Ad Widget

ನಾಳೆ(ಜು.01) ಕುಕ್ಕೆ ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ನ ಪದಗ್ರಹಣ ಸಮಾರಂಭ

ಸುಬ್ರಹ್ಮಣ್ಯ : ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ 2025-26ನೇ ಸಾಲಿನ  ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಏನಕಲ್ಲು ಕೃಷಿ ಪತ್ತಿನ ಸಹಕಾರಿ ಸಂಘದ ಸಭಾಭವನದಲ್ಲಿ ಮಂಗಳವಾರ ಸಂಜೆ ನಡೆಯಲಿರುವುದು.
ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಜಿಲ್ಲೆ 317 ಡಿ ಇದರ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಗೋವರ್ಧನ ಶೆಟ್ಟಿ ಉಪಸ್ಥಿತರಿರಲಿದ್ದಾರೆ.
ನೂತನ ಅಧ್ಯಕ್ಷರಾಗಿ ವಿಮಲಾ ರಂಗಯ್ಯ, ಕಾರ್ಯದರ್ಶಿಯಾಗಿ ಗಾಯತ್ರಿ ಕೃಷ್ಣಕುಮಾರ್ ಹಾಗೂ ಖಜಾಂಜಿಯಾಗಿ ಭಾರತಿ ದಿನೇಶ್ ಆಯ್ಕೆಯಾಗಿದ್ದು, ನಿಕಟಪೂರ್ವ ಅಧ್ಯಕ್ಷರಾಗಿ ರಾಜೇಶ್.ಎನ್.ಎಸ್, ಪ್ರಥಮ ಉಪಾಧ್ಯಕ್ಷರಾಗಿ ವಿಷ್ಣು ಪಾತಿಕಲ್ಲು, ದ್ವಿತೀಯ ಉಪಾಧ್ಯಕ್ಷರಾಗಿ ಕೃಷ್ಣಕುಮಾರ್ ಬಾಳುಗೋಡು, ಕ್ಲಬ್ ಆಡಳಿತಾಧಿಕಾರಿಗಳಾಗಿ ಲ| ರಾಮಚಂದ್ರ ಪಳಂಗಾಯ, ಉಳಿದಂತೆ ಪದಾಧಿಕಾರಿಗಳಾಗಿ ಡಾ.ಶಿವಕುಮಾರ್ ಹೊಸೊಳಿಕೆ, ದಿನೇಶ್ ಮೊಗ್ರ, ಪ್ರಕಾಶ್ ಶೆಟ್ಟಿ, ಮೋಹನ್ ದಾಸ್ ರೈ, ಮಾಧವ ದೇವರಗದ್ದೆ, ದೀಪಕ್ ನಂಬಿಯಾರ್, ಬಿ.ಓ.ಡಿ ಸದಸ್ಯರಾಗಿ ರಂಗಯ್ಯ ಶೆಟ್ಟಿಗಾರ್, ದೀಪಕ್.ಎಚ್‌.ಬಿ, ಬಿಪಿನ್ ಜಾಕೆ ಹಾಗೂ ನವೀನ್ ಶೆಟ್ಟಿ ಆಯ್ಕೆ ಆಗಿದ್ದಾರೆ.
ಸಮಾರಂಭದಲ್ಲಿ ಸರ್ವೀಸ್ ಆಕ್ಟಿವಿಟಿಯಾಗಿ ಮರದಾಳ ಜೀವನ್ ಜ್ಯೋತಿ ವಿಶೇಷ ಮಕ್ಕಳ ಶಾಲೆಗೆ ಮಧ್ಯಾಹ್ನದ ಅನ್ನದಾನಕ್ಕಾಗಿ ರೂ. 10,000/-  ಹಾಗೂ ಸುಬ್ರಹ್ಮಣ್ಯದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯ  ಸ್ಕೌಟ್ಸ್ ಹಾಗೂ ಗೈಡ್ಸ್ ವಿದ್ಯಾರ್ಥಿಗಳಿಗೆ ಯೂನಿಫಾರ್ಮ್ ಆಗಿ ರೂ.10,000/- ರೂ. ಗಳ ಕೊಡುಗೆಯನ್ನು ನೀಡಲಾಗುವುದು ಎಂದು ಸಂಘಟಕರು ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading