
ಸುಬ್ರಹ್ಮಣ್ಯ ಮೇ 7: ಕುಕ್ಕೆ ಸುಬ್ರಹ್ಮಣ್ಯದ ಕಾಶಿ ಕಟ್ಟೆ ಬಳಿಯ ಆದಿ ಸುಬ್ರಮಣ್ಯ ರಸ್ತೆ ಬದಿಯಲ್ಲಿ ನೂತನವಾಗಿ ನಿರ್ಮಿಸಲಾದ ವಸತಿ ಸಮುಚ್ಚಯ ಕುಕ್ಕೇಶ್ರೀ ಹೈಡ್ಸ್ ಸೋಮವಾರ ಲೋಕಾರ್ಪಣೆಗೊಂಡಿತು. ಕುಕ್ಕೇಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಶತಗೊಂಡಿ ದೀಪ ಬೆಳಗಿಸಿ ಉದ್ಘಾಟಿಸುವುದರ ಮೂಲಕ ವಸತಿ ಗ್ರಹವು ಭಕ್ತಾದಿಗಳು ಹಾಗೂ ಸಾರ್ವಜನಿಕ ರ ಉಪಯೋಗಕ್ಕಾಗಿ ಲೋಕಾರ್ಪಣೆಗೊಂಡಿತು. ಈ ಸಂದರ್ಭದಲ್ಲಿ ಕುಕ್ಕೆ ಶ್ರೀ ಹೈಟ್ಸ್ ವಸತಿಗೃಹದ ಆಡಳಿತ ಪಾಲುದಾರ ಮಹೇಂದ್ರ ,ಅವರ ಪತ್ನಿ, ಮಕ್ಕಳು ಹಾಜರಿದ್ದರು. ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ಅಧ್ಯಕ್ಷ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ರಾಜೇಶ್ ಏನ್ ಎಸ್, ನಿಕಟ ಪೂರ್ವ ಉಪಾಧ್ಯಕ್ಷ ವೆಂಕಟೇಶ ಎಚ್ ಎಲ್, ತಾಲೂಕು ಪಂಚಾಯತ್ ಮಾಜಿ ಸದಸ್ಯ ಅಶೋಕ ನಕ್ರಾಜೆ , ಶ್ರೀದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯ ಲೋಲಾಕ್ಷ, ಶ್ರೀದೇವಳದ ಮಾಜಿ ಮ್ಯಾನೇಜಿಂಗ್ ಟ್ರಸ್ಟಿ ಕೆನ್ಯಾ ರವೀನಾಥ್ ಶೆಟ್ಟಿ ,ಶ್ರೀ ದೇವಳದ ಇಂಜಿನಿಯರ್ ಉದಯಕುಮಾರ್, ಸೊಸೈಟಿ ಮಾಜಿ ಅಧ್ಯಕ್ಷ ರವೀಂದ್ರ ಕುಮಾರ ರುದ್ರಪಾದ, ಎಣ್ಣೆ ಮಜಲ್ ಪಟೇಲ್ ರೋಟರಿ ಪೂರ್ವ ಅಧ್ಯಕ್ಷ ಗೋಪಾಲ ಎಣ್ಣೆ ಮಜಲ್, ಸದಸ್ಯ ದಿನೇಶ್ ಎಣ್ಣೆ ಮಜ್ಜಲ್, ಮೋಹನ್ ದಾಸ್ ಎಣ್ಣೆ ಮಜಲ್, ಸುಬ್ರಹ್ಮಣ್ಯ ನುಚಿಲ, ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿ ಹರೀಶ್ ಹಿಂಜಾಡಿ, ಗಿರೀಶ್ ಆಚಾರ್ಯ, ಯಶೋದ ಕೃಷ್ಣ, ಭವ್ಯ , ಮುಂತಾದವರು ಹಾಜರಿದ್ದರು.