

ಬೇಸಿಗೆಯ ರಜೆಯೀಗ ಮುಗಿಯುತ್ತಾ ಬಂದಿದೆ, ಶಾಲೆಗಳಲ್ಲಿ ಮತ್ತೆ ಮಕ್ಕಳ ಕಲರವ ಕೇಳಿಸುವ ಸಮಯ ಇದೀಗ ಹತ್ತಿರವಾಗಿದೆ…
ಎರಡು ತಿಂಗಳುಗಳ ಸುಧೀರ್ಘ ರಜೆಯದು ಕಣ್ಮುಚ್ಚಿ ಬಿಡುವಷ್ಟರಲ್ಲಿ ಮುಕ್ತಾಯಗೊಂಡಿದೆ, ಸ್ನೇಹಿತರ ಜೊತೆಗೂಡಿ ಆಟಗಳ ಆಡುತ್ತಾ ಪಾಠಗಳ ಕಲಿಯುವ ಸಮಯವೀಗ ಮತ್ತೆ ಮರಳಿ ಬಂದಿದೆ…
ರಜೆಯ ದಿನಗಳ ಮೆಲುಕನ್ನು ಹಾಕುತ್ತಾ, ತಂದೆ-ತಾಯಿಯ ಆಶೀರ್ವಾದವ ಪಡೆಯುತ್ತಾ ಪುಸ್ತಕದ ಚೀಲವನ್ನು ಬೆನ್ನಿಗೆ ಹಾಕಿ ಸಾಗೋಣ ಮತ್ತೆ ಶಾಲೆಯ ಕಡೆಗೆ…
ಗುರುಗಳು ಕಲಿಸುವ ಪಾಠಗಳ ಗಮನವಿಟ್ಟು ಕೇಳುತ್ತಾ, ಪ್ರತಿದಿನವೂ ಮನಸ್ಸಿಟ್ಟು ಅಭ್ಯಾಸ ಮಾಡುತ್ತಾ ಸಾಗೋಣ ನಾವು ಬದುಕಿನಲ್ಲಿ ಯಶಸ್ಸಿನ ಕಡೆಗೆ…✍️ಉಲ್ಲಾಸ್ ಕಜ್ಜೋಡಿ