Ad Widget

ಕುಕ್ಕೆ: ಗಣೇಶೋತ್ಸವ ಸಂಪನ್ನ: ಅದ್ದೂರಿ ಶೋಭಾಯಾತ್ರೆ : ಪುಣ್ಯನದಿ ಕುಮಾರಧಾರದಲ್ಲಿ ಜಲಸ್ಥಂಭನ : ಹರಿದು ಬಂದ ಭಕ್ತಸಾಗರ : ಆಕರ್ಷಕ ಸ್ಥಬ್ದಚಿತ್ರ

. . . . . . . . .

. . . . . . .

ಚಿತ್ರ : ಶಾಂತಲಾ ಸುಬ್ರಹ್ಮಣ್ಯ
ಸುಬ್ರಹ್ಮಣ್ಯ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಸುಬ್ರಹ್ಮಣ್ಯ ಇದರ ವತಿಯಿಂದ ೫೪ನೇ ವರ್ಷದ ಗಣೇಶೋತ್ಸವವು ವಿವಿಧ ವೈಧಿಕ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿAದ ಜರುಗಿತು. ಈ ಧಾರ್ಮಿಕ ಕಾರ್ಯವು ಶ್ರೀ ಗಣಪತಿ ಶೋಭಾಯಾತ್ರೆ ಮೂಲಕ ಶುಕ್ರವಾರ ಸಂಪನ್ನಗೊAಡಿತು. ರಾತ್ರಿ ಪುಣ್ಯನದಿ ಕುಮಾರಧಾರದಲ್ಲಿ ಪುರೋಹಿತರು ವೈಧಿಕ ವಿದಿವಿಧಾನಗಳನ್ನು ನೆರವೇರಿಸಿದ ಬಳಿಕ ಶ್ರೀ ದೇವರ ವಿಗ್ರಹವನ್ನು ಜಲಸ್ಥಂಭನಗೊಳಿಸಲಾಯಿತು. ಈ ಮೂಲಕ ೫೪ನೇವರ್ಷದ ಗಣೇಶೋತ್ಸವವು ಸುಸಂಪನ್ನಗೊAಡಿತು. ಸಹಸ್ರಾರು ಭಕ್ತರು ಭಕ್ತಿ ಸಡಗರದಿಂದ ಈ ದೇವತಾ ಕಾರ್ಯದಲ್ಲಿ ಪಾಳ್ಗೊಂಡಿದ್ದರು.ಮೆರವಣಿಗೆಯ ಉದ್ದಕ್ಕೂ ಭಕ್ತಾಧಿಗಳು ಅಲ್ಲಲ್ಲಿ÷ ಶ್ರೀ ದೇವರಿಗೆ ಹಣ್ಣುಕಾಯಿ ಮಂಗಳಾರತಿ ನೀಡಿದರು.


ಸಪ್ತಾಶ್ವದ ಬೆಳ್ಳಿ ರಥ:
ಶ್ರೀ ಗಣಪತಿ ಶೋಭಾಯಾತ್ರೆಯು ಶ್ರೀ ದೇವಳದ ರಥಬೀದಿಯಿಂದ ಸಂಜೆ ಆರಂಭಗೊAಡಿತು. ಸಪ್ತಾಶ್ವದ ಬೆಳ್ಳಿ ರಥದಲ್ಲಿ ಶ್ರೀ ಗಣಪತಿಯ ಶೋಭಾಯಾತ್ರೆ ನೆರವೇರಿತು. ಕುಮಾರಧಾರದಲ್ಲಿ ಸಮಿತಿ ವತಿಯಿಂದ ಶ್ರೀ ದೇವರ ಪ್ರಸಾದ ರೂಪದಲ್ಲಿ ಶೋಭಾಯಾತ್ರೆಯಲ್ಲಿ ಭಾಗವಹಿಸಿದ ಭಕ್ತರಿಗೆ ಉಪಹಾರ ವಿತರಿಸಲಾಯಿತು.ಅಲ್ಲದೆ ಕುಕ್ಕೆಶ್ರೀ ಅಟೋ ಚಾಲಕ ಮಾಲಕರ ಸಂಘದಿAದ ಶೋಭಾಯಾತ್ರೆಯಲ್ಲಿ ಭಾಗವಹಿಸಿದ್ದ ಭಕ್ತರಿಗೆ ಪಾನಕ ವ್ಯವಸ್ಥೆ ಮಾಡಲಾಗಿತ್ತು.ಆಕರ್ಷಕ ಸಿಡಿಮದ್ದು ಪ್ರದರ್ಶನ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತ್ತು.
ಆಕರ್ಷಕ ಸ್ತಬ್ಧಚಿತ್ರಗಳು:
ಶೋಭಾಯಾತ್ರೆಯಲ್ಲಿ ಹಲವು ಸ್ತಬ್ದಚಿತ್ರಗಳು ಭಾಗವಹಿಸಿ ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಸುಬ್ರಹ್ಮಣ್ಯ ಮಠದಿಂದ ಕದಂಬ ವನದಲ್ಲಿ ಶ್ರೀದೇವಿ, ಕುಕ್ಕೆಶ್ರೀ ಟ್ಯಾಕ್ಸಿ ಚಾಲಕ ಮಾಲಕರ ಸಂಘದಿAದ ಸುಬ್ರಹ್ಮಣ್ಯ ಮಹಾತ್ಮೆ, ಸುಬ್ರಹ್ಮಣ್ಯದ ಸ್ಕಂಧಶ್ರೀ ಯುವ ಮಲೆಕುಡಿಯರ ಸಂಘದಿAದ ಭಾಸ್ಕರ್ ಅರ್ಗುಡಿ ನೇತೃತ್ವದಲ್ಲಿ ತಾವರೆಯ ಮೇಲೆ ಕುಳಿತ ಲಕ್ಷಿö್ಮ, ವಿಶ್ವಹಿಂದೂ ಪರಿಷತ್ ಬಜರಂಗ ದಳದಿಂದ, ಕುಕ್ಕೆ ಮೇಟ್ಸ್ ಸುಬ್ರಹ್ಮಣ್ಯ ಸೇರಿದಂತೆ ಇತರ ಸಂಘ ಸಂಸ್ಥೆಗಳಿAದ ಸ್ತಬ್ದಚಿತ್ರ ರಚಿಸಲಾಗಿತ್ತು.


ಕುಣಿತ ಭಜನೆ:
ಶ್ರೀ ಸದಾನಂದ ಆಚಾರ್ಯ ಕಾಣಿಯೂರು ಮಾರ್ಗದರ್ಶನದ ಕುಣಿತ ಭಜನಾ ತಂಡ ಮತ್ತು ಎಬಿವಿಪಿ ಸ್ವಯಂ ಸೇವಕರ ಕುಣಿತ ಭಜನಾ ತಂಡವು ಮೆರವಣಿಗೆಯ ಮೆರುಗನ್ನು ಹೆಚ್ಚಿಸಿತು. ಸುಮಾರು ೯೫ ಮಂದಿ ಶ್ರೀ ದೇವರ ಮೆರವಣಿಗೆಯುದ್ದಕ್ಕೂ ಭಜನೆ ನೆರವೇರಿಸಿದರು. ಕಪಿಲ ಚೆಂಡೆ ಬಳಗದಿಂದ ಮತ್ತು ಶರತ್ ಅಮ್ಮಣ್ಣಾಯ ನೇತೃತ್ವದಲ್ಲಿ ಸಿಂಗಾರಿ ಮೇಳವು ಶೋಭಾಯಾತ್ರೆಯ ಆಕರ್ಷಣೆಯಾಗಿತ್ತು. ಕುಕ್ಕೆಮೇಟ್ಸ್ ತಂಡದಿAದ ಆಯೋಜಿಸಲ್ಪಟ್ಟ ಡಿಜೆ ಮೇಳ ಯುವ ಜನಾಂಗವನ್ನು ಆಕರ್ಷಿಸಿತು.ನಾಸಿಕ್ ಬ್ಯಾಂಡ್ ಮೇಳವೂ ಮೆರವಣಿಗೆಯಲ್ಲಿತ್ತು.

ಸುಬ್ರಹ್ಮಣ್ಯ ಠಾಣಾಧಿಕಾರಿ ಕಾರ್ತಿಕ್.ಕೆ ನೇತೃತ್ವದಲ್ಲಿ ಶಾಂತಿ ಸುವ್ಯವಸ್ಥೆಯನ್ನು ವ್ಯವಸ್ಥಿತವಾಗಿ ಸುಬ್ರಹ್ಮಣ್ಯ ಪೋಲೀಸರು ಕಾಪಾಡಿದ್ದರು.ಠಾಣಾಧಿಕಾರಿಗಳು ನಿರಂತರ ೬ ಗಂಟೆಗಳ ಕಾಲ ಮೆರವಣಿಗೆಯುದ್ದಕ್ಕೂ ಉಪಸ್ಥಿತರಿದ್ದು ಸೂಕ್ತ ಬಂದೋಬಸ್ತ್ ಒದಗಿಸಿದ ಠಾಣಾಧಿಕಾರಿಗಳ ಕಾರ್ಯವೈಖರಿಯನ್ನು ಸಾರ್ವಜನಿಕರು ವಿಶೇಷವಾಗಿ ಶ್ಲಾಘಿಸಿದ್ದಾರೆ.
ಈ ಸಂದರ್ಭ ಸಮಿತಿಯ ಅಧ್ಯಕ್ಷ ದಿನೇಶ್ ಮೊಗ್ರ, ಸಂಚಾಲಕರಾದ ಎ.ವೆಂಕಟ್ರಾಜ್, ಕೆ.ಯಜ್ಞೇಶ್ ಆಚಾರ್, ರಾಜೇಶ್.ಎನ್.ಎಸ್, ನಿಕಟಪೂರ್ವಾಧ್ಯಕ್ಷ ದಿನೇಶ್ ಸಂಪ್ಯಾಡಿ, ಪ್ರಧಾನ ಕಾರ್ಯದರ್ಶಿ ರತ್ನಾಕರ ಸುಬ್ರಹ್ಮಣ್ಯ,ಕಾರ್ಯದರ್ಶಿ ದೀಪಕ್ ನಂಬಿಯಾರ್, ಉಪಾಧ್ಯಕ್ಷರಾದ ಯಶೋಧಕೃಷ್ಣ ನೂಚಿಲ, ವಿನ್ಯಾಸ್ ಹೊಸೋಳಿಕೆ, ಭರತ್ ನೆಕ್ರಾಜೆ, ನಿತಿನ್ ಭಟ್, ಮಹೇಶ್ ಗುಡ್ಡೆಮನೆ, ಭಾರತಿ ದಿನೇಶ್, ಪ್ರಧಾನ ಕೋಶಾಧಿಕಾರಿ ಶ್ರೀಕೃಷ್ಣ ಶರ್ಮ, ಕೋಶಾಧಿಕಾರಿ ಹರಿಪ್ರಸಾದ್ ನಾಯರ್ ಮಲ್ಲಾಜೆ, ಜತೆ ಕಾರ್ಯದರ್ಶಿಗಳಾದ ಮನೋಜ್ ಕುಮಾರ್.ಎಸ್, ಜಯರಾಮ ಎಚ್.ಎಲ್, ಸಹಕೋಶಾಧಿಕಾರಿಗಳಾದ ಅಚ್ಚುತ್ತ ಗೌಡ, ಶ್ರೀಕುಮಾರ್ ಬಿಲದ್ವಾರ, ಸುಹಾಸ್ ಎಚ್.ಎಸ್, ದೇವಿ ಚರಣ್ ಕಾನಡ್ಕ ಸೇರಿದಂತೆ ಸಮಿತಿ ಪದಾಧಿಕಾರಿಗಳು ಮತ್ತು ಸಹಸ್ರಾರು ಭಕ್ತರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading