೆ ಇಳಿದು ರೈತರಂತೆ ಕೈಯಲ್ಲಿ ನೇಜಿ ಹಿಡಿದು ನೇಜಿ ನಾಟಿ ಮಾಡಿ ಖುಷಿಪಟ್ಟರು.
ಕುಕ್ಕೆ ಶ್ರೀ ಸುಬ್ರಹ್ಮಣೇಶ್ವರ ಮಹಾ ವಿದ್ಯಾಲಯದ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗ, ಐಕ್ಯೂಎಸಿ ಘಟಕ ಆಶ್ರಯದಲ್ಲಿ ಭತ್ತ ಬೇಸಾಯ ರಕ್ಷಿಸುವಲ್ಲಿ ಯುವಜನತೆಯ ಪಾತ್ರ ಕಾರ್ಯಕ್ರಮದ ಅಂಗವಾಗಿ ನೇಜಿ ನಾಟಿ ಕಾರ್ಯಕ್ರಮ ಹಾಗೂ ಪ್ರಾತ್ಯಕ್ಷಿಕೆ ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಕಂದ್ರಪ್ಪಾಡಿ ಪ್ರೀತಮ್ ಮುಂಡೋಡಿ ಅವರ ಗದ್ದೆಯಲ್ಲಿ ನಡೆಯಿತು.

. . . . . . . . .


ಕೃಷಿಯ ಬಗ್ಗೆ ಆಸಕ್ತಿ ಬೆಳೆಯಲಿ
ವಿದ್ಯಾರ್ಥಿಗಳು ಕೇವಲ ಶೈಕ್ಷಣಿಕವಾಗಿ ಪಠ್ಯದ ವಿಚಾರಗಳ ಬಗ್ಗೆ ಚರ್ಚಿಸದೆ, ಪಠ್ಯೇತರ ವಿಚಾರಗಳನ್ನೂ ಕಲಿಯಬೇಕಿದೆ.
ಇತ್ತೀಚೆಗೆ ಗದ್ದೆಗಳು ಕಣ್ಮರೆಯಾಗುತ್ತಿದ್ದು, ಗದ್ದೆ ಕೃಷಿಯ ಬಗ್ಗೆ ಮಾಹಿತಿ ಇಂದಿನ ಮಕ್ಕಳಿಗೆ ತಿಳಿದಿಲ್ಲ .ಪ್ರಸ್ತುತ ಮಕ್ಕಳಿಗೆ ಗದ್ದೆ ಕೃಷಿ ಬಗ್ಗೆ ತಿಳಿಸುವ ಉದ್ದೇಶದ ಜತೆಗೆ ಕೃಷಿಯ ಬಗ್ಗೆ ಆಸಕ್ತಿ ಬೆಳೆಯಲು ನೇಜಿ ನಾಟಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ಕಾಲೇಜಿನ ಸುಮಾರು 45 ವಿದ್ಯಾರ್ಥಿಗಳು ನೇಜಿ ನಾಟಿ ಕಾರ್ಯದಲ್ಲಿ ಭಾಗವಹಿಸಿದ್ದರು.
ಪ್ರಾಂಶುಪಾಲ ಡಾ|ದಿನೇಶ್ ಪಿ.ಟಿ ಹಾಗೂ ವಾಣಿಜ್ಯ ಮತ್ತು ಉದ್ಯಮಾಡಳಿತ ವಿಭಾಗದ ಮುಖ್ಯಸ್ಥರಾದ ಲತಾ ಬಿ.ಟಿ ಅವರ ಮಾರ್ಗದರ್ಶನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪುಷ್ಪ ಡಿ , ಹಾಗೂ ಭರತ್ ಎಂ.ಎಲ್ ಸಂಯೋಜಿಸಿದ್ದರು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading