
ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಅರ್ಜಿ ಆಹ್ವಾನಿಸಿ ಒಂದು ವರ್ಷ ಕಳೆದರೂ ಸಮಿತಿಯ ಸದಸ್ಯರ ನೇಮಕ ವಿಳಂಬ ಮಾಡಿರುವುದು, ಪಕ್ಷದ ಕಾರ್ಯಕರ್ತರಿಗೆ ಬೇಸರ ತಂದಿದೆ. ಆದರೆ ಇತ್ತೀಚೆಗೆ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ ಯವರ ಹೆಸರನ್ನು ಸೇರಿಸಿಕೊಂಡು ಸಮಿತಿಯ ಪಟ್ಟಿ ತಯಾರಾಗಿತ್ತು. ಇದು ಒಬ್ಬ ಸಮರ್ಥ ನಾಯಕನನ್ನು ಸೇರಿಸಿಕೊಂಡಿರುವುದು ಸುಳ್ಯದ ಕಾಂಗ್ರೆಸ್ ವಲಯದಲ್ಲಿ ಹುರುಪು ಮತ್ತು ಸಂತಸ ತಂದಿತ್ತು.
ಆದರೆ ಇದೀಗ ಹೊಸ ಪಟ್ಟಿ ಆದೇಶವಾಗಿ ಬರುವಾಗ ಎನ್ ಜಯಪ್ರಕಾಶ್ ರೈಯವರನ್ನು ಕೈಬಿಟ್ಟಿರುವುದು ನಿರಾಶದಾಯಕ ವಾಗಿದೆ. ಒಬ್ಬ ಜಿಲ್ಲಾ ನಾಯಕರಾಗಿರುವ, ಮತ್ತು ಪಕ್ಷದ ಶಿಸ್ತಿನ ಸಿಪಾಯಿಯಾಗಿರುವ ಇವರನ್ನು ಯಾವುದೇ ಮಾಹಿತಿ ನೀಡದೆ, ಯಾವ ಮಾನದಂಡದಲ್ಲಿ ಕೈಬಿಟ್ಟಿರುವುದು ಎಂಬುದು ಪ್ರಶ್ನೆಯಾಗಿದೆ. ಆದುದರಿಂದ ಜಯಪ್ರಕಾಶ್ ರೈ ಯವರನ್ನು ಸಮಿತಿಯಿಂದ ಕೈಬಿಟ್ಟಿರುವುದು ಅವರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಅಗೌರವ ತಂದಿದೆ ಎಂದು ಜಿಲ್ಲಾ ಕಾಂಗ್ರೆಸ್ ಎಸ್ ಟಿ ಘಟಕದ ಉಪಾಧ್ಯಕ್ಷ ಭವಾನಿಶಂಕರ್ ಕಲ್ಮಡ್ಕ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.