ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಆರಂತೋಡು ಎಲ್ಪುಕಜೆ ಎಂಬಲ್ಲಿ ರಾತ್ರಿ ಸುಮಾರು 3 ಗಂಟೆ ವೇಳೆಗೆ ರಸ್ತೆಗೆ ಮರ ಬಿದ್ದು ವಾಹನ ಸಂಚಾರ ಸ್ಥಗಿತಗೊಂಡಿತ್ತು. 5 ಗಂಟೆವರೆಗೆ ಒಂದು ಕಿಲೋಮೀಟರ್ ತನಕ ವಾಹನಗಳು ಸಾಲುಗಟ್ಟಿ ನಿಂತಿದ್ದವು. ವಿಷಯ ತಿಳಿದು ಸ್ಥಳಕ್ಕೆ ಬಂದ ದೀಪಕ್ ಎಲೆಕ್ಟ್ರಿಕಲ್ ನವರು ಕ್ರೇನ್ ಬಳಸಿ ಮರ ತೆರವು ಮಾಡಿ ಸಂಚಾರ ಸುಗಮಗೊಳಿಸಿದರು. ಈ ಸಂದರ್ಭದಲ್ಲಿ ದೀಪಕ್ ಇಲೆಕ್ಟ್ರಿಕಲ್ ನ ಸೋಮಶೇಖರ ಪೈಕ, ದೀಪ್ತೇಶ್ ಪೈಕ್, ಸ್ಥಳೀಯರಾದ ವಿನಯ್ ಎಲ್ಪುಕಜೆ, ಶಿವಪ್ರಸಾದ್ ಎಲ್ಪುಕಜೆ ಹಾಗೂ ತಾಜುದ್ದೀನ್ ಅರಂತೋಡು ಸಹಕರಿಸಿದರು.
- Thursday
- November 21st, 2024