Ad Widget

ಕೊರಂಗುಬೈಲು ಗದ್ದೆಯಲ್ಲಿ ಭತ್ತ ಬೇಸಾಯ – ಶಾಲಾ ಮಕ್ಕಳ ಶಿಕ್ಷಕರು ನಾಗರಿಕರ ಜೊತೆಗೆ ಸಂವಾದ ನಡೆಸಿದ ಕೃಷಿ ನಿರ್ದೇಶಕ ಗುರುಪ್ರಸಾದ್ ಎಂ ಎಸ್ 

ಭತ್ತ ಕೃಷಿಗಳಿಗೆ ಔಷಧಿ, ಯಂತ್ರೋಪಕರಣಗಳ ಸಹಾಯ ನೀಡುವ ಭರವಸೆ



ಅಜ್ಜಾವರ : ಅಜ್ಜಾವರ ಗ್ರಾಮದ ಕೊರುಂಗು ಬೈಲು ಗದ್ದೆಯಲ್ಲಿ ಸ್ಥಳೀಯ ಸಂಘ ಸಂಸ್ಥೆಗಳ ನೇತೃತ್ವದಲ್ಲಿ ಭತ್ತದ ನಾಟಿ ಕಾರ್ಯಕ್ರಮವು ನಡೆಯಿತು.

ಭತ್ತದ ನಾಟಿ ಕಾರ್ಯಕ್ರಮದಲ್ಲಿ ಸುಮಾರು ಇನ್ನೂರಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಮತ್ತು ಶಿಕ್ಷಕರು ಊರಿನ ನಾಗರಿಕರು ಮಹಿಳೆಯರು ಭಾಗವಹಿಸಿದ್ದು ಭತ್ತದ ನಾಟಿ ಕಾರ್ಯಕ್ರಮಕ್ಕೆ ಸುಳ್ಯ ಕೃಷಿ ನಿರ್ದೇಶಕರಾದ ಗುರುಪ್ರಸಾದ್ ಎಂ ಎಸ್ ರವರು ಆಗಮಿಸಿ ಕೃಷಿಯ ಬಗ್ಗೆ ವಿವರಿಸಿ ಮಕ್ಕಳ ಮತ್ತು ಮಹಿಳೆಯರ ಭತ್ತದ ನಾಟಿಯ ಪಾಡ್ದನಗಳನ್ನು ಆಸ್ವಾದಿಸಿದರು. ಅಲ್ಲದೇ ಕೃಷಿ ಚಟುವಟಿಕೆಗಳ ಬಗ್ಗೆ ವಿದ್ಯಾರ್ಥಿ ಗಳು ಹಾಗೂ ಶಿಕ್ಷಕರಿಗೆ ಮಾಹಿತಿ ನೀಡಿದರು. ಅವರು ಕಾರ್ಯಕ್ರಮದಲ್ಲಿ ತನ್ನ ಕಾಲೇಜು ಜೀವನದ ಕ್ಷಣಗಳನ್ನು ನೆನಪಿಸಿಕೊಂಡರಲ್ಲದೆ ತನ್ನೂರಿನ ಗದ್ದೆಯಲ್ಲಿನ ಕೆಲಸಗಳು ಮತ್ತು ಗದ್ದೆಯಲ್ಲಿ ಔಷಧೀಯ ಗುಣಗಳನ್ನು ವಿವರಿಸಿದರು. ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಗದ್ದೆಯ ಮಾಲಿಕರಾದ ಬಾಲಕೃಷ್ಣ ನಾಯ್ಕ್ ಅಜ್ಜಾವರ ಸೇರಿದಂತೆ ಇತರರು ಉಪಸ್ಥಿತರಿದ್ದರು.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading