ಎ.30 ನೇ ಮಂಗಳವಾರದಂದು 33ಕೆವಿ ಬೆಳ್ಳಾರೆ-ಗುತ್ತಿಗಾರು ಮಾರ್ಗದಲ್ಲಿ ಹಾಗೂ ಗುತ್ತಿಗಾರು ಮತ್ತು ಸುಬ್ರಹ್ಮಣ್ಯ 33/11 ಕೆವಿ ವಿದ್ಯುತ್ ಉಪಕೇಂದ್ರಗಳಲ್ಲಿ ಪಾಲನಾ ಕಾರ್ಯ ಹಮ್ಮಿಕೊಂಡಿರುವುದರಿಂದ ಪೂರ್ವಾಹ್ನ 10:00 ಗಂಟೆಯಿಂದ ಸಾಯಂಕಾಲ 5:00 ಗಂಟೆಯವರೆಗೆ 33ಕೆವಿ ಬೆಳ್ಳಾರೆ-ಗುತ್ತಿಗಾರು-ಸುಬ್ರಹ್ಮಣ್ಯ ಮಾರ್ಗದ ವಿದ್ಯುತ್ ನಿಲುಗಡೆ ಮಾಡಲಾಗುವುದು.
ಆದ್ದರಿಂದ ಗುತ್ತಿಗಾರು ಉಪಕೇಂದ್ರದಿಂದ ಹೊರಡುವ ಗುತ್ತಿಗಾರು ಮತ್ತು ಕೂತ್ಕುಂಜ 11ಕೆವಿ ಫೀಧರ್‌ಗಳಲ್ಲಿ ಮತ್ತು ಸುಬ್ರಹ್ಮಣ್ಯ ಉಪಕೇಂದ್ರದಿಂದ ಹೊರಡುವ ಹರಿಹರ, ನಡುಗಲ್ಲು, ಕುಮಾರಧಾರ, ಆದಿಶೇಷ, ಕೈಕಂಬ ಮತ್ತು ಯೇನೆಕಲ್ಲು 11ಕೆವಿ ಫೀಢರ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸಬೇಕಾಗಿ ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.
- Tuesday
- May 20th, 2025