Ad Widget

ಕಳಂಜ-ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 71ನೇ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ನಿ. ಬೆಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಸಹಕಾರಿ ಯೂನಿಯನ್ ನಿ. ಮಂಗಳೂರು, ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ. ಮಂಗಳೂರು, ಸಹಕಾರ ಇಲಾಖೆ, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ನಿ., ತಾಲೂಕಿನ ಎಲ್ಲಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಹಾಗೂ ಇತರ ಸಹಕಾರಿ ಸಂಘಗಳ ಸಹಕಾರದೊಂದಿಗೆ ಕಳಂಜ-ಬಾಳಿಲ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಆಶ್ರಯದಲ್ಲಿ 71ನೇ ಅಖಿಲ ಭಾರತ ಸಹಕಾರ ಸಪ್ತಾಹದ ಸಮಾರೋಪ ಸಮಾರಂಭ ನ.20ರಂದು ಸಂಘದ ಪ್ರಧಾನ ಕಚೇರಿ ಕೋಟೆಮುಂಡುಗಾರು ಸಹಕಾರಿ ಸದನದಲ್ಲಿ ನಡೆಯಿತು. ಶಾಸಕಿ ಕು.ಭಾಗೀರಥಿ ಮುರುಳ್ಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಭಾಗವಹಿಸಿ ಶುಭ ಹಾರೈಸಿದರು. ಬೆಳಗ್ಗೆ ನಡೆದ ಸಹಕಾರಿ ನಡಿಗೆಯನ್ನು ಉದ್ಘಾಟಿಸಿದ ವಿಧಾನ ಪರಿಷತ್ ಮಾಜಿ ಸದಸ್ಯ ಅಣ್ಣಾ ವಿನಯಚಂದ್ರ ಕಿಲಂಗೋಡಿ ಸಹಕಾರಿ ಸಪ್ತಾಹ ಸಹಕಾರಿ ಕ್ಷೇತ್ರದಲ್ಲಿ ಹೊಸತನವನ್ನು ಮತ್ತು ಬದಲಾವಣೆಯನ್ನು ತಂದಿದೆ ಎಂದರು. ಸಾಮಾಜಿಕ ಹಿತದೃಷ್ಟಿಯಿಂದ ಹುಟ್ಟಿಕೊಂಡ ಸಹಕಾರಿ ಸಂಸ್ಥೆ ಬೆಳೆಯುತ್ತಾ ಬೆಳೆಯುತ್ತಾ ಇಂದು ಬೃಹದಾಕಾರದಲ್ಲಿ ಬೆಳೆದಿದೆ. ಇದರಲ್ಲಿ ಮೊಳಹಳ್ಳಿ ಶಿವರಾಯರ ಕೊಡುಗೆ ಮಹತ್ತರವಾದದ್ದು. ಭಾರತ ಇಂದು ಸ್ವಾವಲಂಬಿಯಾಗಿದೆ ಎಂದರೆ ಅದು ಸಹಕಾರ ಸಂಘದ ಕೊಡುಗೆ, ಗ್ರೀನ್ ರೆವಲ್ಯೂಷನ್ ಮೂಲಕ ಆಹಾರ ಉತ್ಪಾದನೆಯಲ್ಲಿ ಭಾರತ ಇಂದು ವಿಶ್ವದಲ್ಲಿ 5ನೇ ಸ್ಥಾನದಲ್ಲಿದೆ. ಸಹಕಾರಿ ಸಂಸ್ಥೆ ಇಂದು ಪ್ರತಿಯೊಬ್ಬ ರೈತರಿಗೂ ತೆರೆದುಕೊಂಡಿದೆ. ಆ ಮೂಲಕ ಗ್ರಾಮಗಳ ಅಭಿವೃದ್ಧಿಯಾಯಿತು. ವಿಶ್ವ ಉಳಿಯಬೇಕಾದರೆ ಭಾರತ ಸದೃಢವಾಗಬೇಕು. ಅದು ಸಹಕಾರ ಕ್ಷೇತ್ರದಿಂದ ಸಾಧ್ಯ ಎಂದು ಸರಸ್ವತಿ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷ ಎಸ್.ಆರ್ ಸತೀಶ್ಚಂದ್ರ ಹೇಳಿದರು. ಅವರು ಉತ್ತಮ ವಿಶ್ವ ನಿರ್ಮಾಣ ಹಾದಿಗಾಗಿ ಹಾಗೂ ಸುಸ್ಥಿರ ಅಭಿವೃದ್ಧಿ ಗುರಿ ಸಾಧನೆಯಲ್ಲಿ ಸಹಕಾರ ಸಂಸ್ಥೆಗಳ ಪಾತ್ರ ವಿಷಯದ ಬಗ್ಗೆ ದಿಕ್ಸೂಚಿ ಭಾಷಣಗೈದರು. ದ.ಕ.ಜಿಲ್ಲಾ ಸಹಕಾರಿ ಯೂನಿಯನ್‌ ನಿ. ಮಂಗಳೂರು ಇದರ ಅಧ್ಯಕ್ಷರಾದ ಬೆಳ್ಳಿಪ್ಪಾಡಿ ಪ್ರಸಾದ್ ಕೌಶಲ್ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಸಂಸ್ಥೆಗೆ ರೂ.25 ಸಾವಿರದ ಚೆಕ್ ನೀಡಿದರು. ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಅಧ್ಯಕ್ಷ ಎಂ. ಕೂಸಪ್ಪ ಗೌಡ ಮುಗುಪ್ಪುರವರು ಮಾತನಾಡಿ ಸಹಕಾರಿ ಸಂಘಗಳು ಎಲ್ಲರೂ ಇವತ್ತು ಒಗ್ಗೂಡಿದ್ದೇವೆ. ಎಲ್ಲಾ ಸಹಕಾರಿಗಳ ಸಹಕಾರದಿಂದ ಇವತ್ತು ಸಹಕಾರಿ ಸಪ್ತಾಹದ ಸಮಾರೋಪ ಯಶಸ್ವಿಯಾಗಿದೆ. ನಮ್ಮ ಹಿರಿಯರು ಕಟ್ಟಿ ಬೆಳೆಸಿದ ಈ ಸಂಘವನ್ನು ಬೆಳೆಸುವ ಮಹತ್ತರ ಜವಾಬ್ದಾರಿ ನಮ್ಮ ಮೇಲಿದೆ ಎಂದರು. ಸಭಾ ಕಾರ್ಯಕ್ರಮ ಉದ್ಘಾಟಿಸಿದ ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಲಿ.ಮಂಗಳೂರು ಇದರ ನಿರ್ದೇಶಕರಾದ ಶಶಿಕುಮಾರ್ ರೈ ಬಾಲ್ಯೊಟ್ಟು ರೈತರಿಗೆ ಬೇಕಾದ ಎಲ್ಲಾ ಸೌಲಭ್ಯಗಳನ್ನು ಸಹಕಾರಿ ಸಂಘ ನೀಡುತ್ತದೆ. ರಾಷ್ಟ್ರೀಕೃತ ಬ್ಯಾಂಕುಗಳು ಸಾಲ ಸೌಲಭ್ಯಗಳನ್ನು ನೀಡಲು ಸತಾಯಿಸಿದರೆ ಸಹಕಾರಿ ಸಂಘಗಳು 0% ಮತ್ತು 3% ಬಡ್ಡಿ ದರದಲ್ಲಿ ಸದಸ್ಯರಿಗೆ ಸಾಲ ವಿತರಿಸಿ ರೈತರಿಗೆ ಬೆನ್ನೆಲುಬಾಗಿ ನಿಂತಿದೆ ಎಂದರು. ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕ ಎಸ್. ಎನ್.ಮನ್ಮಥ 2025 ರ ಕ್ಯಾಲೆಂಡ‌ರ್ ಬಿಡುಗಡೆ ಮಾಡಿ ಸಹಕಾರಿ ಚಳವಳಿಯ ಮೂಲಕ ಸಹಕಾರಿ ಸಂಘ ಬೆಳೆದು ಬಂದಿದೆ. ಮನಸ್ಸು ಮಾಡಿದರೆ ಒಂದು ಸಹಕಾರಿ ಸಂಘ ಇಡೀ ಗ್ರಾಮ, ತಾಲೂಕಿಗೆ ಅನುಕೂಲವಾಗುವ ಕಾರ್ಯಗಳನ್ನು ಮಾಡಲು ಸಾಧ್ಯ ಎಂದರು. ಕ್ಯಾಂಪ್ಕೋ ಲಿ.ಮಂಗಳೂರು ಇದರ ನಿರ್ದೇಶಕರಾದ ಕೃಷ್ಣಪ್ರಸಾದ್ ಮಡ್ತಿಲ ನೂತನ ಸಭಾಂಗಣವನ್ನು ಉದ್ಘಾಟಿಸಿ ಮಾತನಾಡಿ ರೈತರು ಬೆಳೆದ ಅಡಿಕೆಗೆ ರೂ.400 ರಿಂದ 500ರ ಗಡಿಯಲ್ಲಿದೆ ಎಂದಾದರೆ ಅದಕ್ಕೆ ಕ್ಯಾಂಪ್ಕೋ ಕಾರಣ ಎಂದರು. ಪುತ್ತೂರು ಸಹಕಾರ ಸಂಘಗಳ ಉಪವಿಭಾಗ ಸಹಾಯಕ ನಿಬಂಧಕರಾದ ಎಸ್.ಎಂ ರಘು, ಸುಳ್ಯ ತಾಲೂಕು ಸಹಕಾರಿ ಯೂನಿಯನ್ ಅಧ್ಯಕ್ಷರಾದ ರಮೇಶ್ ದೇಲಂಪಾಡಿ, ಕಳಂಜ ಗ್ರಾ.ಪಂ. ಅಧ್ಯಕ್ಷರಾದ ಬಾಲಕೃಷ್ಣ ಬೇರಿಕೆ, ಬಾಳಿಲ ಗ್ರಾ.ಪಂ. ಅಧ್ಯಕ್ಷೆ ಶ್ರೀಮತಿ ಪಾವನ ಜೋಗಿಬೆಟ್ಟು ಮತ್ತು ಸಂಘದ ಉಪಾಧ್ಯಕ್ಷರಾದ ಎನ್ ಕರುಣಾಕರ ಶೆಟ್ಟಿ ನಾಲ್ಗುತ್ತು, ನಿರ್ದೇಶಕರಾದ ಎನ್. ವಿಶ್ವನಾಥ ರೈ, ಸುಭಾಶ್ಚಂದ್ರ ರೈ ತೋಟ, ಭಾರತೀಶಂಕರ ಆದಳ, ಮೇದಪ್ಪ ಗೌಡ ತಂಟೆಪ್ಪಾಡಿ, ಸುಬ್ರಹ್ಮಣ್ಯ ಭಟ್ ಕಾವಿನಮೂಲೆ, ಶುಭಕುಮಾ‌ರ್ ಬಾಳೆಗುಡ್ಡೆ, ಶ್ರೀಮತಿ ಮಾಲಿನಿ ಪ್ರಸಾದ್, ಶ್ರೀಮತಿ ಪುಷ್ಪಾವತಿ ಬಾಳಿಲ ಹಾಗೂ ಶ್ರೀಮತಿ ಪಂಕಜಾಕ್ಷಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.

. . . . . . . . .

ಸಂಘದ ಮಾಜಿ ಅಧ್ಯಕ್ಷರುಗಳಾದ ಕೆದ್ದ ನರಸಿಂಹ ಭಟ್, ವಾರಣಾಶಿ ಗೋಪಾಲಕೃಷ್ಣ ಭಟ್, ಪಿ.ಜಿ.ಎಸ್.ಎನ್ ಪ್ರಸಾದ್, ರಾಧಾಕೃಷ್ಣ ಕೋಟೆ, ಎನ್.ವಿಶ್ವನಾಥ ರೈ ಮತ್ತು ನಿವೃತ್ತ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ಶಂಕರನಾರಾಯಣ ಭಟ್ ನಡುಮನೆ ಮತ್ತು ಕೆ. ವೆಂಕಪ್ಪಯ್ಯ, ವಿವಿಧ ಸಹಕಾರಿ ಸಂಸ್ಥೆಗಳ ನಿವೃತ್ತ ಸಿಬ್ಬಂದಿಗಳಾದ ರವೀಂದ್ರ ರೈ ಬೆಳ್ಳಾರೆ, ಕೆ.ಸಿ. ದಿನೇಶ್ ಸುಳ್ಯ, ಶಿವಪ್ರಸಾದ್‌, ಕುಮಾರ ಸಿ.ಹೆಚ್, ಕೃಷ್ಣ ಬಾಳಿಲರನ್ನು ಹಾಗೂ ದ.ಕ. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ನಿರ್ದೇಶಕರಾದ ಶಶಿಕುಮಾ‌ರ್ ರೈ ಬಾಲ್ಯೊಟ್ಟು ಮತ್ತು ಎಸ್.ಎನ್. ಮನ್ಮಥರನ್ನು ಸನ್ಮಾನಿಸಲಾಯಿತು. ಕ್ರೀಡಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಘದ ಸಿಬ್ಬಂದಿ ಶ್ರೀಮತಿ ಗೀತಾಶ್ರೀ ಬಹುಮಾನ ವಿಜೇತರ ಪಟ್ಟಿ ವಾಚಿಸಿದರು. ಸಂಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ನಾಯಕ್ ತಡಗಜೆ ಪ್ರಾಸ್ತಾವಿಕ ಮಾತುಗಳನ್ನಾಡಿ, ಸಂಘದ ವರದಿ ವಾಚಿಸಿದರು. ಸಂಘದ ನಿರ್ದೇಶಕರಾದ ಬಿ. ಸುಭಾಶ್ಚಂದ್ರ ರೈ ತೋಟ ಸ್ವಾಗತಿಸಿ, ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ವಂದಿಸಿದರು. ಉದ್ಯಮಿ ವಸಂತ ಶೆಟ್ಟಿಯವರು ಅಂದಾಜು ರೂ.1.5ಲಕ್ಷ ವೆಚ್ಚದಲ್ಲಿ ಸಂಘಕ್ಕೆ ಕೊಡುಗೆಯಾಗಿ ನೀಡಿದ ಶವ ಸಂಸ್ಕಾರದ ಪೆಟ್ಟಿಗೆಯನ್ನು ಎಸ್.ಎನ್. ಮನ್ಮಥ ತೆಂಗಿನಕಾಯಿ ಒಡೆಯುವ ಮೂಲಕ ಉದ್ಘಾಟಿಸಿದರು. ಸಂಘದ ಸಿಬ್ಬಂದಿಗಳಾದ ಗೀತಾ ಮತ್ತು ಬಳಗದವರು ಪ್ರಾರ್ಥಿಸಿದರು. ನಿವೃತ್ತ ಶಿಕ್ಷಕ ರಾಮಚಂದ್ರ ಭಟ್ ಮುಗುಳಿ ಮತ್ತು ನಿರ್ದೇಶಕ ಅಜಿತ್ ರಾವ್ ಕಿಲಂಗೋಡಿ ಕಾರ್ಯಕ್ರಮ ನಿರೂಪಿಸಿದರು. ವಿವಿಧ ಸಹಕಾರಿ ಸಂಸ್ಥೆಗಳ ಅಧ್ಯಕ್ಷರುಗಳು, ನಿರ್ದೇಶಕರು, ಸಿಇಒ ಮತ್ತು ಸಿಬ್ಬಂದಿಗಳು, ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಕಳಂಜ ಬಾಳಿಲ ಪ್ರಾ.ಕೃ.ಪ.ಸ.ಸಂಘದ ಸಿಬ್ಬಂದಿಗಳು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿದರು. ಮಧ್ಯಾಹ್ನ ಭೋಜನದ ಬಳಿಕ ಜಿಲ್ಲೆಯ ಪ್ರಸಿದ್ದ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ತಾಳಮದ್ದಳೆ ವೀರಮಣಿ ಕಾಳಗ ನಡೆಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading