ದ.ಕ ಜಿಲ್ಲಾ ಗ್ಯಾರೇಜ್ ಮ್ಹಾಲಕರ ಸಂಘ ಮಂಗಳೂರು ಇದರ ಆಶ್ರಯದಲ್ಲಿ ಸುಳ್ಯ ತಾಲೂಕು ಗ್ಯಾರೇಜ್ ಮ್ಹಾಲಕರ ಸಂಘದ ಬೆಳ್ಳಿ ಹಬ್ಬ ಆಚರಣೆ ಹಾಗೂ 25 ನೇ ವರ್ಷದ ವಾರ್ಷಿಕ ಮಹಾಸಭೆ ಮತ್ತು ಕುಟುಂಬ ಸಮ್ಮಿಲನ ಕಾರ್ಯಕ್ರಮವು ಮೇ.26 ರಂದು ಸುಳ್ಯದ ಲಯನ್ಸ್ ಸೇವಾ ಸದನದಲ್ಲಿ ನಡೆಯಲಿದೆ.
ಇದರ ಪೂರ್ವ ಭಾವಿಯಾಗಿ ಆಮಂತ್ರಣ ಪತ್ರ ಬಿಡುಗಡೆಯು ಕಲ್ಕುಡ ದೈವಸ್ಥಾನದಲ್ಲಿ ಎ.28 ರಂದು ನಡೆಯಿತು.
ದೈವಸ್ಥಾನದ ಪೂಜಾರಿ ತಿಮ್ಮಪ್ಪ ಗೌಡ ರವರು ಪ್ರಾರ್ಥನೆ ನೆರವೇರಿಸಿದರು. ಈ ಸಂದರ್ಭದಲ್ಲಿ
ಸಂಘದ ಅಧ್ಯಕ್ಷ ಎಂ.ಮಲ್ಲೇಶ್ ಬೆಟ್ಟಂಪಾಡಿ, ಪ್ರಧಾನ ಕಾರ್ಯದರ್ಶಿ ಜನಾರ್ದನ ದೋಳ, ಉಪಾಧ್ಯಕ್ಷ ಸತ್ಯನಾರಾಯಣ ಪೈಚಾರು,
ನಿರ್ದೇಶಕ ನಾಗೇಶ್ ಕೇರ್ಪಳ, ಜತೆ ಕಾರ್ಯದರ್ಶಿ ಮನೋಹರ ಬೊಳ್ಳೂರು, ಮಾಜಿ ಅಧ್ಯಕ್ಷ ಡಿ.ಎನ್.ವೆಂಕಟ್ರಮಣ, ಧನಂಜಯ ಗುತ್ತಿಗಾರು, ರಘುರಾಮ ಜಟ್ಟಿಪಳ್ಳ, ಹರೀಶ್ ಅರಂಬೂರು, ಕಮಲಾಕ್ಷ ಕಲ್ಲುಗುಂಡಿ ಹಾಗೂ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.
- Thursday
- October 31st, 2024