
ಮಡಾವು ಸುಳ್ಯ 33 ಕೆ.ವಿ. ವಿದ್ಯುತ್ ಲೈನ್ ನಿರ್ವಹಣಾ ಕೆಲಸ ಇರುವುದರಿಂದ ಎ.18 ರಂದು ವಿದ್ಯುತ್ ಕಡಿತ ಮಾಡಲಾಗುವುದು ಎಂದು ಮೆಸ್ಕಾಂ ಅಧಿಕಾರಿಗಳು ಪ್ರಕಟಣೆ ನೀಡಿದ್ದರು. ಆದರೇ ಇಂದು (ಎ.18) ಗುಡ್ ಫ್ರೈಡೆ ಇರುವ ಬಗ್ಗೆ ಎಚ್ಚೆತ್ತ ಅಧಿಕಾರಿಗಳು ಪವರ್ ಕಟ್ ಮುಂದೂಡಿದ್ದಾರೆ.
ಪ್ರತಿ ಸಲ ಮಂಗಳವಾರ ಮಾತ್ರ ಪವರ್ ಕಟ್ ಮಾಡಬೇಕು, ದಿನ ಬದಲಾವಣೆ ಮಾಡುವುದರಿಂದ ನಮಗೆ ತೊಂದರೆಯಾಗುತ್ತದೆ. ಇಂದು ಪವರ್ ಇಲ್ಲ ಎಂದು ನಮ್ಮ ನೌಕರರಿಗೆ ರಜೆ ನೀಡಿದ್ದೇವೆ. ಗುಡ್ ಫ್ರೈಡೆ ಇದೆ ಎಂದು ಮೊದಲೇ ಅಧಿಕಾರಿಗಳಿಗೆ ಗೊತ್ತಿರುವುದಿಲ್ಲವೇ ಎಂದು ವರ್ತಕರೊಬ್ಬರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.