Ad Widget

ಕರೆ ಬಂದ ಕ್ಷಣಮಾತ್ರದಲ್ಲಿ ಹಾಜರಾಗಿ , ಕ್ಷಿಪ್ರವಾಗಿ ಕಾರ್ಯನಿರ್ವಹಿಸಿ ನೆಚ್ಚಿನ ಜೀವರಕ್ಷಕ ವಾಹನ ಚಾಲಕ

ಬೆಳ್ಳಂಬೆಳಗ್ಗೆ ಆಗಮಿಸಿ ತುಂಬಿ ಹರಿಯುವ ಹೊಳೆಯಿಂದ ಕಾಣೆಯಾದ ಯುವಕನ ಶೋಧನೆ ನಡೆಸಿ ಯಶಸ್ವಿಯಾದ ಹೀರೋ 

ವಿಪತ್ತು ನಿರ್ವಹಣಾ ತಂಡದ ಸದಸ್ಯ , ಅಂಬ್ಯುಲೆಂನ್ಸ್ ಚಾಲಕ ಯಾರು ಗೊತ್ತಾ , ಇವರು ನಡೆಸಿದ ಕಾರ್ಯಚರಣೆಯ ಸಂಪೂರ್ಣ ಮಾಹಿತಿ ಇಲ್ಲಿದೆ.


ಸುಳ್ಯ: ಸುಳ್ಯದಲ್ಲಿ ಹಲವಾರು ಜೀವ ರಕ್ಷಕ ವಾಹನಗಳು ಇದ್ದು ಅವುಗಳಲ್ಲಿ ಕಾರ್ಯನಿರ್ವಹಿಸುವ ಪ್ರತಿಯೊಬ್ಬರು ಕೂಡ ಆಪತ್ಬಾಂಧವರೆ ಆಗಿದ್ದು ಸಮಾಜದಲ್ಲಿ  ತಮ್ಮದೇ ಛಾಪು ಮೂಡಿಸಿದ್ದಾರೆ. ಅವರಲ್ಲೊಬ್ಬ ವ್ಯಕ್ತಿ ಮಾತ್ರ ಎಲ್ಲರಿಗು ಬಹಳ ಪ್ರಿಯವಾದ ವ್ಯಕ್ತಿ.  ಹೆಸರಿನಲ್ಲಿ ಗುಣದಲ್ಲಿ ಜಾತಿ ತೋರಿಸದೇ ತಮ್ಮ ಕೆಲಸದಲ್ಲಿಯೇ ದೇವರನ್ನು ಕಾಣುವ ಈ ವ್ಯಕ್ತಿ ಸುಳ್ಯದ ಪ್ರತಿಯೊಬ್ಬ  ಪೊಲೀಸ್, ಜನಪ್ರತಿನಿಧಿಗಳು , ಆರೋಗ್ಯ ಇಲಾಖೆ ಸೇರಿದಂತೆ ಇತರೆ ಸರಕಾರಿ ಇಲಾಖೆಗಳಲ್ಲಿ ತಮಗೆ ತುರ್ತು ಅಥವಾ ಇದನ್ನು ಮುಟ್ಟುವವರಾರು ಎಂದಾಗ ಎಲ್ಲರ ಬಾಯಲ್ಲಿ ಕೇಳಿ ಬರುವ ಮೊದಲ ಹೆಸರೇ ಅಚ್ಚು…

ಜೀವರಕ್ಷಕ ವಾಹನದ ಚಾಲಕನ ಕುರಿತ ಮಾಹಿತಿ ಇಲ್ಲಿದೆ.

ಅಬ್ದುಲ್ ರಜಾಕ್ (ಅಚ್ಚು) ಸುಳ್ಯದಲ್ಲಿ ಕಳೆದ ಹತ್ತು ವರ್ಷಗಳಿಗೂ ಹೆಚ್ಚಿನ ಸಮಯದಿಂದ ಆಂಬುಲೆನ್ಸ್ ಚಾಲಕರಾಗಿ ಅಪಾರ ಸಂಖ್ಯೆಯ ಜನರ ಜೀವ ಉಳಿಸಿದ ದೇವರ ಸ್ವರೂಪದ ಮಾನವ ವ್ಯಕ್ತಿ. ಇವರು ಮೂಲತಃ ಪೆರಾಜೆ ಬಳಿಯ ಕಲ್ಪರ್ಪೆಯವರು. ತಂದೆ ಇಬ್ರಾಹಿಂ, ತಾಯಿ ಫಾತಿಮಾ ದಂಪತಿಯ 5ನೇ ಮಗ. ಓದಿದ್ದು ಆರನೇ ತರಗತಿ ಆದರೆ ಇದೀಗ ಮಾನವನ ಶರೀರದ ಎಲ್ಲಾ ಭಾಗಗಳ ಕುರಿತ ಮಾಹಿತಿಯು ವೈದ್ಯ ವಿದ್ಯಾರ್ಥಿಗಳಂತೆ ಇವರಿಗಿದೆ.

ಇವರ ಬಗ್ಗೆ ಬರೆಯಲು ಕಾರಣವಾಗಿರುವ ವಿಚಾರವೆಂದರೆ ಕುರುಂಜಿ ಗುಡ್ಡೆಯ ಯುವಕನೋರ್ವನ ನಾಪತ್ತೆ ಪ್ರಕರಣ ನಡೆದಾಗ ಮಾಜಿ ನಗರ ಪಂಚಾಯತ್ ಅಧ್ಯಕ್ಷರಾದ ವಿನಯ ಕುಮಾರ್ ಕಂದಡ್ಕರ ಗಮನಕ್ಕೆ ಮನೆಯವರು ವಿಚಾರ ತಿಳಿಸಿದರು. ಅವರ ಸೂಚನೆಯಂತೆ  ಮನೆಯವರು ಠಾಣೆಗೆ ಧಾವಿಸಿ ದೂರು ದಾಖಲಿಸಿದರು. ಇತ್ತ ಅಬ್ದುಲ್ ರಝಾಕ್ ಯಾನೆ ಅಚ್ಚು ಅವರಿಗೆ ದೂರವಾಣಿ ಕರೆ ಬಂದು ನಾಪತ್ತೆಯಾದ ವ್ಯಕ್ತಿಯ ಪಾದರಕ್ಷೆ ಹೊಳೆಯ ಬದಿಯಲ್ಲಿದೆ ಮತ್ತು ಕುಮಾರ ನಾಪತ್ತೆಯಾಗಿದ್ದಾರೆ. ಅಲ್ಲದೇ ಸುಮಾರು ನಾಲ್ಕು ಗಂಟೆಯ ವೇಳೆಗೆ ಪಕ್ಕದ ಮನೆಯ ವ್ಯಕ್ತಿಯೋರ್ವರವರಿಗೆ ಚಿರಾಡುವ ಶಬ್ದ ಕೇಳಿಸಿದೆ ಎಂಬೆಲ್ಲಾ ಮಾಹಿತಿ ಲಭಿಸುತ್ತದೆ. ಮೈದುಂಬಿ ಹರಿಯುವ ನದಿಯಲ್ಲಿ ಯುವಕ ಬಿದ್ದಿರಬೇಕು ಎಂಬುದು ಧೃಡಪಡುತ್ತಿದ್ದಂತೆ ಅಚ್ಚು ನೇರವಾಗಿ ಆಗಮಿಸಿ ಅಗ್ನಿಶಾಮಕ ದಳದವರ ಜೊತೆಗೆ ಹುಡುಕಾಟದಲ್ಲಿ ಭಾಗಿಯಾಗುತ್ತಾರೆ. ಮೊದಲ ದಿನ ಯಾವುದೇ ಫಲ ಸಿಗದೇ ಸಂಜೆ ಸುಮಾರು ಏಳು ಗಂಟೆಯ ವೇಳಗೆ ಹುಡುಕಾಟ ಕಾರ್ಯಚರಣೆ ನಿಲ್ಲಿಸಲಾಯಿತು. ನಂತರ ಪೊಲೀಸ್ ಅಧಿಕಾರಿಗಳ ಸಮ್ಮುಖದಲ್ಲಿ ಮರುದಿನ ಅಗ್ನಿ ಶಾಮಕ ದಳ ಮತ್ತು ಮುಳುಗು ತಜ್ಞರ ಜತೆ ಮುಂಜಾನೆ ಆರು ಗಂಟೆಗೆ ಆಗಮಿಸಿ ಹುಡುಕಾಟ ಆರಂಭಿಸುತ್ತಾರೆ. ಅಗ್ನಿಶಾಮಕ ದಳ ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿ ಜೊತೆಯಾಗುತ್ತಾರೆ. ಸತತ ಪ್ರಯತ್ನದಿಂದ ಮೃತದೇಹ ಕಂಡುಬಂದು ಮೇಲೆತ್ತಿದರು.

ಇವರು ಹೊರ ತೆಗೆದ ಶವಗಳ ಪರಿಸ್ಥಿತಿ ಹೇಗಿರುತ್ತದೆ:

ಇವರು ಹತ್ತು ಹಲವು ವರ್ಷಗಳಿಂದ ಕೊಳೆತು ನಾರುವ ದೇಹಗಳನ್ನು ಮೇಲೆತ್ತುವುದರಲ್ಲಿ ನಿಸ್ಸೀಮ. ಇವರಿಗೆ ಯಾವುದೇ ಅಂಜಿಕೆ ನಾಚಿಕೆ ಇಲ್ಲದ ವ್ಯಕ್ತಿಯಾಗಿದ್ದು ಇವರ ಬಗ್ಗೆ ಬರೆಯುತ್ತಾ ಹೋದರೆ ಮುಗಿಸಲು ಸಾಧ್ಯವಿಲ್ಲ. ಅಲ್ಲದೆ ತಾನೋಬ್ಬ ಮುಸ್ಲಿಂನಾಗಿದ್ದು ಮುಸ್ಲಿಂ ಸಮುದಾಯದ ಹಬ್ಬವಾದ ಬಕ್ರೀದ್ ದಿನದಂದು ಕಾಂತಮಂಗಲ ಶಾಲೆಯ ಬಳಿಯಲ್ಲಿ ಕೊಲೆಯಾದ ವ್ಯಕ್ತಿಯ ದೇಹವನ್ನು ಎತ್ತಲು ಪೊಲೀಸ್ ಅಧಿಕಾರಿಗಳಿಗೆ ನೆರವಾಗಿದ್ದಾರೆ. ಕೊಲೆಗೀಡಾದ ವ್ಯಕ್ತಿಯ ಶವವನ್ನು   ಪೋಸ್ಟ್ ಮಾಟಂ ನಡೆಸಿದ ಬಳಿಕ ವಾರಸುದಾರರ ಮನೆಗೆ ಕೊಂಡೊಯ್ದು ಅಂತ್ಯ ಕ್ರೀಯೆ ನಡೆಸಿದ ಬಳಿಕ ಮನೆಗೆ ತೆರಳಿದ್ದರು. ಅದೇ ರೀತಿಯಲ್ಲಿ ಕುಮಾರ ನಾಪತ್ತೆಯಾದ ಬಳಿಕ ಅವರನ್ನು ಹುಡುಕಾಟ ನಡೆಸಿ ಮೇಲಕ್ಕೆತ್ತಿ ಪೋಸ್ಟ್ ಮಾಟಂ ಮಾಡಿದ ಮನೆಗೆ ಶವವನ್ನು ಸಾಗಿಸಿ, ಸುಳ್ಯದ ಸ್ಮಶಾನದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಎಲ್ಲಾ ಕೆಲಸಗಳನ್ನು ತನ್ನ ಸೇವೆಯ ರೂಪದಲ್ಲಿ ಮಾಡುತ್ತಿದ್ದಾರೆ. ಬಡವರಿಗೆ ಉಚಿತವಾಗಿ ಸಾಗಾಟದ ಸೇವೆ ಒದಗಿಸುತ್ತಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಇಂತಹ ಸಮಾಜಸೇವೆ ಮಾಡುವ ಇವರಿಗೆ ಜಿಲ್ಲೆ, ರಾಜ್ಯ, ರಾಷ್ಟ್ರ ಮಟ್ಟದ ಪ್ರಶಸ್ತಿ ನೀಡಿ ಗುರುತಿಸಿದರೆ ಇವರ ಸೇವೆಗೆ ಬೆಲೆ ನೀಡಿದಂತಾಗುತ್ತದೆ. ಜತೆಗೆ ಜನತೆಗೆ ಇನ್ನಷ್ಟು ಸೇವೆ ನೀಡಲು ಅವರಿಗೆ ಪ್ರೇರಣೆಯಾದಿತು.

. . . . .

ವರದಿ: ಮಿಥುನ್ ಕರ್ಲಪ್ಪಾಡಿ

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!