Ad Widget

ದೇಶದ ಹಿತಕ್ಕಾಗಿ ಮತದಾನ ಮಾಡಿರಿ…

ದೇಶದ ಹಿತಕ್ಕಾಗಿ ಮತದಾನ ಮಾಡಿರಿ, ಯೋಚಿಸಿ-ಆಲೋಚಿಸಿ ಮತವನ್ನು ನೀಡಿರಿ…
“ನನ್ನೊಬ್ಬನ ಓಟಿನಿಂದ ಏನಾಗುತ್ತದೆ…?” ಅನ್ನದಿರಿ, ಪ್ರತಿಯೊಂದು ಮತವೂ ಕೂಡ ಮುಖ್ಯವಿಲ್ಲಿ ತಿಳಿಯಿರಿ, ಮತದಾನಕ್ಕೆ ಹೋಗಲು ಆಲಸ್ಯ ಮಾಡದಿರಿ…
ಐದು ವಷಕ್ಕೊಮ್ಮೆ ನಮಗೆ ಸಿಗುವ ಅಧಿಕಾರ ಮರೆಯದಿರಿ, ಮರೆಯದೇ ಪ್ರತಿಯೊಬ್ಬರೂ ಮತದಾನ ಮಾಡಿರಿ…
ನೋಟಿನಾಸೆಗಾಗಿ ನಿಮ್ಮ ಮತವನ್ನು ಮಾರದಿರಿ, ಯಾವುದೇ ಆಮಿಷಕ್ಕೆ ಬೀಳದೇ ಮತದಾನ ಮಾಡಿರಿ…
ಜನಸೇವಕನಾಗಿ ದುಡಿಯೋ ಜನನಾಯಕನ ಆರಿಸಿರಿ, ಮತದಾನ ಪ್ರಜ್ಞೆಯನ್ನು ಪ್ರತಿಯೊಬ್ಬರೂ ಮೆರೆಯಿರಿ…
ಪ್ರಜಾಪ್ರಭುತ್ವದ ದೇಶದಲ್ಲಿ ಪ್ರಜೆಗಳದ್ದೇ ಅಧಿಕಾರ, ನಮ್ಮೆಲ್ಲರ ಮತವೇ ಈ ದೇಶದ ಅಭಿವೃದ್ಧಿಗೆ ಸಾಕಾರ…
ಮತದಾನದ ಮೌಲ್ಯವ ಅರಿತು ಮತವನ್ನು ನೀಡಿರಿ, ಬೆರಳ ತುದಿಯ ನೀಲಿ ಶಾಯಿಯ ಶಕ್ತಿಯನ್ನು ಅರಿಯಿರಿ…
ನಮ್ಮೆಲ್ಲರ ನಾಳೆಗಾಗಿ-ಭವಿಷ್ಯದ ಬದುಕಿಗಾಗಿ ಮತವನ್ನು ನೀಡಿರಿ…
✍️ಉಲ್ಲಾಸ್ ಕಜ್ಜೋಡಿ

. . . . . . . . .

Discover more from ಅಮರ ಸುದ್ದಿ

Subscribe to get the latest posts sent to your email.

. . . . . . .

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading