Ad Widget

ಜುಲೈ 01 ರಂದು ಸುಬ್ರಹ್ಮಣ್ಯ ಲಯನ್ಸ್ ಕ್ಲಬ್ ಪದಗ್ರಹಣ ಕಾರ್ಯಕ್ರಮ



ಲಯನ್ಸ್ ಕ್ಲಬ್ ಕುಕ್ಕೆ ಸುಬ್ರಹ್ಮಣ್ಯ ಇದರ 2024-25 ನೇ ಸಾಲಿನ ನೂತನ ಅಧ್ಯಕ್ಷ ಹಾಗೂ ಪದಾಧಿಕಾರಿಗಳ ಪದಗ್ರಹಣ ಮತ್ತು ಚಾರ್ಟರ್ ನೈಟ್ ಸಮಾರಂಭವು ಜುಲೈ 01 ಸೋಮವಾರದಂದು ಏನೇಕಲ್ಲು ಸಂತೃಪ್ತಿ ಕೃಷಿ ಸಹಕಾರಿ ಸಂಘದ ಸಭಾಭವನದಲ್ಲಿ ನಡೆಯಲಿರುವುದು.
ಪದಗ್ರಹಣ ಅಧಿಕಾರಿಯಾಗಿ ಲಯನ್ಸ್ ಡಿಸ್ಟ್ರಿಕ್ಟ್ 317ಡಿ ದ್ವಿತೀಯ ಉಪರಾಜ್ಯಪಾಲರಾದ ಹೆಚ್. ಎಂ. ತಾರಾನಾಥ್ ನೆರವೇರಿಸಿಕೊಡಲಿರುವರು. ಚಾರ್ಟರ್ ನೈಟ್ ಕಾರ್ಯಕ್ರಮವನ್ನು ಪೂರ್ವ ರಾಜ್ಯಪಾಲರಾದ ಎಂ.ಬಿ.ಸದಾಶಿವ  ನಡೆಸಿಕೊಡಲಿರುವರು.
ಈ ಕಾರ್ಯಕ್ರಮದಲ್ಲಿ ಮರ್ದಾಳದ ಬೆಥನಿ ಜೀವನ್ ಜ್ಯೋತಿ ವಿಶೇಷ ಚೇತನ ಮಕ್ಕಳಿಗೆ ಶಾಲೆಯ ಮಧ್ಯಾಹ್ನದ ಭೋಜನದ ಅನ್ನದಾನಕ್ಕೆ ರೂ.10,000 ಧನಸಹಾಯ ನೀಡಲಾಗುವುದು, ದೇವರಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗೆ ಪೀಠೋಪಕರಣ ಕೊಡುಗೆ ನೀಡಲಾಗುವುದು, ಕುಮಾರಸ್ವಾಮಿ ವಿದ್ಯಾಲಯದ ಮತ್ತು ಎಸ್.ಎಸ್.ಪಿ.ಯು. ವಿದ್ಯಾಸಂಸ್ಥೆಯ ಎಸ್.ಎಸ್.ಎಲ್.ಸಿ ಮತ್ತು ಪಿ.ಯು.ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಗುವುದೆಂದು ಲಯನ್ಸ್ ಕ್ಲಬ್ ನ ಅಧ್ಯಕ್ಷರಾದ ರಾಮಚಂದ್ರ ಪಳಂಗಾಯ, ಸ್ಥಾಪಕಾಧ್ಯಕ್ಷರಾದ ಪ್ರೊ.ಕೆ ರಂಗಯ್ಯ ಶೆಟ್ಟಿಗಾರ್, ನೂತನ ಅಧ್ಯಕ್ಷರಾದ ರಾಜೇಶ್ ಎನ್.ಎಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading