
ಓಡಬಾಯಿ ಮನೆತನದ ಸುಮಾರು 150 ವರ್ಷಗಳಷ್ಟು ಹಳೆಯದಾದ ದರ್ಮದೈವ ಧೂಮಾವತಿ,ಮೂಕಾಂಬಿಕಾ ಗುಳಿಗ, ಸಪರಿವಾರಾ ದೈವಸ್ಥಾನ ದ ಪುನಃಪ್ರತಿಷ್ಠೆ ಮೇ 1ನೆ ತಾರೀಕು ನಡೆಯಿತು, ಈ ಸಂದರ್ಭದಲ್ಲಿ ದೈವಗಳಿಗೆ ನೂತನ ಆಯುಧ ,ಮೊಗ ಇನ್ನಿತರ ಅಸ್ತ್ರಗಳ ಸಮರ್ಪಣೆ ನೆರವೇರಿತು ಇದರ ಅಂಗವಾಗಿ ಮೇ 08 ಮತ್ತು 09 ರಂದು ದರ್ಮದೈವ ಧೂಮಾವತಿ, ಗುಳಿಗ, ವರ್ಣರಾ ಪಂಜುರ್ಲಿ, ಕುಪ್ಪೆ ಪಂಜುರ್ಲಿ, ಕಲ್ಲುರ್ಟಿ, ಗುರು ಕಾರ್ನಾರ್, ಜ್ಯವತೆ, ಪೊಟ್ಟ ದೈವ, ಅಂಗಾರ ಬಾಕೂಡ ದೈವಗಳಿಗೆ ನೇಮ ನಡೆಯಿತು ರಾತ್ರಿ 12.30 ರಿಂದ ಮೂಕಾಂಬಿಕಾ ಗುಳಿಗ ದೈವದ ಅಗ್ನಿಸೇವೆ ನೆರವೇರಿತು , ಸೇರಿದ ಎಲ್ಲಾ ಭಕ್ತರಿಗೆ ಅನ್ನಸಂತರ್ಪಣೆ ನೀಡಲಾಯಿತು ಓಡಬಾಯಿ ಮನೆತನದ ಎಲ್ಲಾ ಸದಸ್ಯರು, ಸ್ಥಳೀಯರು ನೂರಾರು ಸಂಖ್ಯೆಯಲ್ಲಿ ಪಾಲ್ಗೊಂಡು ದೈವದ ಪ್ರಸಾದ ಸ್ವೀಕರಿಸಿದರು