Ad Widget

ಕೆ.ವಿ.ಜಿ. ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಿವಿಲ್ ಎಂಜಿನಿಯರಿಂಗ್ ವಿಭಾಗ ಮತ್ತು Adani Cement (ACC) ಇದರ ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಾಗಾರ

. . . . . . . . .

ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜ್‌ನಲ್ಲಿ Adani Cement ( ACC) ಮತ್ತು ಕೆ.ವಿ.ಜಿ. ಎಂಜಿನಿಯರಿಂಗ್ ಕಾಲೇಜಿನ ಸಿವಿಲ್ ಎಂಜಿನಿಯರಿಂಗ್ ವಿಭಾಗದ ಸಹಯೋಗದಲ್ಲಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮ “NEEV ABHIYAN” ದಿನಾಂಕ: 27-02-2025 ರಂದು ಎಂಜಿನಿಯರಿಂಗ್ ಕಾಲೇಜಿನ ಸಭಾಂಗಣದಲ್ಲಿ ನಡೆಯಿತು. ಈ ಕಾರ್ಯಕ್ರಮವನ್ನು ಸಿವಿಲ್ ಕಾಂಟ್ರಾಕ್ಟರ್‌ಗಳು ಮತ್ತು ಸಿವಿಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನಡೆಸಲಾಗಿತ್ತು. ಸಂಪನ್ಮೂಲ ವ್ಯಕ್ತಿಯಾದ ಇಂಜಿನಿಯರ್ ರಜತ್ ವಿ.ಜಿ., ಮ್ಯಾನೇಜರ್, ಟೆಕ್ನಿಕಲ್ ಸರ್ವಿಸಸ್, ಏರಿಯಾ ಆಫೀಸ್, ಮಂಗಳೂರು, Adani Cement (ACC) ” Estimation in Civil Engineering” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು ಮತ್ತು ಸಿವಿಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ. ಚಂದ್ರಶೇಖರ್ ಎ ಅವರು “Nominal mix in concret & Bar Bending Schedule” ಎಂಬ ವಿಷಯದಲ್ಲಿ ಉಪನ್ಯಾಸ ನೀಡಿದರು.

ಪ್ರಪ್ರಥಮವಾಗಿ ಸುಳ್ಯಕ್ಕೆ ACC ಸಿಮೆಂಟ್‌ನ ವಿತರಕರು ಶ್ರೀ ಧನಂಜಯ ಅಡ್ಪಂಗಾಯ, ಲಕ್ಷೀ ಸಿಮೆಂಟ್, ಸುಳ್ಯ ಇವರು ತಮ್ಮ ಅನಿಸಿಕೆಗಳನ್ನು ಕಾಂಟ್ರಾಕ್ಟರ್‌ಗಳು ಮತ್ತು ವಿದ್ಯಾರ್ಥಿಗಳೊಂದಿಗೆ ಹಂಚಿಕೊ೦ಡರು. ಕಾಲೇಜಿನ ಸಿ.ಇ.ಒ, ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥರು ಮತ್ತು ವಿ.ಟಿ.ಯು.ನ ಕಾರ್ಯಕಾರಿ ಮಂಡಳಿ ಸದಸ್ಯರಾದ ಡಾ. ಉಜ್ವಲ್ ಯು.ಜೆ.ಮುಖ್ಯ ಅತಿಥಿ ನೆಲೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕೇಂದ್ರವನ್ನು Adani ಸಿಮೆಂಟ್‌ನ ಸಹಯೋಗದೊಂದಿಗೆ ವಿದ್ಯಾರ್ಥಿಗಳು ಮತ್ತು ಕಾಂಟ್ರಾಕ್ಟರ್‌ಗಳಿಗೆ ಸಹಕಾರಿಯಾಗುವಂತೆ ತರಬೇತಿ ಕೇಂದ್ರವನ್ನು ತೆರೆಯುವ ಭರವಸೆಯನ್ನು ನೀಡಿದರು.ಕಾಲೇಜಿನ ಪ್ರಾಂಶುಪಾಲ ಡಾ.ಸುರೇಶ ವಿ.ಅತಿಥಿ ನೆಲೆಯಲ್ಲಿ ಮಾತನಾಡಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮದಿಂದ ವಿದ್ಯಾರ್ಥಿಗಳಿಗೆ ಹೆಚ್ಚಿನ ಪ್ರಾಯೋಗಿಕ ಅನುಭವ ಸಿಗುವುದರಿಂದ ಮುಂದಿನ ದಿನಗಳಲ್ಲಿ ತಮ್ಮ ಉದ್ಯೋಗದಲ್ಲಿ ಅನುಕೂಲವಾಗುತ್ತದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ಸಿವಿಲ್ ಇಂಜಿನಿಯರಿಂಗ್ ವಿಭಾಗದ ಪ್ರೊ. ಕೃಷ್ಣರಾಜ್ ಎಂ.ವಿ. ಸ್ವಾಗತಿಸಿದರು.
ಪ್ರೊ. ಅರುಣ್ ಕುಮಾರ್ ಹೆಚ್. ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳಾದ ಹವ್ಯ ಮತ್ತು ಜೋವಿಟ ಕಾರ್ಯಕ್ರಮ ನಿರೂಪಿಸಿದರು. ಇದೇ ಕಾರ್ಯಕ್ರಮದಲ್ಲಿ ಶ್ರೀ ಧನಂಜಯ ಅಡ್ಪಂಗಾಯ ಮತ್ತು ಇಂಜಿನಿಯರ್ ರಜತ್ ವಿ.ಜಿ. ಅವರನ್ನು ಕಾಲೇಜಿನ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ Adani ಸಿಮೆಂಟ್‌ನ ಸಿಬ್ಬಂಧಿಗಳಾದ ದೀಪ್ತೇಶ್, ಅಶ್ವಿನ್, ರಕ್ಷಿತ್, ಸಿವಿಲ್ ಕಾಂಟ್ರಾಕ್ಟರ್‌ಗಳು, ಸಹ ಸಂಸ್ಥೆಗಳ ಪ್ರಾಂಶುಪಾಲರುಗಳು, ಉಪಪ್ರಾಂಶುಪಾಲರುಗಳು, ಆಡಳಿತಾಧಿಕಾರಿಗಳು, ಸಿಬ್ಬಂಧಿಗಳು, ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳು, ಪ್ರಾಧ್ಯಾಪಕವೃಂದ, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಭಾಗವಹಿಸಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!