Ad Widget

ನಡುಗಲ್ಲು : ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಭೇಟಿ ಹಾಗೂ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭ

ಅಡಿಕೆ ಹಳದಿ ರೋಗ ಸಮಸ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸಿ ಬಾಧಿತ, ನಷ್ಟ ಹಾಗೂ ನಾಶವಾದ ಪ್ರದೇಶಗಳ ಬಗ್ಗೆ ವರದಿ ತಯಾರಿಸಲು ಹೇಳಲಾಗಿದೆ : ಕ್ಯಾಪ್ಟನ್ ಬ್ರಿಜೇಶ್ ಚೌಟ

ಜು.15 ರಂದು ದಕ್ಷಿಣ ಕನ್ನಡ ಜಿಲ್ಲಾ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟರವರು ಸುಳ್ಯ ತಾಲೂಕಿನ ಗುತ್ತಿಗಾರು ಗ್ರಾಮದ ನಡುಗಲ್ಲಿಗೆ ಬಂದಿದ್ದು, ಭಾರತೀಯ ಜನತಾ ಪಾರ್ಟಿ ಸುಳ್ಯ ಮಂಡಲ, ಸುಳ್ಯ ವಿಧಾನಸಭಾ ಕ್ಷೇತ್ರದ ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕಾರ್ಯಕರ್ತರ ಭೇಟಿ ಮಾಡಿದ ಸಂಸದರು ನಂತರ ಸಾರ್ವಜನಿಕ ಅಹವಾಲು ಸ್ವೀಕಾರ ಸಮಾರಂಭದಲ್ಲಿ ಸಾರ್ವಜನಿಕ ಅಹವಾಲುಗಳನ್ನು ಸ್ವೀಕರಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಕ್ಯಾಪ್ಟನ್ ಬ್ರಿಜೇಶ್ ಚೌಟ ರವರು “ಈ ಭಾಗದಲ್ಲಿ ರಸ್ತೆ ಸಮಸ್ಯೆ ಸಾಕಷ್ಟಿದೆ. ರಸ್ತೆ ಅಭಿವೃದ್ಧಿ ವಿಚಾರವಾಗಿ ಹೇಳುವುದಾದರೆ ರಸ್ತೆ ಅಭಿವೃದ್ಧಿ ಆಗಿದೆ ಎಂದು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಕೆ ಆಗಿದ್ದು, ಹಾಗಾಗಿ ನಮ್ಮ ಮಲೆನಾಡು ಪ್ರದೇಶದ ಈ ಭಾಗಕ್ಕೆ ಆ ವರದಿ ತೊಂದರೆ ಕೊಡುತ್ತಿದೆ” ಎಂದರು. ಮುಂದುವರಿದು ಮಾತನಾಡಿದ ಸಂಸದರು “ಆನೆ ದಾಳಿ ಸಮಸ್ಯೆಗಳನ್ನು ಪರಿಹರಿಸಲು ಆನೆ ಪಾರ್ಕ್ ನಿರ್ಮಿಸಲು ಡಿಮಾಂಡ್ ಇಟ್ಟಿದ್ದೇವೆ. ಮಾನವ ಹಾಗೂ ಪ್ರಾಣಿಗಳ ಸಂಘರ್ಷ ತಪ್ಪಿಸುವುದು ಕಷ್ಟ” ಎಂದು ಹೇಳುತ್ತಾ “ಸಂಪಾಜೆ-ಮಾಣಿ ರಸ್ತೆ ಡಿ.ಪಿ.ಆರ್ ಮಾಡಲಾಗುತ್ತಿದೆ. ರೈಲ್ವೆಗೆ ಸಂಬಂಧಿಸಿದಂತೆ ಹಲವು ಕಡೆಗಳಲ್ಲಿ ಕ್ರಾಸಿಂಗ್ ಸಮಸ್ಯೆ ನಿವಾರಿಸಲು ರೈಲ್ವೆ ಅಧಿಕಾರಿಗಳನ್ನು ಇಲ್ಲಿಗೆ ಕರೆಯುತ್ತೇವೆ. ಹಾಗೇಯೇ ಅಡಿಕೆ ಹಳದಿ ರೋಗ ಸಮಸ್ಯೆಯ ಬಗ್ಗೆ ಬೇರೆ ಬೇರೆ ವಿಧಗಳಲ್ಲಿ ಮಾಹಿತಿ ಸಂಗ್ರಹಿಸಿ ಬಾಧಿತ ಪ್ರದೇಶಗಳು, ಆಗಿರುವ ನಷ್ಟ ಹಾಗೂ ಅಡಿಕೆ ಬೆಳೆ ನಾಶವಾದ ಬಗ್ಗೆ ವರದಿ ತಯಾರಿಸಲು ಹೇಳಲಾಗಿದೆ. ಬಳಿಕ ಪ್ಯಾಕೇಜ್ ನೀಡುವ ಬಗ್ಗೆ ತಿಳಿಸಲಾಗುವುದು” ಎಂದ ಸಂಸದರು “ಕಾರ್ಯಕರ್ತರನ್ನು ಬಿಟ್ಟು ನಾವು ಯಾವುದೂ ಅಲ್ಲ, ರಾಷ್ಟ್ರದ ಹಿತಕ್ಕಾಗಿ ಕಾರ್ಯಕರ್ತರ ಪ್ರೇರಣೆಯಲ್ಲಿಯೇ ಕೆಲಸ ಮಾಡುತ್ತೇನೆ” ಎಂದರು.
ನಡುಗಲ್ಲು ಯುವಕ ಮಂಡಲದ ಸಭಾಂಗಣದಲ್ಲಿ ನಡೆದ ಈ ಸಮಾರಂಭದ ಅಧ್ಯಕ್ಷತೆಯನ್ನು ಬಿ.ಜೆ.ಪಿ ಸುಳ್ಯ ಮಂಡಲದ ಅಧ್ಯಕ್ಷರಾದ ವೆಂಕಟ್ ವಳಲಂಬೆ ವಹಿಸಿದ್ದರು.
ವೇದಿಕೆಯಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕರಾದ ಕು| ಭಾಗೀರಥಿ ಮುರುಳ್ಯ, ಮಾಜಿ ಸಚಿವರಾದ ಎಸ್.ಅಂಗಾರ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ವೆಂಕಟ್ ದಂಬೆಕೋಡಿ, ಬಿ.ಜೆ.ಪಿ ಸುಳ್ಯ ಮಂಡಲದ ನಿಕಟಪೂರ್ವ ಅಧ್ಯಕ್ಷರಾದ ಹರೀಶ್ ಕಂಜಿಪಿಲಿ, ಗುತ್ತಿಗಾರು ಮಹಾಶಕ್ತಿ ಕೇಂದ್ರದ ಕೃಷ್ಣಯ್ಯ ಮೂಲೆತೋಟ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ಎ.ವಿ ತೀರ್ಥರಾಮ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ, ಸುಳ್ಯ ಬಿ.ಜೆ.ಪಿ ಯುವ ಮೋರ್ಚಾ ಅಧ್ಯಕ್ಷರಾದ ಶ್ರೀಕಾಂತ್ ಮಾವಿನಕಟ್ಟೆ, ವಿನಯ್ ಕುಮಾರ್ ಕಂದಡ್ಕ, ಪ್ರದೀಪ್ ಕುಮಾರ್ ಮನವಳಿಕೆ, ಆರ್.ಕೆ ಭಟ್, ಚಂದ್ರಶೇಖರ ಪನ್ನೆ, ಗಿರೀಶ್ ಆಚಾರ್ಯ ಪೈಲಾಜೆ ಹಾಗೂ ಚಂದ್ರಶೇಖರ ಬಾಳುಗೋಡು ಉಪಸ್ಥಿತರಿದ್ದರು.(ವರದಿ : ಉಲ್ಲಾಸ್ ಕಜ್ಜೋಡಿ)

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading