Ad Widget

ಕೆ.ವಿ.ಜಿ ಇಂಜಿನಿಯರಿoಗ್‌ ಕಾಲೇಜಿನಲ್ಲಿ ಕೆವಿಜಿಸಿಇ ಹ್ಯಾಕ್ ವೈಸ್ ಬ್ಯಾನರ್ ಬಿಡುಗಡೆ

. . . . . . . . .

ಕೆ.ವಿ.ಜಿ ಇಂಜಿನಿಯರಿoಗ್‌ ಕಾಲೇಜಿನಲ್ಲಿ ನಡೆಯಲಿರುವ ಬಹು ನಿರೀಕ್ಷಿತ ಹ್ಯಾಕಥಾನ್‌ ಕಾರ್ಯಕ್ರಮ “ಕೆವಿಜಿಸಿಇ ಹ್ಯಾಕ್‌ವೈಸ್” ಅನ್ನು ಅಧಿಕೃತವಾಗಿ ಪ್ರಾರಂಭಿಸುವ ನಿಟ್ಟಿನಲ್ಲಿ, ವಿದ್ಯಾರ್ಥಿಕ್ಲಬ್ ಸ್ಪಿಯರ್ ಹೈವ್, ಬ್ಯಾನರ್ ಬಿಡುಗಡೆ ಸಮಾರಂಭವನ್ನು ದಿನಾಂಕ: 12.04.2025 ರಂದು ಯಶಸ್ವಿಯಾಗಿ ಆಯೋಸಿಸಲಾಯಿತು. ಕಾರ್ಯಕ್ರಮಕ್ಕೆ ಕಾಲೇಜಿನ ಪ್ರಾಚಾರ್ಯರು ಆದ
ಡಾ. ಸುರೇಶ ವಿ. ಅವರು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದು, ವಿದ್ಯಾರ್ಥಿಗಳ ಆತ್ಮವಿಶ್ವಾಸ ಮತ್ತು ಆವಿಷ್ಕಾರ ಶಕ್ತಿಯ ಪ್ರಾಮುಖ್ಯತೆಯ ಕುರಿತು ಪ್ರೇರಣಾದಾಯಕ ಭಾಷಣವನ್ನು ನೀಡಿದರು. ಅವರ ಮಾರ್ಗದರ್ಶನವು ವಿದ್ಯಾರ್ಥಿಗಳಲ್ಲಿ ಹೊಸ ಉತ್ಸಾಹ ಹಾಗೂ ಚೈತನ್ಯವನ್ನು ಉಂಟುಮಾಡಿತು. ಈ ಸಂದರ್ಭದಲ್ಲಿ ಸಿವಿಲ್ ಇಂಜಿನಿಯರಿoಗ್ ವಿಭಾಗದ ಮುಖ್ಯಸ್ಥ
ಡಾ. ಚಂದ್ರಶೇಖರ್ ಎ ಅವರು ಐಐಸಿ ಸಂಯೋಜಕರು ಮತ್ತು ಕನ್ವೀನರ್ ಆಗಿ ತಮ್ಮ ಸತತ ಬೆಂಬಲ ಹಾಗೂ ಯೋಜನೆಯ ಯಶಸ್ವಿಗಾಗಿ ನೀಡಿದ ದುಡಿಮೆಗೆ ವಿಶೇಷ ಪ್ರಸಂಸೆ ವ್ಯಕ್ತವಾಯಿತು. ಇವರ ಜೊತೆಗೆ, ಮಾರ್ಗದರ್ಶಕರಾದ ಕಂಪ್ಯೂಟರ್ ಸೈನ್ಸ್&ಇಂಜಿನಿಯರಿoಗ್‌ ವಿಭಾಗದ ಅಸೋಸಿಯೇಟ್ ಪ್ರೊಫೆಸರ್‌ ಕಿಶೋರ್‌ಕುಮಾರ್‌ ಅವರ ಮಾರ್ಗದರ್ಶನ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು ಸಲ್ಲಿಸಲಾಯಿತು. ವಿವಿಧ ವಿಭಾಗದ ಪ್ರಾಧ್ಯಾಪಕರು, ಬೋಧಕ ವರ್ಗದ ಸದಸ್ಯರು ಮತ್ತು ವಿದ್ಯಾರ್ಥಿಗಳ ಸಕ್ರಿಯ ಉಪಸ್ಥಿತಿಯಿಂದ ಈ ಸಮಾರಂಭಕ್ಕೆ ಇನ್ನಷ್ಟು ಪ್ರಾಮುಖ್ಯತೆ ಮತ್ತು ವೈಭವ ಹೆಚ್ಚಿತು. ಬ್ಯಾನರ್‌ ಅನಾವರಣದ ಕ್ಷಣವು ವಿದ್ಯಾರ್ಥಿಗಳಲ್ಲಿ ಹೊಸ ಹುಮ್ಮಸ್ಸನ್ನು ಮೂಡಿಸಿತು. ಇದು ಹ್ಯಾಕ್‌ವೈಸ್‌ನ ಅಧಿಕೃತ ಆರಂಭವನ್ನೇ ಸೂಚಿಸಿತು. ಕಾರ್ಯಕ್ರಮದ ಯಶಸ್ಸಿಗೆ ಪ್ರಮುಖ ಕಾರಣರಾಗಿರುವ ಸಂಘಟನಾ ಸಮಿತಿಯ ಸದಸ್ಯರ ಶ್ರಮ, ನಿಷ್ಠೆ ಮತ್ತು ಪ್ರೀತಿ ಶ್ಲಾಘನೀಯವಾಗಿದೆ. ಈ ಮೂಲಕ ಕೆವಿಜಿಸಿಇ ಹ್ಯಾಕ್‌ವೈಸ್‌ತನ್ನ ಪ್ರಯಾಣವನ್ನು ಪ್ರಾರಂಭಿಸಿದ್ದು, ವಿದ್ಯಾರ್ಥಿಗಳಿಗೆ ನವೀನತೆ ಹಾಗೂ ಸಹಕಾರದ ವೇದಿಕೆಯನ್ನು ಕಲ್ಪಿಸುತ್ತಿದೆ.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!