ಎಂಡಿಎಂಎಯನ್ನು ಕಳ್ಳ ಸಾಗಟಕ್ಕೆ ಯತ್ನಿಸಿದ ಇಬ್ಬರು ಸುಳ್ಯ ಮೂಲದ ಯುವಕರನ್ನು ಕೇರಳದಲ್ಲಿ ಬಂಧಿಸಲಾಗಿದೆ.
ಯುವಕರು 100.22 ಗ್ರಾಂ ಎಂಡಿಎಂಎಯೊಂದಿಗೆ ಅಬಕಾರಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ 1.5 ಲಕ್ಷ ರೂ.ಗೆ ಖರೀದಿಸಿದ್ದ ಎಂಡಿಎಂಎಯನ್ನು ಮಲಪ್ಪುರಂಗೆ ತಲುಪಿಸುವ ಗುರಿಯನ್ನು ಹೊಂದಿದ್ದರು. ಮಾನಂತವಾಡಿ ಅಬಕಾರಿ ವೃತ್ತ ನಿರೀಕ್ಷಕ ಎ ಪ್ರಜಿತ್ ನೇತೃತ್ವದ ತಂಡವು ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದ ನಿವಾಸಿಗಳಾದ ಉಮ್ಮರ್ ಫಾರೂಕ್ (33) ಮತ್ತು ಎ.ಎಚ್.ಸಿದ್ದೀಕ್ ಎಂಬುವರನ್ನು ಮಾನಂತವಾಡಿ ಅಬಕಾರಿ ವೃತ್ತ ಕಚೇರಿ ತಂಡ ಮತ್ತು ಅಬಕಾರಿ ಚೆಕ್ ಪೋಸ್ಟ್ ತಂಡವು ಜಂಟಿ ತಪಾಸಣೆಯಲ್ಲಿ ಬಂಧಿಸಿದ್ದಾರೆ. ಆರೋಪಿಗಳು ಬೆಂಗಳೂರಿನಿಂದ ಖರೀದಿಸಿದ್ದ ಎಂಡಿಎಂಎ ಯನ್ನು ಮಲಪ್ಪುರಂಗೆ ತಲುಪಿಸುವ ಗುರಿ ಹೊಂದಿದ್ದರು. ಎಂಡಿಎಂಎಯನ್ನು ಪ್ರತಿ ಗ್ರಾಂಗೆ 4000 ರೂ.ಗೆ ಮಾರಾಟ ಮಾಡಲು ಕಳ್ಳಸಾಗಣೆ ಮಾಡಲಾತ್ತು. ಆರೋಪಿಗಳು ಎಂಡಿಎಂಎ ಕಳ್ಳಸಾಗಣೆ ಮಾಡಲು ಬಳಸಿದ ಸ್ವಿಫ್ಟ್ ಡಿಜೈರ್ ಕಾರನ್ನು ಅಬಕಾರಿ ಕಸ್ಟಡಿಗೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.
- Saturday
- February 1st, 2025