ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ನಡುಗಲ್ಲು ಇಲ್ಲಿಯ 2024-25ನೇ ಸಾಲಿನ ಶಾಲಾ ಸಂಸತ್ತು ಚುನಾವಣೆ ಇತ್ತೀಚೆಗೆ ನಡೆಯಿತು. ಸ್ಪರ್ಧಾ ಕಣದಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಇಬ್ಬರು ಅಭ್ಯರ್ಥಿಗಳು, ಉಪಮುಖ್ಯಮಂತ್ರಿ ಸ್ಥಾನಕ್ಕೆ ಆರು ಮಂದಿ ವಿದ್ಯಾರ್ಥಿಗಳು ಸ್ಪರ್ಧಾ ಕಣದಲ್ಲಿದ್ದರು. ಚುನಾವಣಾ ಅಧಿಕಾರಿಗಳಾಗಿ ಶಿಕ್ಷಕರುಗಳಾದ ಶ್ರೀ ಮಹೇಶ್ ಕೆ ಕೆ, ಶ್ರೀಮತಿ ಸುಮನ, ಶ್ರೀಮತಿ ಮೋಕ್ಷ ಸಹಕರಿಸಿದರು. ಅಂತಿಮವಾಗಿ ಮುಖ್ಯಮಂತ್ರಿಯಾಗಿ ಅಮೃತ 7ನೇ ತರಗತಿ ಆಯ್ಕೆಯಾದರೆ, ಉಪಮುಖ್ಯಮಂತ್ರಿಯಾಗಿ ರಕ್ಷ ಪಿ ಎಸ್ 6ನೇ ತರಗತಿ ಆಯ್ಕೆಯಾದರು. ಮುಖ್ಯ ಶಿಕ್ಷಕರಾದ ಶ್ರೀ ಚಂದ್ರಶೇಖರ್ ಪಾರೆಪ್ಪಾಡಿ ಮಾರ್ಗದರ್ಶನದಲ್ಲಿ ಶಾಲಾ ಸಂಸತ್ತಿನ ಇತರ ಸದಸ್ಯರನ್ನು ಆಯ್ಕೆ ಮಾಡಲಾಯಿತು. ಶಿಕ್ಷಣ ಮಂತ್ರಿಯಾಗಿ ಚೈತನ್ಯ 7ನೇ ಹಾಗೂ ಹೇಮಂತ್ 5ನೇ, ಆರೋಗ್ಯ ಮಂತ್ರಿಯಾಗಿ ರತಿಕ 6ನೇ ಹಾಗೂ ಚಾರ್ವಿ 5ನೇ, ಸ್ವಚ್ಛತಾ ಮಂತ್ರಿಯಾಗಿ ಉದ್ವಿತ 6ನೇ, ಪೂರ್ವಿಕ್ 5ನೇ, ವಾರ್ತಾ ಮಂತ್ರಿಯಾಗಿ ಕುಚಾರ್ವಿ ಮತ್ತು ತುಶಾಂತ್ 6ನೇ, ಸಾಂಸ್ಕೃತಿಕ ಮಂತ್ರಿಯಾಗಿ ದೃತಿ 6ನೇ, ವಚನ 5ನೇ, ಕ್ರೀಡಾ ಮಂತ್ರಿಯಾಗಿ ನಿಖಿಲ್ 6ನೇ, ಯಕ್ಷಿತಾ 5ನೇ, ಆಹಾರ ಮಂತ್ರಿಯಾಗಿ ಶ್ರೇಯ 6ನೇ, ಪೂರ್ವಿತ್ 5ನೇ, ತೋಟಗಾರಿಕಾ ಮಂತ್ರಿಯಾಗಿ ವೇದಾಂತ್ 6ನೇ, ಮೋಹಿತ್ 4ನೇ, ಶಿಸ್ತುಪಾಲನ ಮಂತ್ರಿಯಾಗಿ ತನ್ವಿ 6ನೇ, ಪ್ರೀತಮ್ 5ನೇ, ನೀರಾವರಿ ಮಂತ್ರಿಯಾಗಿ ಗೌತಮ್ ಮತ್ತು ದ್ರುವಿನ್ 6ನೇ ತರಗತಿ ಆಯ್ಕೆಯಾದರು. ಸಮಗ್ರ ಶಾಲಾ ಸಂಸತ್ತು ರಚನೆಯಾದ ಬಳಿಕ ಶಾಲಾ ಮುಖ್ಯ ಶಿಕ್ಷಕರು ಪ್ರಮಾಣವಚನ ಬೋಧಿಸಿದರು. ಪದವೀಧರ ಶಿಕ್ಷಕರಾದ ಮಹೇಶ್ ಕೆ ಕೆ ಪ್ರತಿಯೊಬ್ಬರಿಗೂ ತಮ್ಮ ತಮ್ಮ ಜವಾಬ್ದಾರಿಗಳ ಬಗ್ಗೆ ಅರಿವು ಮೂಡಿಸಿದರು. ವಿಜೇತ ಅಭ್ಯರ್ಥಿಗಳು ಎಲ್ಲರಿಗೂ ಸಿಹಿ ತಿಂಡಿ ನೀಡಿ ಸಂಭ್ರಮಿಸಿದರು.
- Saturday
- November 23rd, 2024