
ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘ ಇದರ ವತಿಯಿಂದ ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆ ಇದರ ಸುಳ್ಯ ತಾಲೂಕಿನ ಗುತ್ತಿಗಾರು ವಲಯದ ಮೊಗ್ರದ ಅನುಗ್ರಹ ವಿಕಾಸ ವಾಹಿನಿ ಸ್ವ ಸಹಾಯ ಸಂಘದ ಸದಸ್ಯರಾದ ಗಿರಿಯಪ್ಪರವರು ಹೃದಯಾಘಾತದಿಂದ ಮೃತಪಟ್ಟಿದ್ದು, ಇವರ ಜೀವ ಭದ್ರತಾ ವಿಮಾ ಮೊತ್ತ ರೂ 95000 ದ ಚೆಕ್ ಅನ್ನು, ಅವರ ವಾರಿಸುದಾರರಾದ ನೀಲಾವತಿಯವರಿಗೆ ಸುಳ್ಯ ಸಹಕಾರಿಯ ಶಾಖಾ ವ್ಯವಸ್ಥಾಪಕರಾದ ಸಂತೋಷ್ ಕುಮಾರ್ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಓಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ತಾಲೂಕು ಮೇಲ್ವಿಚಾರಕಾರದ ಶ್ರಿಮತಿ ಗೀತಾ ಮತ್ತು ಗುತ್ತಿಗಾರು ವಲಯ ಸಂಯೋಜಕರಾದ ಶ್ರೀಮತಿ ಸವಿತ ಉಪಸ್ಥಿತರಿದ್ದರು.