
ಸುಳ್ಯದ ಶ್ರೀ ಕೇಶವ ಕೃಪಾ ವೇದ ಮತ್ತು ಕಲಾ ಪ್ರತಿಷ್ಠಾನದ ವತಿಯಿಂದ ಒಂದು ವಾರಗಳ ಕಾಲ ಉಚಿತ ಸಂಸ್ಕಾರ ವಾಹಿನಿ ಶಿಬಿರ ಹಮ್ಮಿಕೊಳ್ಳಲಾಗಿದ್ದು, ಇದೇ ಸಂದರ್ಭ ಶಿಬಿರದ ವಿದ್ಯಾರ್ಥಿಗಳಿಗೆ ವಿಷು ಹಬ್ಬದ ಮಹತ್ವವನ್ನು ತಿಳಿಸುವ ಸಲುವಾಗಿ ಪ್ರಾಯೋಗಿಕ ವಿಷು ಹಬ್ಬವನ್ನು ಆಚರಿಸಲಾಯಿತು.
ಯುವ ಸಾಹಿತಿ ಉದಯಭಾಸ್ಕರ್ ಸುಳ್ಯ ಕಳಸೆಗೆ ಭತ್ತ ಸುರಿಯುವ ಮೂಲಕ ವಿಶಿಷ್ಟ ರೀತಿಯಲ್ಲಿ ವಿಷು ಹಬ್ಬವನ್ನು ಉದ್ಘಾಟಿಸಿ ಮಾತನಾಡುತ್ತಾ, ‘ಹಬ್ಬಗಳನ್ನು ಕೇವಲ ಮೋಜಿಗಾಗಿ ಆಚರಿಸುವಂತದ್ದಲ್ಲ ಇದರ ಹಿಂದೆ ಕೌಟುಂಬಿಕ ಸಾಮರಸ್ಯ ಹಾಗೂ ಸಮಾಜವನ್ನು ಸಂಘಟಿಸುವ ಸದುದ್ದೇಶವೂ ಅಡಗಿದೆ’ ಆನ್ನುತ್ತಾ
ವಿಷು ಹಬ್ಬದ ಮಹತ್ವದ ಜೊತೆಗೆ ರಕ್ತದಾನದ ಕುರಿತಾಗಿಯೂ ಶಿಬಿರದ ವಿದ್ಯಾರ್ಥಿಗಳಿಗೆ ಮಾಹಿತಿಯನ್ನು ನೀಡಿದರು.
ವಿಷು ಹಬ್ಬದ ಹಿನ್ನೆಲೆಯಲ್ಲಿ ಫಲವಸ್ತುಗಳನ್ನು ಜೋಡಿಸಿ ವಿಷುಕಣಿಯನ್ನು ಶಿಬಿರಾರ್ಥಿಗಳಿಗೆ ಪರಿಚಯಿಸಿ, ಸಾಮೂಹಿಕ ಸಹಭೋಜನ ಏರ್ಪಡಿಸಲಾಯಿತು.
ಪ್ರತಿಷ್ಠಾನದ ಅಧ್ಯಕ್ಷರಾದ ಪುರೋಹಿತ ನಾಗರಾಜ್ ಭಟ್ ಸ್ವಾಗತ ಮತ್ತು ವಂದನಾರ್ಪಣೆ ನೆರವೇರಿಸಿ, ಸಂಚಾಲಕಿ ಶ್ರೀದೇವಿ ನಾಗರಾಜ್ ಭಟ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕು. ಯಶಸ್ವಿ ಪ್ರಾರ್ಥಿಸಿ ಕು.ಅಕ್ಷತಾ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ವೇದಿಕೆಯಲ್ಲಿ ಆಶಾ ದೇವರಾಜ್, ನಮಿತಾ ರಾವ್, ಸುಜಾತ ರೈ, ಪ್ರಭಾ ಸುರೇಶ್, ಪಾರ್ವತಿ ಮುಳ್ಯ, ಸುನೀತಾ ದೇವಿಪ್ರಸಾದ್ ಮತ್ತು ಅನುಷಾ ಬೆಟ್ಟಂಪಾಡಿ ಉಪಸ್ಥಿತರಿದ್ದರು.