Ad Widget

ಕಲ್ಚೆರ್ಪೆ ರಸ್ತೆ ಬದಿ ನಿಲ್ಲಿಸಿದ ಲಾರಿಯ ಚಕ್ರ ಕದ್ದೊಯ್ದ ಕಳ್ಳರು- ಪೋಲಿಸ್ ದೂರು

. . . . . . . . .

ಪೆರಾಜೆ ಕಲ್ಚೆರ್ಪೆ ರಸ್ತೆ ಬದಿಯಲ್ಲಿ ನಿಲ್ಲಿಸಿದ ಲಾರಿಯ ಚಕ್ರವನ್ನು ಬಿಚ್ಚಿ ಕಳ್ಳತನ ಮಾಡಿರುವ ಘಟನೆ ಡಿ.3 ರಂದು ವರದಿಯಾಗಿದೆ.

. . . . . . .

ಕೇರಳದ ನೋಂದಣಿ ಸಂಖ್ಯೆ ಹೊಂದಿರುವ ಲಾರಿಯಾಗಿದ್ದು ಕುಂಬಳಚೇರಿಯಲ್ಲಿ ಮರದ ವ್ಯಾಪಾರಕ್ಕೆಂದು ಬಂದವರ ಲಾರಿ ಇದಾಗಿದ್ದು ಕಲ್ಚೆರ್ಪೆ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದು ರಾತ್ರಿ ಸಮಯದಲ್ಲಿ ಯಾರೋ ಕಿಡಿಗೇಡಿ ಕಳ್ಳರು ಹೊಂಚು ಹಾಕಿ ಲಾರಿಯ ಹಿಂಬದಿಯ 2 ಚಕ್ರವನ್ನು ಬಿಚ್ಚಿ ಕದ್ದೊಯ್ದಿದ್ದಾರೆ. ಸ್ಟೇಪಿನ್ ಟಯರ್ ನ್ನು ಹಾಗೆ ಬಿಟ್ಟು ಹೋಗಿದ್ದಾರೆ.

ಸ್ಥಳೀಯ ಅಂಗಡಿಯಲ್ಲಿ ಇರುವ ಸಿ.ಸಿ.ಟಿವಿ ಫೂಟೇಜ್ ಪರಿಶೀಲಿಸಿದಾಗ ಮುಂಜಾನೆ ಸಮಯದಲ್ಲಿ ಬೇರೊಂದು ಲಾರಿ ಬಂದು ಇದೇ ಲಾರಿ ಪಕ್ಕದಲ್ಲಿ ನಿಲ್ಲಿಸಿದ್ದ ದೃಶ್ಯ ಕಂಡು ಬಂದಿದೆ ಎಂದು ಸ್ಥಳೀಯರು ತಿಳಿಸಿರುತ್ತಾರೆ.

ಈ ಬಗ್ಗೆ ಸುಳ್ಯ ಪೋಲಿಸರಿಗೆ ದೂರು ನೀಡಲಾಗಿದ್ದು ಪ್ರಕರಣವನ್ನು ದಾಖಲಿಸಿಕೊಂಡಿರುವುದಾಗಿ ತಿಳಿದು ಬಂದಿದೆ.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading