Ad Widget

ಆದಿ ಸುಬ್ರಹ್ಮಣ್ಯ ಯಾಗ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕ ಹಸ್ತಾಂತರ

ಸುಬ್ರಹ್ಮಣ್ಯ ಏ.28: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆದಿ ಸುಬ್ರಹ್ಮಣ್ಯ ಯಾಗ ಶಾಲೆಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಉಚಿತವಾಗಿ ಬೆಂಗಳೂರಿನ ದಾನಿಗಳಾದ ವೈ ಎಂ ಆರ್ ಎಸ್ ಟ್ರಾನ್ಸ್ಪೋರ್ಟ್ ಚಂದಾಪುರ ಕಂಪೆನಿಯ ಮಾಲಕರಾದ ರಾಜ ಅವರು ಸುಬ್ರಹ್ಮಣ್ಯ ರೋಟರಿ ಕ್ಲಬ್ ಮೂಲಕ ಭಾನುವಾರ ಶ್ರೀದೇವಳಕ್ಕೆ ಹಸ್ತಾಂತರಿಸಿದರು.

. . . . . . . . .

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿ ಡಾ.ನಿಂಗಯ್ಯ ಅವರಿಗೆ ಶುದ್ಧ ಕುಡಿಯುವ ನೀರಿನ ಘಟಕವನ್ನು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಸುಬ್ರಹ್ಮಣ್ಯ ರೋಟರಿ ಕ್ಲಬ್ನ ಅಧ್ಯಕ್ಷ ಪ್ರಶಾಂತ ಕೋಡಿ ಬೈಲು ,ಪೂರ್ವ ಅಧ್ಯಕ್ಷರುಗಳಾದ ರೋ. ಗೋಪಾಲ್ ಎಣ್ಣೆ ಮಜಲ್, ರೋ. ಡಾl ರವಿ ಕಕ್ಕೆ ಪದವು, ರೋ.ವಿಶ್ವನಥ ನಡು ತೋಟ ರೋ.ಶಿವರಾಮ ಏನೇ ಕಲ್, ರೋ.ರಾಮಕೃಷ್ಣ ಮಲ್ಲಾರ , ರೋ. ಲೋಕೇಶ್ ಬಿ ಎನ್, ರೋ. ಮೋಹನ್ದಾಸ್ ಎಣ್ಣೆ ಮಜಲ್, ನಿಯೋಜಿತ ಅಧ್ಯಕ್ಷ ಚಂದ್ರಶೇಖರ ನಾಯರ್, ರೋ.ರೋಹಿತ್ ಬಿಬಿ, ಶೋಭಾ ಗಿರಿಧರ ಸ್ಕಂದ, ದೇವಳದ ಮಾಸ್ಟರ್ ಪ್ಲಾನ್ ಸಮಿತಿ ಸದಸ್ಯರುಗಳಾದ ಲೋಲಾಕ್ಷ ಕೈಕಂಬ, ಪವನ್ ಎಂಡಿ. ಬೆಂಗಳೂರಿನ ಯೋಗೀಶ್ ಭಟ್, ನಾರಾಯಣಸ್ವಾಮಿ, ಅಜಿತ್, ಶಿವಪ್ರಸಾದ್ ಹುದ್ದೆಟ್ಟಿ, ಮತ್ತಿತರರು ಹಾಜರಿದ್ದರು. ಈ ಸಂದರ್ಭದಲ್ಲಿ ದಾನಿಗಳಾದ ಬೆಂಗಳೂರಿನ ರಾಜು ಅವರನ್ನು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವತಿಯಿಂದ ಹಾಗೂ ಸುಬ್ರಮಣ್ಯ ರೋಟರಿ ಕ್ಲಬ್ ವತಿಯಿಂದ ಸನ್ಮಾನಿಸಲಾಯಿತು.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading