
ಕುಕ್ಕೆ ಶ್ರೀ ಸುಬ್ರಹ್ಮಣ್ಯೇಶ್ವರ ಮಹಾವಿದ್ಯಾಲಯದಲ್ಲಿ ವಾಣಿಜ್ಯ ಹಾಗೂ ಉದ್ಯಮ ಆಡಳಿತ ವಿಭಾಗ ಮತ್ತು ಐ ಕ್ಯೂ ಎ ಸಿ ಘಟಕದ ಜಂಟಿ ಆಶ್ರಯದಲ್ಲಿ ಸ್ಮಾರ್ಟ್ ಇನ್ವೆಸ್ಟಿಂಗ್ ಬಗ್ಗೆ ಕಾರ್ಯಗಾರವನ್ನು ಆಯೋಜಿಸಲಾಯಿತು. ಕಾರ್ಯಗಾರದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ದಿನೇಶ್ ಪಿ ಟಿ ವಹಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾಗಿ ಹೆಚ್ ಡಿ ಎಫ್ ಸಿ ಸೆಕ್ಯೂರಿಟಿ ಲಿಮಿಟೆಡ್ ಅದರ ರೀಜನಲ್ ಹೆಡ್ ಸೇಲ್ಸ್ ಆಫೀಸರ್ ಆಗಿರುವ ಶ್ರೀ ಲೋಹಿತ್ ಎನ್ ಸೋಮಯಾಜಿ ಅವರು ವಿದ್ಯಾರ್ಥಿಗಳಿಗೆ ಹೂಡಿಕೆಯ ಮಹತ್ವ ಹಾಗೂ ಜಾಣ ಹೂಡಿಕೆಯ ಬಗ್ಗೆ ಮಾಹಿತಿ ನೀಡಿದರು. ಹಾಗೆಯೇ ಇಂಡಿಯನ್ ಓವರ್ಸೀಸ್ ಬ್ಯಾಂಕ್ ಸುಬ್ರಹ್ಮಣ್ಯ ಅದರ ಅಸಿಸ್ಟೆಂಟ್ ಮ್ಯಾನೇಜರ್ ಶ್ರೀ ಸುನಿಲ್ ಕುಮಾರ್ ಬ್ಯಾಂಕಿನಲ್ಲಿ ಲಭ್ಯ ಇರುವ ಸವಲತ್ತುಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಇವರೊಂದಿಗೆ ಹೆಚ್ ಡಿ ಎಫ್ ಸಿ ಸೆಕ್ಯೂರಿಟೀಸ್ ಲಿಮಿಟೆಡ್ ಮಂಗಳೂರು ಇದರ ಕ್ಲಸ್ಟರ್ ಹೆಡ್ ಆಗಿರುವ ಶ್ರೀ ಅನಿಲ್ ಕುಮಾರ್ ಹಾಗೂ ಏರಿಯಾ ಸೇಲ್ಸ್ ಮ್ಯಾನೇಜರ್ ಆಗಿರುವ ಶ್ರೀ ಗುರುದೇವ ಎಚ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಮಾಹಿತಿಯನ್ನು ನೀಡಿದರು. ಹೆಚ್ ಡಿ ಎಫ್ ಸಿ ಬ್ಯಾಂಕ್ ಸುಬ್ರಹ್ಮಣ್ಯದ ಮ್ಯಾನೇಜರ್ ಆಗಿರುವಂತಹ ಶ್ರೀ ಸುರೇಶ್ ಹಾಗೂ ಡಾ. ಶಿವಕುಮಾರ್ ಹೊಸೊಳಿಕೆ ರಿಟೈರ್ಡ್ ಸ್ಪೆಷಲ್ ಆಫೀಸರ್ ವಿಟಿಯು ಮಂಗಳೂರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕಾಲೇಜಿನ ಐ ಕ್ಯೂ ಎ ಸಿ ಘಟಕದ ಸಂಯೋಜಕಿ ಹಾಗೂ ವಾಣಿಜ್ಯ ಹಾಗೂ ಉದ್ಯಮಾಡಳಿತ ವಿಭಾಗದ ಮುಖ್ಯಸ್ಥೆ ಶ್ರೀಮತಿ ಲತಾ ಬಿ ಟಿ ಹಾಗೂ ಕಾರ್ಯಕ್ರಮದ ಸಂಯೋಜಕಿ ಶ್ರೀಮತಿ ಕೃತಿಕಾ ಪಿ ಎಸ್ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕಿ ಶ್ರೀಮತಿ ಮಧುರಾ ಕೆ ಸ್ವಾಗತಿಸಿದರು. ಶ್ರೀ ರಿತಿಕ್ ಸಿ ವಿ ವಂದಿಸಿದರು. ಮಯೂರಿ ಎಂ.ಜಿ ಕಾರ್ಯಕ್ರಮವನ್ನು ನಿರೂಪಿಸಿದರು.