
ಸುಳ್ಯದ ಸಂಧ್ಯಾರಶ್ಮಿ ವಿವಾಹ ವೇದಿಕೆ ವತಿಯಿಂದ ಉಚಿತ ವಧು- ವರರ ಸಮಾವೇಶ ಇಂದು ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಳಿ ಇರುವ ಸಂಧ್ಯಾರಶ್ಮಿ ಸಭಾಭವನದಲ್ಲಿ ನಡೆಯಿತು.

ವಧು ವರರ ಸಮಾವೇಶವನ್ನು ಸುಳ್ಯ ತಾಲೂಕು ಪಿಂಚಣಿದಾರರ ಮತ್ತು ನಿವೃತ್ತ ನೌಕರರ ಸಂಘದ ಮಾಜಿ ಅಧ್ಯಕ್ಷ,ನಿವೃತ್ತ ಉಪನ್ಯಾಸಕ ಬಾಬು ಗೌಡ ಅಕ್ರಪ್ಪಾಡಿ ನೆರವೇರಿಸಿದರು. ಸಭೆಯ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರು,ನಿವೃತ್ತ ವೈದ್ಯಾಧಿಕಾರಿ ಡಾ.ಎಸ್.ರಂಗಯ್ಯ ವಹಿಸಿದ್ದರು. ಸಂಘದ ಕಾರ್ಯದರ್ಶಿ, ನಿವೃತ್ತ ಪ್ರಾಂಶುಪಾಲ ಪ್ರೊ.ಕೆ.ವಿ.ದಾಮೋದರ ಗೌಡ, ಸಂಧ್ಯಾರಶ್ಮಿ ವಿವಾಹ ವೇದಿಕೆಯ ಸಂಚಾಲಕರಾದ ಅತ್ಯಾಡಿ ಲೋಕಯ್ಯ ಗೌಡ, ಸಂಘದ ಕೋಶಾಧಿಕಾರಿ ಸುಬ್ರಹ್ಮಣ್ಯ ಹೊಳ್ಳ, ನಿವೃತ್ತ ಶಿಕ್ಷಕಿ ಶ್ರೀಮತಿ ಕಮಲಾಕ್ಷಿ, ಸಂಘದ ಉಪಾಧ್ಯಕ್ಷೆ ಶ್ರೀಮತಿ ಪ್ರೇಮಲತಾ, ಸಂಧ್ಯಾರಶ್ಮಿ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶ್ರೀಮತಿ ಜಯಂತಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕಿ ಶ್ರೀಮತಿ ಗಿರಿಜ ಎಂ.ವಿ.ಪ್ರಾರ್ಥಿಸಿದರು. ಸಂಧ್ಯಾರಶ್ಮಿ ವಿವಾಹ ವೇದಿಕೆಯ ಸಂಚಾಲಕ ಅತ್ಯಾಡಿ ಲೋಕಯ್ಯ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿ,ಸ್ವಾಗತಿಸಿದರು. ಸಹಸಂಚಾಲಕ ಗೋಪಾಲ ರಾವ್ ವಂದಿಸಿದರು. ಚೆನ್ನಕೇಶವ ಜಾಲ್ಲೂರು ಕಾರ್ಯಕ್ರಮ ನಿರೂಪಿಸಿದರು.
ಉಚಿತ ವಧು- ವರರ ಸಮಾವೇಶದಲ್ಲಿ ಸುಮಾರು 150 ಮಂದಿ ವಧು-ವರರು ಭಾಗವಹಿಸಿದರು. ಎಲ್ಲಾ ಜಾತಿಯ ವಧು- ವರರು ಪೋಷಕರೊಂದಿಗೆ ಭಾಗವಹಿಸಿದ್ದರು. ಈ ಪ್ರಕ್ರಿಯೆ ನಿರಂತರವಾಗಿ ನಡೆಯಲಿದ್ದು, ವಿವಾಹ ವೇದಿಕೆಯ ಮೂಲಕ ಸಂಬಂಧ ಬೆಸೆಯುವ ಕೆಲಸ ನಡೆಯಲಿದೆ ಎಂದು ಸಂಘಟಕರು ತಿಳಿಸಿದರು.