Ad Widget

“ಪರಿಸರ ಸಂರಕ್ಷಣೆ ನಮ್ಮೆಲ್ಲರ ಹೊಣೆ” : ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ

ಸುಬ್ರಹ್ಮಣ್ಯದಲ್ಲಿ ಪರಿಸರ ಉಳಿಸಿ ಅಭಿಯಾನಕ್ಕೆ ಚಾಲನೆ

ಸುಬ್ರಹ್ಮಣ್ಯ ಜುಲೈ 11: ಜಸ್ಟಿಸ್ ಕೆ.ಎಸ್ ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ, ಎ.ಬಿ ಶೆಟ್ಟಿ ಸ್ಮಾರಕ ದಂತ ಮಹಾವಿದ್ಯಾಲಯ ದೇರಳಕಟ್ಟೆ ಮಂಗಳೂರು ಇವರು ಸುಬ್ರಹ್ಮಣ್ಯದ ಸದಾನಂದ ವೈದ್ಯಕೀಯ ಮತ್ತು ದಂತ ಆರೋಗ್ಯ ಕೇಂದ್ರ, ಶ್ರೀ ಸುಬ್ರಹ್ಮಣ್ಯ ಮಠ, ಲಯನ್ಸ್ ಕ್ಲಬ್, ರೋಟರಿ ಕ್ಲಬ್, ಸೀನಿಯರ್ ಚೇಂಬರ್, ಡಾl ರವಿ ಕಕ್ಕೆಪದವು ಸಮಾಜ ಸೇವಾ ಟ್ರಸ್ಟ್, ಅರಣ್ಯ ಇಲಾಖೆ, ಇನ್ನರ್ ವೀಲ್ಸ್ ಕ್ಲಬ್ ಇವುಗಳ ಜಂಟಿ ಆಶ್ರಯದಲ್ಲಿ  ಗುರುವಾರ ಸುಬ್ರಹ್ಮಣ್ಯದ ಸದಾನಂದ ಆಸ್ಪತ್ರೆಯ ವಠಾರದಲ್ಲಿ “ಗಿಡ ಬೆಳೆಸಿ ಪರಿಸರ ಉಳಿಸಿ” ಅಭಿಯಾನವನ್ನು ಕೈಗೊಳ್ಳಲಾಯಿತು.
ಅಭಿಯಾನವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಸುಬ್ರಹ್ಮಣ್ಯ ಮಠದ ಶ್ರೀ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ “ಇಂದು ನಾವು ಸ್ವಚ್ಛ ಗಾಳಿಯನ್ನು ಸೇವಿಸುತ್ತಿದ್ದೇವೆ, ಸ್ವಚ್ಛ ಆಹಾರವನ್ನು ಪಡೆಯುತ್ತಿದ್ದೇವೆ, ಸ್ವಚ್ಛ ಪ್ರದೇಶದಲ್ಲಿ ಇದ್ದೇವೆ ಅಂದರೆ ಇದಕ್ಕೆಲ್ಲ ಮುಖ್ಯ ಕಾರಣ ನಮ್ಮ ಪರಿಸರ. ನಾವು ಪ್ರತೀ ವರ್ಷ ಗಿಡವನ್ನು ನೆಡುತ್ತೇವೆ. ಆದರೆ ಅದರ ಪೋಷಣೆ, ಸಂರಕ್ಷಣೆ ಅತಿ ಅಗತ್ಯ. ಆದ್ದರಿಂದ ನಾವೆಲ್ಲರೂ ಪರಿಸರದ ಬಗ್ಗೆ ವಿಶೇಷ ಕಾಳಜಿ ವಹಿಸಿ ಅದರ ಸಂರಕ್ಷಣೆಯನ್ನು ಮಾಡೋಣ” ಎಂದು ನುಡಿದರು.
ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ನಿಟ್ಟೆ ಕೆ.ಎಸ್ ಹೆಗ್ಡೆ ಯುನಿವರ್ಸಿಟಿಯ ವೈಸ್ ಚಾನ್ಸಲರ್ ಡಾl ಸತೀಶ್ ಭಂಡಾರಿ  ಮಾತನಾಡುತ್ತಾ “ನಾವು ಪ್ರತಿ ವರ್ಷದಂತೆ ಈ ವರ್ಷವೂ ಕೂಡ ಸದಾನಂದ ಆಸ್ಪತ್ರೆಯ ವಠಾರದಲ್ಲಿ ವನಮಹೋತ್ಸವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಇದರಿಂದ ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದರೊಂದಿಗೆ  ಪರಿಸರವನ್ನು ಉಳಿಸಿ ಬೆಳೆಸುವ ಬಗ್ಗೆ ನಾವೆಲ್ಲರೂ ಕಂಕಣಭದ್ಧರಾಗೋಣ” ಎಂದರು.
ಈ ಸಂದರ್ಭದಲ್ಲಿ ನಿಟ್ಟೆ ರೂರಲ್ ಹೆಲ್ತ್ ಸೆಂಟರ್ ಕ್ಷೇಮದ ಸಂಯೋಜಕ ಡಾl ರಾಘವೇಂದ್ರ ಹುಚ್ಚಣ್ಣನವರ್ , ನಿಟ್ಟೆ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥೆ ಡಾ.ಹೌದ್ರಿ ಡಿ.ಕ್ರೂಸ್, ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ಹರೀಶ್ ಇಂಜಾಡಿ, ಸದಸ್ಯರಾದ ಅಶೋಕ್ ನೆಕ್ರಾಜೆ, ಲಯನ್ಸ್ ಪ್ರಾಂತೀಯ ಅಧ್ಯಕ್ಷ ಪ್ರೊಫೆಸರ್.ಕೆ.ಆರ್ ಶೆಟ್ಟಿಗಾರ್, ಪೂರ್ವಾಧ್ಯಕ್ಷರಾದ ರಾಮಚಂದ್ರ ಪಳಂಗಾಯ, ಡಾl ರವಿ ಕಕ್ಕೆಪದವು, ಸುಬ್ರಹ್ಮಣ್ಯ ಕುಕ್ಕೆ ಶ್ರೀ ಸೀನಿಯರ್ ಚೇಂಬರ್ ನ ಗೋಪಾಲ ಎಣ್ಣೆಮಜಲು, ರೋಟರಿ ಕ್ಲಬ್ ನ ನಿಕಟ ಪೂರ್ವಾಧ್ಯಕ್ಷರಾದ ಚಂದ್ರಶೇಖರ ನಾಯರ್, ಸದಾನಂದ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ವಿಕ್ರಂ ಶೆಟ್ಟಿ, ದಂತ ವೈದ್ಯರಾದ ಚರಣ್ ಶೆಟ್ಟಿ, ಸದಾನಂದ ಆಸ್ಪತ್ರೆಯ ಸಿಬ್ಬಂದಿ ವರ್ಗದವರು, ಅರಣ್ಯ ಇಲಾಖೆಯವರು, ಸಾರ್ವಜನಿಕರು ಉಪಸ್ಥಿತರಿದ್ದರು.
ಇನ್ನರ್ ವೀಲ್ ಕ್ಲಬ್ ನ ವಿಮಲಾ ರಂಗಯ್ಯ ಸ್ವಾಗತಿಸಿ, ಸದಾನಂದ ಆಸ್ಪತ್ರೆ ಸಿಬ್ಬಂದಿ ಮೋಹನ ಪಳ್ಳಿಗದ್ದೆ ವಂದಿಸಿದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading