
ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ ಜಾಗತಿಕ ಪಿಡುಗಾಗಿರುವ ಭಯೋತ್ಪಾದನೆ ಯ ನಿರ್ಮೂಲನೆಯ ಪಣ ತೊಟ್ಟು ಸಮರಕ್ಕೆ ದಿಟ್ಟ ಮುಂದಡಿ ಇಟ್ಟ ಕೇಂದ್ರ ಸರಕಾರ ಹಾಗೂ ಭಾರತೀಯ ಸೇನೆಗೆ ವಿಜಯಶ್ರೀ ಹಾಗೂ ಭಾರತೀಯ ಸೈನಿಕರ ಸುಕ್ಷೇಮ,ಭಯೋತ್ಪಾದನೆಯ ನಿರ್ಮೂಲಕ್ಕಾಗಿ ಸುಳ್ಯದ ಶ್ರೀ ಕೇಶವಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ಆಶ್ರಯದಲ್ಲಿ ಸುಳ್ಯದ ಶಿವಕೃಪಾ ಕಲಾಮಂದಿರದಲ್ಲಿ ನಡೆಯುತ್ತಿರುವ ಶ್ರೀ ಕೇಶವಕೃಪಾ ವೇದ-ಯೋಗ-ಕಲಾ ಶಿಬಿರದಲ್ಲಿ ಸಹಸ್ರಾಧಿಕ ಶ್ರೀ ದುರ್ಗಾಸೂಕ್ತ ಜಪ ನಡೆಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರೂ,ಶಿಬಿರದ ಪ್ರಧಾನಾಚಾರ್ಯರಾದ ಬ್ರಹ್ಮಶ್ರೀ ಪುರೋಹಿತ ನಾಗರಾಜ ಭಟ್ ರವರು ಶಿಬಿರದ ಎಲ್ಲಾ ವಿದ್ಯಾರ್ಥಿಗಳಿಗೆ ಸಂಕಲ್ಪ ವಾಕ್ಯಗಳನ್ನು ಬೋಧಿಸಿ,ಇನ್ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅಧ್ಯಾಪಕ ವೃಂದದವರು ಸೇರಿಕೊಂಡು ಸಹಸ್ರಾಧಿಕ ಸಂಖ್ಯೆಯಲ್ಲಿ ಶ್ರೀ ದುರ್ಗಾಸೂಕ್ತ ಜಪವನ್ನು ನಡೆಸಿ,ದುರ್ಗಾಮಾತೆಯ ಚರಣಕ್ಕೆ ಸಮರ್ಪಿಸಿ ಭಾರತೀಯ ಸೇನೆಯ ಯಶಸ್ಸು ಹಾಗೂ ಕ್ಷೇಮಕ್ಕಾಗಿ ಪ್ರಾರ್ಥಿಸಲಾಯಿತು.
ಈ ಸಂದರ್ಭದಲ್ಲಿ ಪ್ರತಿಷ್ಠಾನದ ಸಂಚಾಲಕಿ ಶ್ರೀಮತಿ ಶ್ರೀದೇವಿ ನಾಗರಾಜ ಭಟ್,ಶಿಬಿರದ ಅಧ್ಯಾಪಕರುಗಳಾದ ವೇ.ಮೂ ಸುದರ್ಶನ ಭಟ್ ಉಜಿರೆ,ವೇ.ಮೂ ಗೋಪಾಲಕೃಷ್ಣ ಭಟ್ ಕನ್ಯಾನ,ವೇ.ಮೂ ಪುರುಷೋತ್ತಮ ಭಟ್,ವೇ.ಮೂ ದುರ್ಗಾಪ್ರಸಾದ ಶರ್ಮ,ವೇ.ಮೂ.ಋತುರಾಜ್ ಪಾಂಡೆ,ವೇ.ಮೂ ಅಭಿರಾಮ ಶರ್ಮ ಸರಳಿಕುಂಜ,ಶಿಬಿರದ ಪ್ರಬಂಧಕಿ ಕು.ಯಶಸ್ವಿ ಭಟ್ ಉಪಸ್ಥಿತರಿದ್ದರು.