Ad Widget

ಕಥಾ ಸಂಕಲನ “ಇದು ಎಂಥಾ ಲೋಕವಯ್ಯಾ” ಅವಲೋಕನ- ವಿಮಲಾರುಣ ಪಡ್ಡoಬೈಲು

ಶ್ರೀ ಪಿ. ಜಿ ಅಂಬೆಕಲ್ ರವರು ನಿವೃತ್ತ ಮುಖ್ಯಶಿಕ್ಷಕರಾಗಿದ್ದು, “ಇದು ಎಂಥಾ ಲೋಕವಯ್ಯಾ” ಅವರು ರಚಿಸಿದ ಐದನೇ ಕೃತಿ ಯಾಗಿದೆ. ಈ ಕಥಾ ಸಂಕಲನದಲ್ಲಿ ಒಟ್ಟು ಹದಿನೇಳು ಕಥೆಗಳಿವೆ. ಕಥಾ ಸಂಕಲನಕ್ಕೆ ಕೊಟ್ಟ ಶೀರ್ಷಿಕೆಯ ಕಥೆ ಈ ಸಂಕಲನದಲ್ಲಿ ಇಲ್ಲದಿದ್ದರೂ, ಈ ಎಲ್ಲ ಕಥೆಗಳ ಮೂಲಕ ಕಟ್ಟಿರುವ ಬದುಕಿನ ಬಿಂಬ ಈ ಶೀರ್ಷಿಕೆಗೆ ತಕ್ಕಂತೆ ಸೂಕ್ತ ಅನಿಸುತ್ತದೆ.
ಲೇಖಕರ ಬಾಳಿನ ಪಾಠಶಾಲೆಯ ಅನುಭವವು ಬಹುಪಾಲು ಕಥೆಗಳಲ್ಲಿ ಸ್ಪಷ್ಟವಾಗಿ ಕಾಣಿಸುತ್ತದೆ. ಅವರ ಕಥೆಗಳಲ್ಲಿ ಶಿಕ್ಷಕ ವೃತ್ತಿಯ ಮಹತ್ವ, ವಿದ್ಯಾರ್ಥಿಗಳೊಂದಿಗಿನ ನಿಕಟ ಸಂಬಂಧ, ಮತ್ತು ಗ್ರಾಮೀಣ ಬದುಕಿನ ಭಾವಚಿತ್ರಗಳು ಆಳವಾಗಿ ಮೂಡಿಬರುತ್ತವೆ. ಈ ಕಥೆಗಳಲ್ಲಿ ಸ್ತ್ರೀಯರನ್ನು ಶಕ್ತಿಯುತ ಹಾಗೂ ಗೌರವಪೂರ್ಣವಾಗಿ ಚಿತ್ರಿಸುವ ಲೇಖಕರ ದೃಷ್ಟಿಕೋನ ಪ್ರಶಂಸನೀಯವಾಗಿದೆ.

. . . . . . . . .

“ಬಣ್ಣ”ದ ಕಥೆಯ ಮುಖಾಂತರ. ಸಂಸ್ಕಾರ ಮತ್ತು ಶಿಷ್ಟಾಚಾರದ ಬಗ್ಗೆ ಅಧ್ಯಯನ ಮಾಡುವ ಈ ಕಥೆ, ಪ್ರಾರಂಭದಲ್ಲಿಯೇ ನೈತಿಕ ಸಂದೇಶ ನೀಡುತ್ತದೆ.
ಎಳವೆಯಲ್ಲಿ ಸಂಸ್ಕಾರದ ಕೊನರು ಹುಟ್ಟಿದಾಗ ದೇಶವಾಗಲಿ ವಿದೇಶವಾಗಲಿ ಅದೆಂದು ನಾಶವಾಗುವು ದಿಲ್ಲ. .ವಿದೇಶದಲ್ಲಿದ್ದ ಸಂಸ್ಕಾರಯುತ ಕುಟುಂಬವೊಂದರ ಬಾಳಿನ ಕತೆ, ಹಳ್ಳಿಯ ಶೈಲಾಳ ಜೀವನದಲ್ಲಿ ಬದಲಾವಣೆಯನ್ನು ತರುತ್ತದೆ. ಸುಸಂಸ್ಕೃತ ಶಿಕ್ಷಣ ಎಷ್ಟು ಮುಖ್ಯವೋ ಹಾಗೆಯೇ ಸಂಸ್ಕಾರಯುತ ನಡವಳಿಕೆಗಳು ಕೂಡ ಬಹು ಮುಖ್ಯ ಶುದ್ಧ ಮನಸ್ಸಿನ ಮಾದರಿಯನ್ನು ಲೇಖಕರು ಈ ಕಥೆಯ ಮೂಲಕ ಪ್ರಸ್ತುತಪಡಿಸಿದ್ದಾರೆ.
ಶ್ರೀಮಂತ- ಬಡವನೆಂಬ ಭಿನ್ನತೆಯನ್ನು ಮೀರಿ, ನೋವು ಹೇಗೆ ಎಲ್ಲರಿಗೂ ಒಂದೇ ರೀತಿಯಾಗಿ ತಟ್ಟುತ್ತದೆ. ಎಂಬುದನ್ನು “ಔದಾರ್ಯ” ಕಥೆ ಸಾರುತ್ತದೆ. ದುಃಖತಪ್ತ ಎರಡು ಮನಗಳ ತಾಕಲಾಟ, ಹಾಗು ನೋವಿನ ಮನ ಇನ್ನೊಬ್ಬರ ನೋವನ್ನು ಅರ್ಥೈಸಿಕೊಂಡು ಸಹಾಯ ಮಾಡುವ ಮನೋಭಾವನೆಯ ಮೌಲ್ಯವನ್ನು ಮನದಟ್ಟಾಗಿ ಮೂಡಿಸುತ್ತದೆ.
ಮುಗ್ಧಮಕ್ಕಳ ಮನಸ್ಸು ಹಲವಾರು ಕನಸು ಹೊತ್ತಿರುತ್ತವೆ.ಆದರೆ ತಾಂತ್ರಿಕ ಯುಗದಲ್ಲಿ ಅಫ್ಪ ಅಮ್ಮ ಸದಾ ಕೆಲಸದ ಒತ್ತಡದಿಂದ ಮಗುವಿನ ಮನಸ್ಸನ್ನು ಅರ್ಥೈಸಿಕೊಳ್ಳಲು ವಿಫಲವಾಗುತ್ತಿದ್ದಾರೆ. ಮುಗ್ಧ ಮಗುವಿನ ತೊಳಲಾಟವನ್ನು ಕೊರೋನ ಬಂದರು ಪರಿಹರಿಸಲು ಸಾಧ್ಯವಾಗಲಿಲ್ಲ. “ಕೊರೋನಕ್ಕೊಂದು ನಮಸ್ಕಾರ” ಈ ಕಥೆಯನ್ನು
ಇನ್ನಷ್ಟು ವಿವರವಾಗಿ ನಿರೂಪಿಸಿದರೆ ಕಥೆ ಇನ್ನಷ್ಟು ಪ್ರಭಾವಬೀರಬಹುದಾಗಿತ್ತು
“ಬುಗುರಿಯಾದ ಗುರು” ಕತೆಯ ಮುಖಾಂತರ ಪ್ರಾಮಾಣಿಕತೆಯ ಬೀಜ ಬಿತ್ತಿದರೆ ಪ್ರತಿಫಲ ಎಂದಾದರೂ ದಕ್ಕುತ್ತದೆ. ಶಿಕ್ಷಕರನ್ನು ವಿದ್ಯಾರ್ಥಿಗಳು ಹೆಚ್ಚು ಗಮನಿಸುತ್ತಾರೆ. ಮುಂದೆಯು ಅವರ ಕಾರ್ಯ ವೈಖರಿಗಳು ಮನದಲ್ಲಿ ಹಸಿರಾಗಿ ಇರುತ್ತದೆ. ಹಾಗೂ ಸ್ಮರಿಸುತ್ತಾರೆ.ಎಂಬ ಪ್ರಾಮಾಣಿಕತೆಯ ಸಂದೇಶ ಸಾರುತ್ತದೆ.
“ಪ್ರಾರಬ್ಧ ಕರ್ಮ” ಈ ಕಥೆಯು ಅನಿರೀಕ್ಷಿತ ಸಾವಿನಿಂದ ವಿದವೆಯಾಗಿ ಬಾಳುವ ಶಿಕ್ಷಕಿಯ ಸಂಕಷ್ಟ ಹಾಗೂ ಅಹಿತಕರ ಘಟನೆಗಳ ನಡುವೆ ಬದುಕಿನ ನೈಜತೆ ಸ್ಪಷ್ಟವಾಗುತ್ತದೆ.
ಹಳ್ಳಿ ಮಹಿಳೆ, ಅನಕ್ಷರಸ್ಥರಾದರು ಅವಳ ಹೃದಯ ವೈಶಾಲ್ಯತೆ , ಹೆಣ್ಣು ಮಕ್ಕಳ ಮೇಲಿನ ಗೌರವವನ್ನು ತೀವ್ರವಾಗಿ ಕಟ್ಟಿದ್ದಾರೆ.
”ಲೋಕೋ ಭಿನ್ನ ರುಚಿ” ಯಲ್ಲಿ ಬಾಡಿಗೆ ಮನೆಯ ದೇವರ ಗೂಡು ವಿಚಾರದಲ್ಲಿಹಲವು ಮನಗಳ
ಮನಸ್ಥಿತಿಯ ಬಗ್ಗೆ ಅರಿವಾಗುತ್ತದೆ. ಕೆಲವೊಮ್ಮೆ ಅವರ ಅಭಿರುಚಿಗೆ ತಕ್ಕಂತೆ ದೇವರ ಗುಡಿಯ ರೂಪವು ಬದಲಾಗುತ್ತದೆ.ಆದರೂ ಭಾವಗಳಿಗೆ ಧಕ್ಕೆ ಮಾಡದೆ.ಕಂಡು ಕಾಣದಂತೆ ಮೌನವಾಗಿರುವ ಪರಿಸ್ಥಿತಿ ಇಲ್ಲಿ ಕಾಣಬಹುದು.ಈ ಕಥೆ ಮನಸ್ಸಿನ ಸಂವೇದನೆಗಳ ಸೂಕ್ಷ್ಮ ಚಿತ್ರಣವಾಗಿದೆ.
ಹೆಣ್ಣಿಗೆ ಸಮಾನ ಗೌರವ ಕೊಟ್ಟು, ಕೊಂಕು ನುಡಿಯಿಂದ ಘಾಸಿಗೊಳಿಸದಂತೆ “ಕಸಿ ಚಿಗುರಿ” ನಲ್ಲಿಎಚ್ಚರಿಸಿದ್ದಾರೆ. “ಸಹಾಯ” ಕಥೆಯಲ್ಲಿ ಸಹಾಯ ಎಂಬ ನೆಪದಲ್ಲಿ ಮನುಷ್ಯನನ್ನು ಯಾಮಾರಿಸುವ ರೀತಿ ಹಣದ ಆಮಿಷಕ್ಕೆ ಬಲಿಯಾಗಿ ಅಮಾಯಕರ ಬಲಿ ಪಶುವಾಗಿಸುವುದು. ಇಲ್ಲ ಸಲ್ಲದ ದುರಾಶೆಗಳನ್ನು ಹುಟ್ಟಿಸಿ ಇದ್ದದ್ದನ್ನು ದೋಚುವುದು ಸಮಾಜದಲ್ಲಿ ನಡೆವ ವಾಸ್ತವ ಚಿತ್ರಣಗಳು ಕಣ್ಣ ಮುಂದೆ ತೆರೆದು ಕೊಳ್ಳುತ್ತದೆ.”ಜೋಮಾಲೆ” ಕಥೆಯಲ್ಲಿ ತಾಯಿಯ ಭಾವಗಳು ಮತ್ತು ಮಗನ ಭಾವಗಳು ಒಂದಕ್ಕೊಂದು ವ್ಯತಿರಿಕ್ತವಾಗಿದೆ ತಾಯಿ ತ್ಯಾಗ ಮೂರ್ತಿ ನಿಷ್ಕಲ್ಮಶ ಪ್ರೀತಿ, ಅದರೆ ಮಕ್ಕಳದ್ದು ವ್ಯಾವಹಾರಿಕ ಪ್ರೀತಿ ಎಲ್ಲವನ್ನೂ ಲಾಭದ ದೃಷ್ಟಿಯಲ್ಲಿ ನೋಡುವ ಜನ ತಾನೊಂದು ಬಗೆದರೆ ದೈವ ಒಂದು ಬಗೆಯುವುದು ಎಂಬಂತಿದೆ.
ಸಂಚಾರ ನಿಭಿಡವಿರುವ ಗ್ರಾಮದಲ್ಲಿ ಹಾಗೂ ಸವಲತ್ತುಗಳು ಇಲ್ಲದ ಜಾಗವನ್ನು”ಅಂಡಮಾನ್”ಎನ್ನುವ ಆ ಗ್ರಾಮದಲ್ಲಿ ನಿಸರ್ಗದ ನಿಧಿಯಂತಿರುವ ನೈಸರ್ಗಿಕ ಸಂಪತ್ತಿನ ನಾಶ , ಬೇಲಿಯೇ ಎದ್ದು ಹೊಲ ಮೇಯುವ ಮನುಷ್ಯನ ಹೀನ ಮನೋಭಾವ “ಅಂಡಮಾನ್”ಕಥೆಯಲ್ಲಿ ಕಂಡುಬರುತ್ತದೆ.
ಮದುವೆಯ ದಿನದಂದು ಪ್ರಿಯಕರನೊಟ್ಟಿಗೆ ಕಾಣೆಯಾದ ಹೆಣ್ಣು ಮಗಳು ಗಂಡ ದುಶ್ಚಟಗಳಿಗೆ ತುತ್ತಾಗಿ. ಹೆಣ್ಣು ವಿಧವೆಯಾದಾಗ ಹಿಂದಿನ
ಯುವಕ ಬಾಳು ನೀಡಿದ. ಈ ಹೃದಯವೈಶಾಲ್ಯತೆಯನ್ನು. “ವಧು ಬೇಕಾಗಿದೆ” ಈ ಕಥಾ ಹಂದರದಲ್ಲಿ ಕಾಣಬಹುದು.
ಸಂಪಾದಿಸುವ ಮಗ ತಂದೆ ತಾಯಿಯನ್ನು ನಿರ್ಲಕ್ಷಿಸಿದರೆ ಆಗುವ ಯಾತನೆಯನ್ನು ಸೂಕ್ಷ್ಮ ಮಾತಿನಿಂದ ನೋವಿನ ಇಂಗಿತವನ್ನು ತೆರೆದಿಟ್ಟಿದ್ದಾರೆ.ಹಿರಿಯರ ಇಚ್ಛೆ ಮತ್ತು ಮಕ್ಕಳ ಅಭಿರುಚಿ ಭಿನ್ನವಾಗಿರುತ್ತದೆ.ಅಂತಹ ಭಿನ್ನತೆಯನ್ನು ಕಥೆಯಲ್ಲಿ ಕಾಣಬಹುದು.
ಶಿಕ್ಷಕವೃತಿ ಯ ಬಗೆಗಿನ ಅಭಿಮಾನ ಹಾಗು ವಿದ್ಯಾರ್ಥಿ ಗಳಿಗೆ ಕಲಿಸುವ ಸಂಸ್ಕಾರ ಮತ್ತು ಮೌಲ್ಯಯುತವಾದ ಪ್ರೀತಿ ಸಂಬಂಧ ಗಳ ಅರಿವು, ಹಣದಿಂದ ಇದೆಲ್ಲವನ್ನೂ ಕೊಂಡುಕೊಳ್ಳಲು ಸಾಧ್ಯವಿಲ್ಲ. ಅದೆಷ್ಟೇ ಹಣವಿದ್ದರೂ ಹಣ ಜೀವ ಉಳಿಸುವುದಿಲ್ಲ ಮಾನವೀಯತೆ ಪ್ರೀತಿ ವಿಶ್ವಾಸಕ್ಕಿಂತ ಹಿರಿದಾದದ್ದು ಯಾವುದು ಇಲ್ಲ.”ಮೌಲ್ಯ” ಮುಖಾಂತರ ಅಮೂಲ್ಯ ಸಂದೇಶವಿದೆ.
ಬದುಕಿನಲ್ಲಿ ಎಲ್ಲವೂ ನಮ್ಮ ಇಚ್ಛೆಯಂತೆ ನಡೆಯುವುದಿಲ್ಲ ಎಂಬ ಕಠಿಣ ಸತ್ಯವನ್ನು”ತೀರದ ಬಯಕೆ” ಸಾರುತ್ತದೆ.
ಹೆಣ್ಣಿನ ಬೇನೆ ಮತ್ತು ಮಾನಸಿಕ ಪರಿಸ್ಥಿತಿ ಅವಳನ್ನು ದುರ್ಬಲಗೊಳಿಸಿದ್ದು. ಕುಟುಂಬದ ಕ್ಷೇಮಕ್ಕಾಗಿ ಸಾವಿಗೆ ಶರಣಾಗುವುದು. ಮನ ಮಿಡಿಯುತ್ತದೆ. ಪತ್ರದಲ್ಲಿದ್ದ ತುಮಲಗಳು ಸಾರ್ಥಕವಾಗದೆ
ಕಥೆಯು ನೋವಿನ ಎಳೆಯಲ್ಲಿ ಸಾಗುತ್ತಾ ಅಂತ್ಯದಲ್ಲಿಒಂದು ಸಣ್ಣ ನಗು ಮೂಡಿಸುತ್ತದೆ.

ಈ ಸಂಕಲನದ ಎಲ್ಲ ಕಥೆಗಳೂ ಜೀವನದ ನೈಜತೆ, ಮೌಲ್ಯಪೂರ್ಣ ನಡವಳಿಕೆ, ಸಂಬಂಧಗಳ ಭಾವನೆ, ಮಾನವೀಯತೆ ಮತ್ತು ಪ್ರಾಮಾಣಿಕತೆಯ ಸಂದೇಶಗಳನ್ನು ಪ್ರಸ್ತುತಪಡಿಸುತ್ತವೆ. ಭಾಷೆ ಸರಳ, ನೇರ ಮಾತುಗಳಲ್ಲಿ, ಓದುಗರಿಗೆ ಸ್ಪಷ್ಟವಾಗಿ ತಲುಪುವಂತಿದೆ,ಹಾಗು ಎಲ್ಲರಿಗೂ ಪಾಠವಾಗುವಂತಿದೆ. ಪ್ರಕೃತಿಯ ವರ್ಣನೆ, ಗ್ರಾಮೀಣ ಬದುಕಿನ ಚಿತ್ರಣ ಮತ್ತು ಮನುಷ್ಯನ ಅಂತರಂಗದ ಚಿತ್ರಣ ಈ ಕಥೆಗಳಲ್ಲಿ ಸಾಕಷ್ಟು ಪ್ರಬಲವಾಗಿದೆ.
ಕಥೆಗಳು ಇನ್ನಷ್ಟು ಕುತೂಹಲ, ಸಂವೇದನೆ ಹಾಗೂ ತೀವ್ರತೆ ಹೊಂದಿದ್ದರೆ ಸಂಕಲನದ ತೂಕ ಇನ್ನಷ್ಟು ಹೆಚ್ಚಾಗುತ್ತಿತ್ತು. ಆದರೂ, ಕನ್ನಡ ಸಾಹಿತ್ಯ ಲೋಕಕ್ಕೆ ಶ್ರೀ ಪಿ.ಜಿ. ಅಂಬೆಕಲ್ ರವರು ನೀಡಿರುವ ಈ ಕಥಾ ಸಂಕಲನ ಒಂದು ಅಮೂಲ್ಯ ಕೊಡುಗೆ. ಇಂತಹ ಇನ್ನೂ ಹೆಚ್ಚಿನ ಕೃತಿಗಳನ್ನು ಅವರು ಸೃಷ್ಟಿಸಲಿ ಎಂಬ ಸದುದ್ದೇಶದೊಂದಿಗೆ ಹೃತ್ಪೂರ್ವಕ ಅಭಿನಂದನೆಗಳು.

        *ವಿಮಲಾರುಣ ಪಡ್ಡoಬೈಲು*

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!