
ಸುಳ್ಯದ ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಜಂಟಿ ಆಶ್ರಯದಲ್ಲಿ ವಾಷ್ಠರ್ ಸಂಗೀತ ಸೌರಭ -2025 ಕಾರ್ಯಕ್ರಮವು ಇತ್ತೀಚಿಗೆ ಸುಳ್ಯದ ದೇವಮ್ಮ ಕಾಂಪ್ಲೆಕ್ಸ್ ಸಭಾಂಗಣದಲ್ಲಿ ನೆರವೇರಿತು. ವಾಷ್ಠರ್ ಸಂಗೀತ ಸೌರಭ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾಷ್ಠರ್ ಫೈವ್ ಸ್ಟಾರ್ ಸಂಗೀತ ಬಳಗ ಮತ್ತು ಚಂದನ ಸಾಹಿತ್ಯ ವೇದಿಕೆ ಸುಳ್ಯ ಇದರ ಅಧ್ಯಕ್ಷರು, ಗಾಯಕರು, ಜ್ಯೋತಿಷಿಗಳಾದ ಶ್ರೀ ಎಚ್. ಭೀಮರಾವ್ ವಾಷ್ಠರ್ ಆವರು ವಹಿಸಿದ್ದರು. ಹಿರಿಯ ಸಾಹಿತಿ ವಿಜಯಕುಮಾರ್ ಕಾಣಿಚ್ಚಾರ್ ಆವರು ಉದ್ಘಾಟನೆ ಮಾಡಿದರು. ಗಾಯಕಿ ಸಾವಿತ್ರಿ ದೊಡ್ಡಮನೆ ಮತ್ತು ಗಾಯಕ ವಿಜಯಕುಮಾರ್ ಸುಳ್ಯ ಮುಖ್ಯ ಅತಿಥಿಗಳಾಗಿದ್ದರು. ಇದೇ ವೇದಿಕೆಯಲ್ಲಿ ಹಾಸ್ಯ ಕಲಾವಿದ ಜೀವನ್ ಕೆರೆಮೂಲೆಯವರಿಗೆ ಚಂದನ ಹಾಸ್ಯರತ್ನ ಪ್ರಶಸ್ತಿ, ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸುಮಂಗಲ ಲಕ್ಷ್ಮಣ್ ಕೋಳಿವಾಡ ಅವರಿಗೆ ಚಂದನ ರತ್ನ ಪ್ರಶಸ್ತಿ, ಚಿತ್ರಕಲಾ ಸಾಧನೆಗಾಗಿ ಕು| ಕೆ ವಿ ಭೂಮಿಕಾ ಅವರಿಗೆ ಚಂದನ ಪ್ರತಿಭಾ ರತ್ನ ಪ್ರಶಸ್ತಿ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಾಯಕ ವಿಜಯಕುಮಾರ್ ಸುಳ್ಯ ಹಾಗೂ ಗಾಯಕಿಯರಾದ ಶೋಭಾ ಬೆಳ್ಳಾರೆ, ಲಾವಣ್ಯ ಉಜಿರೆ, ಮಮತಾ ಮಡಿಕೇರಿ ಅವರಿಗೂ ಚಂದನ ಪ್ರತಿಭಾ ರತ್ನ ಪ್ರಶಸ್ತಿ ನೀಡಿ ಗೌರವಿಸಿ ಸನ್ಮಾನಿಸಲಾಯಿತು. ಸಂಗೀತ ಸೌರಭ ಕಾರ್ಯಕ್ರಮದಲ್ಲಿ ಸಿ ಕೆ ಮಾಸ್ಟರ್ ಸುಳ್ಯ, ಪೆರುಮಾಳ್ ಲಕ್ಷ್ಮಣ್, ಸಾವಿತ್ರಿ ದೊಡ್ಮನೆ ಐವರ್ನಾಡು, ಗಿರೀಶ್ ಪೆರಿಯಡ್ಕ ಉಪ್ಪಿನಂಗಡಿ, ಉದಯಶಂಕರ ಯು ಕಾಸರಗೋಡು, ಲಾವಣ್ಯ ಉಜಿರೆ, ಅರುಣ್ ರಾವ್ ಜಾಧವ್ ಸುಳ್ಯ, ವಿಜಯ ಕುಮಾರ ಸುಳ್ಯ, ವಿಜಯ ಕುಮಾರ ಕಾಣಿಚ್ಚಾರ್ ಸುಳ್ಯ, ಗುರುಪ್ರಸಾದ್ ಉಪ್ಪಿನಂಗಡಿ, ಶಶಿರಾಜ್ ಪುತ್ತೂರು, ಸುರೇಶ್ ಕೆ. ರಾವ್ ಮಂಗಳೂರು, ಪವಿತ್ರ ಯಂ. ಬೆಳ್ಳಿಪ್ಪಾಡಿ, ಸುಮಂಗಲ ಲಕ್ಷ್ಮಣ್ ಕೋಳಿವಾಡ, ಶಶಿಧರ್ ಕೇಪು, ಎಂ ಎ ಮುಸ್ತಫಾ ಬೆಳ್ಳಾರೆ, ರಾಜೇಶ್ ಎಸ್ ಎನ್ ಸುಳ್ಯ, ಜಗದೀಶ್ ಕನ್ಯಾನ ವಿಟ್ಲ, ಲಾಲ್ ಮೋಹನ್ ಬಜಪೆ ಮಂಗಳೂರು, ಗಣಪತಿ ಆಚಾರ್ಯ ಪುತ್ತೂರು, ಶೋಭಾ ಬೆಳ್ಳಾರೆ ಇನ್ನಿತರರು ಭಾಗವಹಿಸಿ ಚಿತ್ರಗೀತೆ, ಭಾವಗೀತೆ, ಜಾನಪದ ಗೀತೆಗಳನ್ನು ತಮ್ಮ ಗಾಯನದ ಮೂಲಕ ಪ್ರಸ್ತುತ ಪಡಿಸಿದರು. ಪೆರುಮಾಳ್ ಲಕ್ಷ್ಮಣ್ ಸರ್ವರನ್ನೂ ವಂದಿಸಿದರು. ಗಾಯಕ ಅರುಣ್ ಜಾಧವ್ ವಂದಿಸಿ ನಿರೂಪಿಸಿದರು.