Ad Widget

ಬಿ.ಎಸ್.ಎನ್.ಎಲ್ ನೆಟ್ ವರ್ಕ್ ಸಮಸ್ಯೆ ಬಗೆಹರಿಸುವಂತೆ ಕೊಲ್ಲಮೊಗ್ರು ಬಿ.ಜೆ.ಪಿ ಬೂತ್ ಸಮಿತಿ ವತಿಯಿಂದ ಸಂಸದರಿಗೆ ಮನವಿ

ಜು.15 ರಂದು ಗುತ್ತಿಗಾರು ಗ್ರಾಮದ ನಡುಗಲ್ಲಿನಲ್ಲಿ ನಡೆದ ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಸಮಾವೇಶ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಕೊಲ್ಲಮೊಗ್ರು ಬಿ.ಜೆ.ಪಿ ಬೂತ್ ಸಮಿತಿಯ ಕಾರ್ಯಕರ್ತರು ಹಾಗೂ ಮುಳ್ಳುಬಾಗಿಲು, ಕಜ್ಜೋಡಿ, ಕರಂಗಲ್ಲು ಹಾಗೂ ಕಟ್ಟ ಭಾಗದ ಜನರು ಈ ಭಾಗದ ನೆಟ್ ವರ್ಕ್ ಸಮಸ್ಯೆಯನ್ನು ಬಗೆಹರಿಸುವಂತೆ ದ.ಕ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರಿಗೆ ಮನವಿ ಸಲ್ಲಿಸಿದರು.
“ಸುಳ್ಯ ತಾಲೂಕಿನ ಕೊಲ್ಲಮೊಗ್ರು ಗ್ರಾಮದ ಮುಳ್ಳುಬಾಗಿಲು ಎಂಬಲ್ಲಿ ನಿರ್ಮಾಣಗೊಂಡಿರುವ 4G ಬಿ.ಎಸ್.ಎನ್.ಎಲ್ ಟವರ್ ಸಮಸ್ಯೆಗೊಳಗಾಗಿದ್ದು, ಕೊಲ್ಲಮೊಗ್ರು ಗ್ರಾಮ ಪಂಚಾಯತ್ ವ್ಯಾಪ್ತಿ ಒಳಗೊಂಡಂತೆ ಮುಳ್ಳುಬಾಗಿಲು, ಕಜ್ಜೋಡಿ, ಕರಂಗಲ್ಲು ಹಾಗೂ ಕಟ್ಟ ಸೇರಿದಂತೆ ಈ ಟವರ್ ನ ವ್ಯಾಪ್ತಿಯಲ್ಲಿ ಸರಿಸುಮಾರು 3 ಸಾವಿರಕ್ಕೂ ಅಧಿಕ ಜನಸಂಖ್ಯೆ ಇದ್ದು, ಬಹುತೇಕರಲ್ಲಿ 2G ಮೊಬೈಲ್ ಫೋನ್ ಗಳಿದ್ದು, ಈ ಮೊಬೈಲ್ ಗಳಿಗೆ 4G ನೆಟ್ ವರ್ಕ್ ಲಭ್ಯವಾಗುವುದಿಲ್ಲ. ಅಲ್ಲದೇ ಈ ಭಾಗದ ಕೃಷಿಕರು ಆನೆಗಳು ಸೇರಿದಂತೆ ಇನ್ನಿತರ ಕಾಡುಪ್ರಾಣಿಗಳ ಹಾವಳಿಯಿಂದ ಪದೇ ಪದೇ ತೊಂದರೆಗೀಡಾಗುತ್ತಿದ್ದಾರೆ. ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳಿಗೆ ಹಾಗೂ ಕೃಷಿಕರಿಗೆ ದೈನಂದಿನ ವ್ಯವಹಾರಗಳಿಗೆ ದೂರವಾಣಿ ಸಂಪರ್ಕದ ಅವಶ್ಯಕತೆ ಇದ್ದು, ಪ್ರಸ್ತುತ ಮುಳ್ಳುಬಾಗಿಲು ಎಂಬಲ್ಲಿ ನಿರ್ಮಾಣಗೊಂಡಿರುವ ಬಿ.ಎಸ್.ಎನ್.ಎಲ್ ಟವರ್ 4G ಆಗಿದ್ದು, ಇದರ ನೆಟ್ ವರ್ಕ್ ವ್ಯಾಪ್ತಿ ತೀರಾ ಕಡಿಮೆ ಇದ್ದು, ಪರಿಸರದ ಎಲ್ಲಾ ಮನೆಗಳಿಗೂ ಕೂಡ ಸಮರ್ಪಕ ರೀತಿಯ ಸಂಪರ್ಕ ಸಾಧ್ಯವಾಗುತ್ತಿಲ್ಲ. ಆದ್ದರಿಂದ ಪ್ರಸ್ತುತ ಇರುವ 4G ಟವರ್ ಗೆ 2G/3G ಸಂಪರ್ಕ ಅಳವಡಿಸಿ ಕೊಡಬೇಕು ಅಥವಾ ಪ್ರಸ್ತುತ ಟವರ್ ಗೆ ಬದಲಿ ಕಂಪನಿಯ ನೆಟ್ ವರ್ಕ್ ಸಂಪರ್ಕವನ್ನು ಕೊಡಿಸಬೇಕು” ಎಂದು ಮನವಿ ಪತ್ರದಲ್ಲಿ ವಿನಂತಿಸಲಾಗಿದ್ದು, ಈ ಮನವಿ ಪತ್ರವನ್ನು ಜು.15 ರಂದು ನಡುಗಲ್ಲಿನಲ್ಲಿ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಸಂಸದರಿಗೆ ನೀಡಲಾಯಿತು.
ಈ ಸಂದರ್ಭದಲ್ಲಿ ಕೊಲ್ಲಮೊಗ್ರು ಬಿ.ಜೆ.ಪಿ ಬೂತ್ ಸಮಿತಿಯ ಕಾರ್ಯಕರ್ತರು ಹಾಗೂ ಈ ಭಾಗದ ಜನರು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading