Ad Widget

ಕೊಲ್ಲಮೊಗ್ರು : ವೀಲ್ ಚೇರ್ ಹಸ್ತಾಂತರ

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಡಾ| ಡಿ.ವೀರೇಂದ್ರ ಹೆಗ್ಗಡೆ ಯವರ ಜನಮಂಗಲ ಕಾರ್ಯಕ್ರಮದ ಅಡಿಯಲ್ಲಿ ಫಲಾನುಭವಿಗಳಿಗೆ ವೀಲ್ ಚೇರ್ ವಿತರಣೆ ನಡೆಯಿತು.
ಸುಳ್ಯ ತಾಲೂಕಿನ ಕೊಲ್ಲಮೊಗ್ರು ಕಾರ್ಯಕ್ಷೇತ್ರದ “ಬಿ” ಒಕ್ಕೂಟದ ಸೌಭಾಗ್ಯ ಸಂಘದ ಸದಸ್ಯರಾದ ಲಲಿತಾ ರವರ ಪತಿ ಹುಕ್ರಪ್ಪ ಗೌಡ ಮಲ್ಲಾಜೆ ರವರಿಗೆ ಅನಾರೋಗ್ಯದಿಂದಾಗಿ ನಡೆದಾಡಲು ಕಷ್ಟವಾದ ಕಾರಣ ಸುಳ್ಯ ತಾಲೂಕು ಯೋಜನಾಧಿಕಾರಿಗಳಾದ ಮಾಧವ ಗೌಡ ರವರ ಮಾರ್ಗದರ್ಶನದಲ್ಲಿ ಸುಬ್ರಹ್ಮಣ್ಯ ವಲಯ ಮೇಲ್ವಿಚಾರಕರಾದ ಬಾಲಕೃಷ್ಣ ರವರ ಉಪಸ್ಥಿತಿಯಲ್ಲಿ ಜು.16 ರಂದು ಹುಕ್ರಪ್ಪ ಗೌಡ ರವರಿಗೆ ವೀಲ್ ಚೇರ್ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ವಲಯ ಒಕ್ಕೂಟದ ಅಧ್ಯಕ್ಷರಾದ ತೀರ್ಥರಾಮ ದೋಣಿಪಳ್ಳ, ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ನ ಸುಳ್ಯ ತಾಲೂಕು ಕಾರ್ಯದರ್ಶಿ ಸತೀಶ್.ಟಿ.ಎನ್, ಸುಬ್ರಹ್ಮಣ್ಯ ವಲಯ ಭಜನಾ ಪರಿಷತ್ ಅಧ್ಯಕ್ಷರಾದ ಚಂದ್ರಶೇಖರ ಕೊಂದಾಳ, “ಬಿ” ಒಕ್ಕೂಟದ ಅಧ್ಯಕ್ಷರಾದ ಹೇಮಂತ್ ದೋಲನಮನೆ, ಉಪಾಧ್ಯಕ್ಷರಾದ ಚಂದ್ರಶೇಖರ ಕೋನಡ್ಕ, ಕಾರ್ಯದರ್ಶಿ ಕಾರ್ತಿಕ್ ಅಡ್ನೂರುಮಜಲು, ಸೇವಾ ಪ್ರತಿನಿಧಿ ರೇಖಾ ಕಟ್ಟ ಹಾಗೂ ಸಂಘದ ಸದಸ್ಯರುಗಳಾದ ಮೀನಾಕ್ಷಿ, ಪ್ರೇಮಾ ಬಳ್ಳಡ್ಕ, ವಿಶಾಲಾಕ್ಷಿ, ಲಲಿತಾ ಮುಂತಾದವರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading