Ad Widget

ಜಿಲ್ಲಾ ಉಸ್ತುವಾರಿ ಸಚಿವರನ್ನು& ಸ್ಪೀಕರ್ ರವರನ್ನು ಟೀಕೆ ಮಾಡುವುದು ಸರಿಯಲ್ಲ – ಬೊಳ್ಳೂರು, ದೇಶಕ್ಕಾಗಿ ಸೈನಿಕರು ನಡೆಸಿದ ಸಿಂಧೂರ ಅಟ್ಯಾಕ್ ಬಹಳ ಶ್ಲಾಘನೀಯ, ದ.ಕ.& ಉಡುಪಿ ಜಿಲ್ಲೆಯಲ್ಲಿ ಕೋಮು ದ್ವೇಷ ಹರಡಲು ಭಾಷಣ ಬಿಗಿಯುವ ನಾಯಕರ ನಡೆ ಖಂಡನೀಯ: ಸುಳ್ಯ ಯುವ ಕಾಂಗ್ರೆಸ್

. . . . . . . . .

ಸಾಂವಿಧಾನಿಕ ಪೀಠದಲ್ಲಿ ಕುಳಿತಿರುವ ವ್ಯಕ್ತಿ ಮುಸ್ಲಿಂ ಎಂಬ ಒಂದೇ ಕಾರಣಕ್ಕೆ ಶಾಸಕರಾದ ಹರೀಶ ಪೂಂಜ ಯು.ಟಿ.ಖಾದರ್ ರನ್ನು ನಿಂದಿಸಿರುವುದು ಸರಿಯಲ್ಲ . ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧವೂ ಬೆಳ್ತಂಗಡಿ ಶಾಸಕರು ಕೋಮು ಸಂಘರ್ಷ ಸೃಷ್ಟಿಸುವ ಹೇಳಿಕೆ ನೀಡುತ್ತಿದ್ದು ಇದು ಸರಿಯಾದ ಕ್ರಮವಲ್ಲ” ಎಂದು ಮೇ.7 ರಂದು ಸುಳ್ಯ ಪ್ರೆಸ್ ಕ್ಲಬ್ ನಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಾಧಾಕೃಷ್ಣ ಬೊಳ್ಳೂರು ಹೇಳಿದ್ದಾರೆ.

” ದೇವಾಲಯದ ವೇದಿಕೆಯಲ್ಲಿ ವಿಷ ಬೀಜ ಬಿತ್ತುವ ಕ್ರಮವು ಸಂಪೂರ್ಣ ಖಂಡನೀಯ. ಬೆಳ್ತಂಗಡಿ ಶಾಸಕರಾದ ಹರೀಶ್ ಪೂಂಜಾ ಉರಿವ ಜ್ವಾಲೆಗೆ ತುಪ್ಪ ಸುರಿಯುವ ಕೆಲಸ ಮಾಡುತ್ತಿದ್ದು ಇಡೀ ರಾಜ್ಯದಲ್ಲಿ ಯಾವುದೇ ಶಾಸಕರು ಇಂತಹ ಹೇಳಿಕೆ ಕೊಡುತ್ತಿಲ್ಲ, ಶಾಸಕರು, ಸಂಸದರು ಸರಕಾರವನ್ನು ಪ್ರಶ್ನೆ ಮಾಡಲಿ. ಆದರೆ ಹರೀಶ್ ಪೂಂಜಾರವರು ಮಾತ್ರ ದ್ವೇಷದ ಭಾಷಣ ಮಾಡುತ್ತಿದ್ದಾರೆ. ಒಂದು ಸಾವಾದರೆ ಸಾವಿನ ಮನೆಯಲ್ಲಿ ರಾಜಕಾರಣ ಮಾಡುವ ಕೆಲಸ ಪೂಂಜಾ ಮಾಡುತ್ತಿದ್ದಾರೆ. ಶಾಸಕ ಪೂಂಜರ ಮೇಲೆ 9 ಪ್ರಕರಣಗಳು ಇವೆ. ಅಲ್ಲದೇ ಸಮಾಜದಲ್ಲಿ ಅಶಾಂತಿ ಸೃಷ್ಟಿಸುವ ಕೇಸ್ ಗಳು ಹರೀಶ್ ಪೂಂಜಾರವರ ಮೇಲೆ ಇದೆ. ಇವರು ಒಬ್ಬ ಶಾಸಕ ಎಂದು ಒಪ್ಪಿಕೊಳ್ಳಲು ಸಾಧ್ಯವೇ ? ” ಎಂದು ಪ್ರಶ್ನಿಸಿದರು.

ಇತ್ತೀಚೆಗೆ ತೆಕ್ಕಾರಿನ ಗೋಪಾಲ ಕೃಷ್ಣ ದೇವಸ್ಥಾನದ ಸಭೆಯಲ್ಲಿ ಸಹ ಇವರ ದ್ವೇಷ ಭಾಷಣ ಮಾಡಿದ್ದಾರೆ. ಬೇರೆ ಧರ್ಮವನ್ನು ಅವಹೇಳನ ಮಾಡುವುದು, ಬೇರೆ ಧರ್ಮದ ಮಹಿಳೆಯರನ್ನು ಅವಹೇಳನ ಮಾಡುವುದು, ಅವರ ಪದ್ಧತಿಗಳನ್ನು ಅವಹೇಳನ ಮಾಡುವುದು, ಹಿಂದೂ ಧರ್ಮದಲ್ಲಿರುವ ವಸುದೈವ ಕುಟುಂಬಕಂ ಎಂಬ ಕಲ್ಪನೆಯನ್ನು ತಿರುಚುವುದು ಇವರ ಚಾಳಿಯಾಗಿದೆ” ಎಂದು ಬೊಳ್ಳೂರು ತರಾಟೆಗೆತ್ತಿಕೊಂಡರು.

ಸುಹಾಸ್‌ ಶೆಟ್ಟಿ ಹತ್ಯೆ ಘಟನೆಯ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಗೃಹ ಸಚಿವ ಜಿ. ಪರಮೇಶ್ವರ್ ಅಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿ ಜಿಲ್ಲೆಯಲ್ಲಿ ಶಾಂತಿ ಸುವ್ಯವಸ್ಥೆ ಬಗ್ಗೆ ಸಭೆ ನಡೆಸಿ, ಜನರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

ಪೋಲೀಸ್ ಇಲಾಖೆ ತಮ್ಮ ದಕ್ಷತೆಯನ್ನು ಮೆರೆದು ಕೂಡಲೇ ಆರೋಪಿಗಳನ್ನು ಬಂಧಿಸುವ ಕೆಲಸ ಮಾಡಿದ್ದಾರೆ. ತನಿಖೆ ಪ್ರಗತಿಯಲ್ಲಿದೆ.

ಆದರೆ ಈ ಹರೀಶ್ ಪೂಂಜಾ ಉಸ್ತುವಾರಿ ಸಚಿವರನ್ನು ನಿಂದಿಸುವ ಕೆಲಸ ಮಾಡುತ್ತಿದ್ದಾರೆ. ಆಡಳಿತಾತ್ಮಕವಾಗಿ ಪ್ರಶ್ನೆ ಮಾಡಲಿ. ಆದರೆ ಉಸ್ತುವಾರಿ ಸಚಿವರನ್ನು ನಿಂದಿಸುವ ಸಂದರ್ಭ ಅವರ ಧರ್ಮ ಪತ್ನಿಯನ್ನು ನಿಂದಿಸುವುದು ಸರಿಯೇ ? ಎಂದು ಬೊಳ್ಳೂರು ಪ್ರಶ್ನಿಸಿದರು.

ಬಿಜೆಪಿಯಲ್ಲಿ ಎಷ್ಟು ಜನ ನಾಯಕರು ಯಾರ್ಯಾರು ಅನ್ಯ ಧರ್ಮದವರನ್ನು ಮದುವೆ ಯಾಗಿದ್ದಾರೆ? ಅವರ ಮಕ್ಕಳನ್ನು ಯಾವ ಧರ್ಮದವರಿಗೆ ಮದುವೆ ಮಾಡಿಸಿದ್ದಾರೆ? ಪಟ್ಟಿ ಕೊಡಬೇಕಾ

ಷಾ ನವಾಜ್ ಹುಸೇನ್ ಯಾರು? ಅಬ್ಬಾಸ್ ಮಖಾರ್ ನಕ್ವಿ, ಸುಬ್ರಹ್ಮಣ್ಯ ಸ್ವಾಮಿ ಅಳಿಯ ಬಿಜೆಪಿಯ `ಉಕ್ಕಿನ ಮನುಷ್ಯ ಅಂತ ಕರೆದುಕೊಳ್ಳುವ ಹಿರಿಯ ನಾಯಕರ ಮಗಳು ಯಾರನ್ನು ಮದುವೆ ಯಾಗಿರುವುದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ ಇದೆಲ್ಲ ಬಿಚ್ಚಿ ಇಡಬೇಕಾ? ಆದರೆ ನಾವು ಈ ಬಗ್ಗೆ ಯಾವುದೇ ಹೇಳಿಕೆ ಕೊಡಲು ಹೋಗುವುದಿಲ್ಲ. ಏಕೆಂದರೆ ನಮ್ಮ ಭಾರತದಲ್ಲಿ ಯಾರೂ ಸಹ ಯಾವುದೇ ಧರ್ಮದ ವ್ಯಕ್ತಿಯನ್ನು ಮದುವೆ ಯಾಗಬಹುದು.

ನಮಗೆ ಸಂವಿದಾನ ಇದೆ. ಇದು ಇಲ್ಲಿಯ ಸಂಸ್ಕೃತಿ ಎಂದವರು ಹೇಳಿದರು.

ಯು ಟಿ ಖಾದರ್ ಅವರ ಬಗ್ಗೆ ಮಾತನಾಡುತ್ತಾರೆ. ಯು ಟಿ ಖಾದರ್ ರವರು ಅವರ ತಂದೆಯವರಂತೆ ಒಳ್ಳೆಯ ಕ್ರಿಯಾಶೀಲ ಶಾಸಕರಾಗಿ. ಮಂತ್ರಿಯಾಗಿ, ಈಗ ಈ ಜಿಲ್ಲೆಯಿಂದ 2ನೇ ವ್ಯಕ್ತಿಯಾಗಿ ಸಭಾಧ್ಯಕ್ಷರಾಗಿದ್ದಾರೆ. ಇವರು ಹಿಂದೂ ಧರ್ಮದ ಕಾರ್ಯಕ್ರಮಗಳಿಗೆ, ಜೈನ ಧರ್ಮದ, ಇಸ್ಲಾಂ ಧರ್ಮದ, ಕ್ರೈಸ್ತ ಧರ್ಮದ ಕಾರ್ಯಕ್ರಮಗಳಿಗೆ ಭೇಟಿ ಕೊಡುತ್ತಾರೆ. ಭೂತಾರಾಧನೆಗೆ ಹೋಗುತ್ತಾರೆ. ದೇವಾಲಯಗಳಿಗೆ ಹೋಗುತ್ತಾರೆ. ಇವರು ಎಲ್ಲಾ ಕಡೆಗೂ ಹೋಗಿ ಜನಸಾಮಾನ್ಯರೊಂದಿಗೆ ಬೆರೆತು ನಮ್ಮ ಜಿಲ್ಲೆಯ ಒಬ್ಬ ಸಾಂಸ್ಕೃತಿಕ ಕೊಂಡಿಯಾಗಿ, ಶಾಂತಿ ದೂತನಾಗಿ ಈ ಜಿಲ್ಲೆಯಲ್ಲಿ ಕೆಲಸವನ್ನು ಮಾಡುತ್ತಿದ್ದಾರೆ.

ಅವರ ಬಗ್ಗೆ ಈ ಹರೀಶ್ ಪೂಂಜಾ ಅವರು ಮುಸ್ಲಿಂ, ಅವರ ಕುಟುಂಬದವರ ಬಗ್ಗೆ ಗೊತ್ತು ಎಂಬುದಾಗಿ ಅವಹೇಳನ ಮಾಡುವ ಕೆಲಸ ಮಾಡುತ್ತಿದ್ದಾರೆ. ಇವರ ಕೆಲಸ ಆಗಬೇಕಾದರೆ ಸ್ಪೀಕರ್ ಖಾದರ್ ಬಳಿಗೆ ಹೋಗಿ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಆದರೆ ಹಿಂದೆ ನಿಂತು ಅವರ ಬಗ್ಗೆ ಬಯ್ಯುವ ಕೆಲಸ ಮಾಡುತ್ತಿದ್ದಾರೆ.

ಹೀಗೆ ಎಲ್ಲಾ ಕಡೆ ದ್ವೇಷ ಭಾಷಣ ಮಾಡಿಕೊಂಡು ಜಿಲ್ಲೆಯ ಸ್ವಾಸ್ಥ್ಯ ಕಳೆಯುತ್ತಿದ್ದಾರೆ ಎಂದು ಆರೋಪಿಸಿದರು.

ಪಹಲ್ಲಾಮ್ ದಾಳಿಕೋರ ಉಗ್ರರ ಮೇಲಿನ ದಾಳಿ ಸ್ವಾಗತಾರ್ಹ: ಯುವ ಕಾಂಗ್ರೆಸ್‌

ಇದೇ ವೇಳೆ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಮಾತನಾಡುತ್ತಾ ಮೂರು ವಿಭಾಗದ ಸೈನಿಕರು ಸೇರಿ ನಮ್ಮ ನೆಲದಲ್ಲಿ ಹರಿಸಿದ ರಕ್ತಕ್ಕೆ ಪ್ರತ್ಯುತ್ತರವನ್ನು ನೀಡಿದ್ದು ಈ ರೀತಿಯಲ್ಲಿ ಉಗ್ರರ ವಿರುದ್ಧ ನಡೆಸಿದ ದಾಳಿಯನ್ನು ಸ್ವಾಗತಿಸುತ್ತೆನೆ ಹಾಗೂ ಅಭಿನಂದಿಸುತ್ತೆನೆ ಎಂದು ಹೇಳಿದರು . ಸುದ್ದಿ ಗೋಷ್ಠಿಯಲ್ಲಿ ಪ್ರಮುಖರಾದ ನಂದರಾಜ್ ಸಂಕೇಶ್,ಗೋಕಲ್ ದಾಸ್, ಶಹೀದ್ ಪಾರೆ,ಜಯಪ್ರಕಾಶ್ ನೆಕ್ರಪ್ಪಾಡಿ, ಭವಾನಿಶಂಕರ ಕಲ್ಮಡ್ಕ, ಶಶಿಧರ ಎಂ ಜೆ ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!