Ad Widget

ಸುಳ್ಯದ ಕುವರಿ ಪೂಜಾ ಬೋರ್ಕರ್ ರ ಪೆನ್ಸಿಲ್ ಆರ್ಟ್ ಗೆ ಜೆಸಿಐ ರಾಷ್ಟ್ರೀಯ ಅಧ್ಯಕ್ಷರಿಂದ ಮನ್ನಣೆ.

ಜೇಸಿಐ ಶಂಕರಪುರ ಜಾಸ್ಮಿನ್ ವತಿಯಿಂದ ನಡೆದ ರಾಷ್ಟ್ರೀಯ ಅಧ್ಯಕ್ಷರ ಅಧಿಕೃತ ಭೇಟಿ ಮತ್ತು ಮಲ್ಟಿಲೋ ಮೀಟ್ ಕಾರ್ಯಕ್ರಮದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಅಧ್ಯಕ್ಷರ ಭಾವಚಿತ್ರದ ಪೆನ್ಸಿಲ್ ಆರ್ಟ್ ಬಿಡಿಸುವ ಸ್ಪರ್ಧೆಯಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕದಿಂದಾ ಸ್ಪರ್ಧಿಸಿದ ಸುಳ್ಯ ಶಾಂತಿನಗರ ಬೆಟ್ಟಂಪಾಡಿ ನಿವಾಸಿ ಪೂಜಾ ಬೋರ್ಕಾರ್ ರಚಿಸಿದ ಪೆನ್ಸಿಲ್ ಆರ್ಟ್ ಗೆ ಪ್ರಥಮ ಬಹುಮಾನ ಲಭಿಸಿದೆ.

. . . . . . . . .

ಪ್ರಶಸ್ತಿ ಪ್ರಧಾನ ಸಮಾರಂಭದ ವೇದಿಕೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಜೆ ಎಫ್.ಎಸ್ ರಾಕೇಶ್ ಶರ್ಮಾ, ವಲಯಾಧ್ಯಕ್ಷ ಸೆನ್. ಅಡ್ವ್.ಗಿರೀಶ್ ಎಸ್. ಪಿ, ರಾಷ್ಟ್ರೀಯ ಉಪಾಧ್ಯಕ್ಷ ಕಾರ್ತಿಕೇಯ ಮಧ್ಯಸ್ಥ ಹಾಗೂ ವಲಯಾದಿಕಾರಿಗಳು, ವಲಯ ಉಪಾಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ರಾಷ್ಟ್ರೀಯ ಅಧ್ಯಕ್ಷರು ಮನ್ನಣೆ ನೀಡಿ ಗೌರವಿಸಿದರು..

. . . . . . .

ಪ್ರಥಮ ಬಹುಮಾನ ಪಡೆದ ಪೆನ್ಸಿಲ್ ಆರ್ಟ್ ಚಿತ್ರವನ್ನು ಸುಳ್ಯ ಪಯಸ್ವಿನಿ ಘಟಕದ ಅಧ್ಯಕ್ಷ ಗುರುಪ್ರಸಾದ್ ನಾಯಕ್ ರಾಷ್ಟ್ರೀಯ ಅಧ್ಯಕ್ಷರಿಗೆ ನೀಡಿದರು .


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading