

ಹರಿಹರ ಪಳ್ಳತ್ತಡ್ಕ ಗ್ರಾಮದ ಗುಡ್ಡಪ್ಪ ಗೌಡ ಕುದ್ಕುಳಿ ರವರು ಏ.17 ರಂದು ರಾತ್ರಿ ನಿಧನರಾದರು.
ಕೊಲ್ಲಮೊಗ್ರು-ಹರಿಹರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ನಿವೃತ್ತ ಉದ್ಯೋಗಿಯಾಗಿರುವ ಇವರು ಕಾಂಗ್ರೆಸ್ ಪಕ್ಷದ ಹಿರಿಯ ಕಾರ್ಯಕರ್ತರಾಗಿದ್ದರು.
ಮೃತರು ಸಹೋದರ ರಾಮಕೃಷ್ಣ ಗೌಡ, ಪತ್ನಿ ತಾರಾ, ಪುತ್ರಿ ಶ್ರೀಮತಿ ರೇಷ್ಮಾ, ಪುತ್ರ ಪುನೀತ್ ಸೇರಿದಂತೆ ಮೊಮ್ಮಕ್ಕಳು, ಕುಟುಂಬಸ್ಥರು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.