Ad Widget

ಪೆರಾಜೆ ; ಚಿಗುರು ಯುವಕ ಮಂಡಲದ ನೂತನ ಪದಾಧಿಕಾರಿಗಳ ಆಯ್ಕೆ – ಅಧ್ಯಕ್ಷರಾಗಿ ರಮೇಶ್ ಮಜಿಕೋಡಿ, ಉಪಾಧ್ಯಕ್ಷರಾಗಿ ದಿವ್ಯಪ್ರಕಾಶ್ ಕೊಳಂಗಾಯ, ಕಾರ್ಯದರ್ಶಿಯಾಗಿ ಯತಿಶ್ಯಾಮ್ ಕುಂಬಳಚೇರಿ, ಕೋಶಾಧಿಕಾರಿಯಾಗಿ ಹರ್ಷಿತ್ ಎನ್ ಮಜಿಕೋಡಿ

ಪೆರಾಜೆ:- 2023-24 ನೇ ಸಾಲಿನ ಚಿಗುರು ಯುವಕಮಂಡಲ(ರಿ) ಪೆರಾಜೆ ಇದರ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಭುವನ್ ಕುಂಬಳಚೇರಿಯವರ ಅಧ್ಯಕ್ಷತೆಯಲ್ಲಿ ಶ್ರೀ ವಯನಾಟ್ ಕುಲವನ್ ದೈವಸ್ಥಾನ ಇದರ ಸಭಾಂಗಣದಲ್ಲಿ ನಡೆಯಿತು .ಹಾಲಿ ವರ್ಷದ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡನೆಯನ್ನು ಸಭೆಯಲ್ಲಿ ಮಾಡಲಾಯಿತು . ನಂತರ ನಡೆದ ಸಭೆಯಲ್ಲಿ 2024-25ನೇ ಸಾಲಿಗೆ ನೂತನ ಆಡಳಿತಮಂಡಳಿಯನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ರಮೇಶ್ ಮಜಿಕೋಡಿ ,ಉಪಾಧ್ಯಕ್ಷರಾಗಿ ದಿವ್ಯಪ್ರಕಾಶ್ ಕೊಳಂಗಾಯ ,ಕಾರ್ಯದರ್ಶಿಯಾಗಿ ಯತಿಶ್ಯಾಮ್ ಕುಂಬಳಚೇರಿ ಮತ್ತು ಕೋಶಾಧಿಕಾರಿಯಾಗಿ ಹರ್ಷಿತ್ ಎನ್ ಮಜಿಕೋಡಿ ಇವರು ಆಯ್ಕೆಯಾದರು .ಕ್ರೀಡಾ ಕಾರ್ಯದರ್ಶಿಯಾಗಿ ರಜತ್ (ಹರ್ಷಿತ್) ಮಜಿಕೋಡಿ ಮತ್ತು ಪ್ರಣೀತ್ ಕುಂಬಳಚೇರಿ ಹಾಗೂ ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ರಾಜೇಶ್ ವಿ ಕುಂಬಳಚೇರಿ ಮತ್ತು ಪುನೀತ್ ನೆಕ್ಕಿಲ ಹಾಗೂ ನಿರ್ದೇಶಕರಾಗಿ ಹೇಮಕುಮಾರ ಕುಂಬಳಚೇರಿ ಇವರನ್ನು ಆಯ್ಕೆ ಮಾಡಲಾಯಿತು . ಕಾರ್ಯಕ್ರಮವನ್ನು ಶೀತಲ್ ಕುಂಬಳಚೇರಿ ಪ್ರಾರ್ಥಿಸಿ ,ಕಾರ್ಯದರ್ಶಿ ಜೀವನ್ ಮಜಿಕೋಡಿ ಸ್ವಾಗತಿಸಿ ಕೋಶಾಧಿಕಾರಿ ಪ್ರವೀಣ್ ಮಜಿಕೋಡಿ ವಂದಿಸಿದರು.
ಈ ಸಂದರ್ಭ ಸಂಘದ ಉಪಾಧ್ಯಕ್ಷ ಪ್ರದೀಪ್ ಕುಂಬಳಚೇರಿ , ಸಂಘದ ಮಾಜಿ ಅಧ್ಯಕ್ಷರು ಪದಾಧಿಕಾರಿಗಳು ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading