Ad Widget

ವರ್ಣರಂಜಿತ ಅದ್ದೂರಿ ಕಾರ್ಯಕ್ರಮಕ್ಕೆ ಸಾಕ್ಷಿಯಾದ ದೇವಚಳ್ಳ ಶಾಲಾ ಶತಮಾನೋತ್ಸವ, ಗಣ್ಯರಿಂದ ನೂತನ ಕಾಮಗಾರಿಗಳ ಉದ್ಘಾಟನೆ : ರಾಷ್ಟ್ತೀಯ ಶಿಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆ – ಬ್ರಿಜೇಶ್ ಚೌಟ

ರಾಷ್ಟ್ತೀಯ ಶಿಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ ಎಂದು ದ.ಕ.ಸಂಸದ ಬ್ರಿಜೇಶ್ ಚೌಟ ಹೇಳಿದರು.
ಅವರು ದೇವಚಳ್ಳ ಗ್ರಾಮದ ಎಲಿಮಲೆಯ ದೇವಚಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಶತಮಾನೋತ್ಸವ ಕಾರ್ಯಕ್ರಮದ ಅಂಗವಾಗಿ ನಡೆದ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟಿಸಿ ಮಾತನಾಡಿದರು.‌ ಸರಕಾರಿ ಶಾಲೆಗಳನ್ನು ಉಳಿಸುವದೇ ಸವಾಲಿನ ಕೆಲಸ.‌ ಇಂತಹ ಸಂದರ್ಭದಲ್ಲಿ ಶತಮಾನೋತ್ಸವ ಆಚರಿಸುತ್ತಿರುವುದು ವಿಶೇಷ , ಕೇಂದ್ರ ಸರಕಾರದ ರಾಷ್ಟ್ತೀಯ ಶಿಕ್ಷಣ ನೀತಿಯಿಂದ ಶಿಕ್ಷಣದಲ್ಲಿ ಅಮೂಲಾಗ್ರ ಬದಲಾವಣೆಯಾಗಲಿದೆ, ಸುಸ್ಥಿರ ಸಮಾಜದ ನಿರ್ಮಾಣಕ್ಕೆ ವಿದ್ಯಾರ್ಥಿಗಳ ಪಾಲು ಬಹು ಮುಖ್ಯವಾಗಿದೆ, ಮಕ್ಕಳಿಗೆ ಭಯಮುಕ್ತ ವಾತಾವರಣದಲ್ಲಿ ಶಿಕ್ಷಣ ನೀಡಿ, ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ತೊಡಗುವಂತೆ ಮಾಡಲು ಪ್ರೇರಣೆಯನ್ನು ಶಿಕ್ಷಕರು ಪೋಷಕರು ಮಾಡಬೇಕಾಗಿದೆ ಎಂದರು.

. . . . . . . . .


ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ವಿಧಾನ ಪರಿಷತ್ ಸದಸ್ಯ ಎಸ್ ಎಲ್ ಬೋಜೇಗೌಡ ಮಾತನಾಡಿ “ಜೀವನ ನಡೆಸುವ ಶಿಕ್ಷಣವನ್ನು ಹಿರಿಯರು ನೀಡುತ್ತಿದ್ದರು ,ಅಂದು ಅವರು ನೀಡಿದ ಮಹತ್ವಾಕಾಂಶೆ ಯೋಜನೆ ಇಂದು ಫಲ ನೀಡಿದೆ, ಶಿಕ್ಷಣಕ್ಕೆ ಹಿರಿಯರು ಮಹತ್ವವನ್ನು ನೀಡಿದ್ದರು ಆದರೆ ಆ ಕಾಲದಲ್ಲಿ ಅವರ್ಯಾರು ಶಿಕ್ಷತರಾಗಿರಲಿಲ್ಲ ಆದರೂ ಅವರ ಚಿಂತನೆಗಳು ಇಂದಿಗೂ ಜೀವಂತವಾಗಿದೆ ಎಂದರು. ಪಠ್ಯ ಪುಸ್ತಕ್ತ ವಿಚಾರದಲ್ಲಿ ರಾಜಕೀಯ ಸಲ್ಲದು,ಕಲೆ ಸಾಹಿತ್ಯ, ಶಿಕ್ಷಣ ಜೊತೆ ನಮ್ಮ ನಾಡಿನ ನೆಲೆಗಟ್ಟನ್ನು ಮುಂದಿನ ಪೀಳಿಗೆಗೆ ತಿಳಿಸುವ ಕೆಲಸ ಸರಕಾರಿ ಶಾಲೆಗಳಿಂದವಾಗಬೇಕಾಗಿದೆ, ಸರಕಾರಿ ಶಾಲೆಯಲ್ಲಿ ಶಿಕ್ಷಕರ ಕೊರತೆ ಕಾಡುತ್ತಿರುವುದು ಕಟು ಸತ್ಯ, ಆದರೂ ಕನ್ನಡ ಶಾಳೆಗಳಲ್ಲಿ ಕನ್ನಡದ ಸೌಂದರ್ಯ ಬೆಳಗಬೇಕಾಗಿದೆ ಎಂದು ಅಭಿಪ್ರಾಯಿಸಿದರು.

. . . . . . .

ಮಾಜಿ ಸಚಿವ ಎಸ್ ಅಂಗಾರ ಮಾತನಾಡಿ ಹಿರಿಯರು ಪ್ರಚಾರದ ಗೀಳಿಲ್ಲದೆ ಮಾಡಿದ ಕೆಲಸಗಳು ಇಂದು ಫಲ ನೀಡಿದೆ, ಸಮಾಜದಲ್ಲಿ ಫಲಾಪೇಕ್ಷೆಯಿಲ್ಲದೆ ನೀಡುವ ಸೇವೆ ನಮಗರಿವಿಲ್ಲದೆ ಫಲ ನೀಡುತ್ತದೆ ಎಂದು ಅಭಿಪ್ರಾಯಿಸಿದರು.

ದ.ಕ ಜಿಲ್ಲೆ ಗ್ಯಾರಂಟಿ ಗ್ಯಾರಂಟಿ ಯೋಜನೆಯ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಮಾತನಾಡಿ ಇದು ಭಾವೈಕ್ಯತೆಯ ಸಂದೇಶ ನೀಡಿದ ಕಾರ್ಯಕ್ರಮ ಎಂದರು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯ ಶಾಸಕಿ ಭಾಗಿರಥಿ ಮುರುಳ್ಯ ವಹಿಸಿದ್ದರು.

ಬೆಳಿಗ್ಗೆ ನಡೆದ ಅದ್ಧೂರಿಯ. ಮೆರವಣಿಗೆಗೆ ಸೈಂಟ್ ಮೇರಿಸ್ ಇಂಡಸ್ರ್ರೀಸ್ ಮಾಲಕ ಜೋಸೆಫ್ ಕುರಿಯನ್ ಚಾಲನೆ ನೀಡಿದರು. ನೂತನ ದ್ವಾರದ ಉದ್ಘಾಟನೆ ಶಿವಾಜಿ ಪ್ರೆಂಡ್ಸ್ ಅಧ್ಯಕ್ಷ ವಿನಯಕುಮಾರ ಕಲ್ಲುಪಣೆ ನೆರವೇರಿಸಿದರು.

ಇಂಟರ್ಲಾಕ್ ಉದ್ಘಾಟನೆಯನ್ನು ನಿವೃತ ಎ ಎಸ್ ಐ ಕೃಷ್ಣಯ್ಯ ಕಾಣಿಕೆ ನಡೆಸಿಕೊಟ್ಟರು. ಉದ್ಯಾನವನದ ಉದ್ಘಾಟನೆಯನ್ನು ನಿವೃತ ಬ್ಯಾಂಕ್ ಅಧಿಕಾರಿ ರಮೇಶ್ ಮೂರ್ತಿ ಕೇರ, ಉದ್ಯಮಿ ಸೀತರಾಮ ಹಲ್ದಡ್ಕ ನೆರವೇರಿಸಿದರು. ಗ್ರಾಮ ಪಂಚಾಯತ್ ಅಧ್ಯಕ್ಷ ಶೈಲೇಶ್ ಅಂಬೆಕಲ್ಲು ಧ್ವಜಾರೋಹಣ ನೆರವೇರಿಸಿದರು. ನೂತನ ಕಾಮಗಾರಿ ಶತಮಾನೋತ್ಸವ ಸ್ಮಾರಕ ಸಭಾಭವನವನ್ನು ಎಸ್ ಎನ್ ಮನ್ಮಥರವರು ಉದ್ಘಾಟಿಸಿದರು , ನೂತನ ರಂಗಮಂದಿರವನ್ನು ಎಸ್ ಎಲ್ ಭೋಜೇಗೌಡ ಉದ್ಘಾಟಿಸಿದರು.
ಮುಖ್ಯ ಅತಿಥಿಗಳಾಗಿ ಎಸ್ ಸಿ ಡಿ ಸಿ ಸಿ ಬ್ಯಾಂಕ್ ನಿರ್ಧೇಶಕ ಎಸ್ ಎನ್ ಮನ್ಮಥ, ಪಿ.ಎಂ ಪೋಷಣ್ ಯೋಜನೆಯ ಸಹಾಯಕ ನಿರ್ದೇಶಕಿ ವೀಣಾಂ ಎಂ ಟಿ,ದೈಹಿಕ ಶಿಕ್ಷಣ ಪರಿವೀಕ್ಷಕಿ ಆಶಾ ನಾಯಕ್ ಭಾಗವಹಿಸಿದ್ದರು
ವೇದಿಕೆಯಲ್ಲಿ ಕೇಪಳಕಜೆ ಪುರುಷೋತ್ತಮ, ಬಾಲಕೃಷ್ಣ ಬೊಳ್ಳೂರು , ಸ್ಥಳ ಧಾನಿ ಎಂ ವೈ ಹಮೀದ್ , ಗ್ರಾ ಪಂ ಸದಸ್ಯ ದಯಾನಂದ, ಕೃಷ್ಣಯ್ಯ ಕಾಣಿಕೆ, ವಿನಯ್ ಕಲ್ಪಣೆ, ರಾಜೇಶ್ ಗೋಪಿನಾಥ್ ಮೆತ್ತಡ್ಕ, ಧನಲಕ್ಷ್ಮಿ, ಎಸ್ ಡಿ ಎಂ ಸಿ ಅಧ್ಯಕ್ಷ ಜಯಾನಂದ ಪಟ್ಟೆ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಹರಿಪ್ರಸಾದ್ ಬಿ ವಿ, ಮೊದಲಾದವರಿದ್ದರು .
ಶತಮಾನೋತ್ಸವ ಸಮಿತಿ ಅಧ್ಯಕ್ಷ ಎ ವಿ ತೀರ್ಥರಾಮ ಸ್ವಾಗತಿಸಿ, ಶಾಲಾ ಮುಖ್ಯ ಶಿಕ್ಷಕ ಶ್ರೀಧರ್ ಗೌಡ ವರದಿ ವಾಚಿಸಿದರು. ಗೋಪಿನಾಥ್ ಮೆತ್ತಡ್ಕ ವಂದಿಸಿದರು.

ಲತಾಶ್ರಿ ಸುಪ್ರಿತ್ ಮೊಂಟಡ್ಕ ಹಾಗೂ ಕಿರಣ್ ಗುಡ್ಡೆಮನೆ ನಿರೂಪಿಸಿದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading