
ರೆನ್ಶಿ ಯೋಗ ಸಂಸ್ಥೆ ದುಬೈ ಯ.ಎ.ಇ, ಅವಿನಾಶ್ ಯೋಗ ಮತ್ತು ಏರೋಬಿಕ್ಸ್ ಸಂಸ್ಥೆ ಬೆಂಗಳೂರು ಇವುಗಳ ಸಹಯೋಗದೊಂದಿಗೆ ಮೇ.09 ರಿಂದ 12 ರವರೆಗೆ ದುಬೈಯಲ್ಲಿ ನಡೆದ ದುಬೈ ಅಂತರಾಷ್ಟ್ರೀಯ ಯೋಗ ಚಾಂಪಿಯನ್ ಶಿಪ್-2025 ಅಂತರಾಷ್ಟ್ರೀಯ ಮಟ್ಟದ ಯೋಗಾಸನ ಸ್ಪರ್ಧೆಯಲ್ಲಿ ಅಕ್ಷಯ ಬಾಬ್ಲುಬೆಟ್ಟು(ಏನೆಕಲ್ಲು) ಚಿನ್ನದ ಪದಕ ಗಳಿಸಿರುತ್ತಾರೆ.
ಇವರು ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಏನೆಕಲ್ಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 5ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಏನೇಕಲ್ಲು ನಿವಾಸಿ ಮೋಹನ್ ಕುಮಾರ್ ಹಾಗೂ ಶ್ರೀಮತಿ ದಿವ್ಯ ಕುಮಾರಿ ದಂಪತಿಗಳ ಪುತ್ರಿಯಾದ ಇವರು ನಿರಂತರ ಯೋಗ ಕೇಂದ್ರ ಏನೆಕಲ್ಲು ಇಲ್ಲಿನ ಯೋಗ ಶಿಕ್ಷಕರಾದ ಶರತ್ ಮರ್ಗಿಲಡ್ಕ ರವರಿಂದ ಯೋಗ ಶಿಕ್ಷಣದ ಮಾರ್ಗದರ್ಶನವನ್ನು ಪಡೆಯುತ್ತಿದ್ದಾರೆ.
ಊರಿನವರ ಸಹಕಾರದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ ಚಿನ್ನದ ಪದಕ ಗಳಿಸಿರುವುದು ಹೆತ್ತವರಿಗೆ ಹಾಗೂ ಊರಿನವರಿಗೆ ಸಂತೋಷವನ್ನು ತಂದುಕೊಟ್ಟಿದೆ.(ವರದಿ : ಉಲ್ಲಾಸ್ ಕಜ್ಜೋಡಿ)