ಬಹುದಿನಗಳ ಬೇಡಿಕೆಯಾಗಿದ್ದ ಕುಕ್ಕೆ ಸುಬ್ರಹ್ಮಣ್ಯದ ನೂತನ ಪೋಲಿಸ್ ಠಾಣೆಯ ಕಟ್ಟಡ ಕಾಮಗಾರಿ ಪೂರ್ಣಗೊಂಡರೂ, ಇನ್ನು ಉದ್ಘಾಟನೆ ಕಾಣದೇ ಪೋಲಿಸರು ಶಿಥಿಲಾವಸ್ಥೆಯಲ್ಲಿರುವ ಹಳೆಯ ಕಟ್ಟಡದಲ್ಲಿಯೇ ಕಾಲ ಕಳೆಯಬೇಕಾಗಿದೆ.
ಈ ಹಿಂದೆ ಶಾಸಕರು , ಸಚಿವರು ಮತ್ತು ಹಿರಿಯ ಅಧಿಕಾರಿಗಳ ಸಮ್ಮುಖದಲ್ಲಿ ಉದ್ಘಾಟನೆಗೆ ದಿನ ನಿಗದಿಯಾದರೂ ಮತ್ತೆ ಮತ್ತೆ ಬದಲಾವಣೆ ಆಗುತ್ತಿದ್ದು, ಸುಬ್ರಹ್ಮಣ್ಯ ಚಂಪಾಷಷ್ಠಿಗೆ ಮೊದಲಾದರೂ ನೂತನ ಕಟ್ಟಡ ಉದ್ಘಾಟನೆಯಾಗಿ ಪೋಲಿಸರು ಹಳೆಯ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಬರುವಂತಾಗಲಿ. ಜಾತ್ರೋತ್ಸವದ ಬಂದೋಬಸ್ತ್ ಗೆ ಹೆಚ್ಚುವರಿ ಪೋಲೀಸರು ಆಗಮಿಸುತ್ತಿರುವುದರಿಂದ ಸಕಲ ವ್ಯವಸ್ಥೆಗಳಿಗೆ ಅನುಕೂಲವಾಗುವುದರಿಂದ ಸರಕಾರ ಶೀಘ್ರ ಉದ್ಘಾಟನೆ ನೆರವೇರಿಸಲಿ ಅನ್ನುವುದೇ ನಮ್ಮ ಹಾರೈಕೆ.