ಸುಳ್ಯ: ಲೋಕಸಭಾ ಚುನಾವಣೆಯ ಎರಡನೇ ಹಂತದ ಚುನಾವಣೆ ಎ-೨೬ರಂದು ನಡೆಯಲಿದ್ದು ಈ ಹಿನ್ನಲೆಯಲ್ಲಿ ಇಂದು ಸಂಜೆ ೬ ಗಂಟೆಗೆ ಬಹಿರಂಗ ಪ್ರಚಾರಕ್ಕೆ ತೆರೆ ಬೀಳಲಿದೆ . ರಾಜಕೀಯ ನಾಯಕರ ಪರಸ್ಪರ ವಾಕ್ಸಮರ ಜೊರಾಗಿ ಕಾರ್ಯಕರ್ತರ ನಡುವೆ ಕೂಡ ಸಾಮಾಜಿಕ ಜಾಲತಾಣಗಳಲ್ಲಿ ಬಹಳಷ್ಟು ಪರ ವಿರೋಧಗಳ ಟಿಕೆ ಟಿಪ್ಪಣಿಗಳು ನಡೆದು ಇಂದು ಚುನಾವಣಾ ಆಯೋಗದ ಮಾರ್ಗಸೂಚಿಯಂತೆ ಇಂದು ಸಂಜೆಯಿಙದ ಮಧ್ಯ ಮಾರಾಟ ಕೂಡ ಸ್ಥಗಿತಗೊಳ್ಳಲಿದ್ದು ಮುಂದಿನ ಎರಡು ದಿನಗಳು ಡ್ರೈ ಡೇ ಆಗಿರಲಿದೆ. ಅಲ್ಲದೆ ಅಭ್ಯರ್ಥಿಗಳ ಪರ ಮತಯಾಚನೆಗೆ ನಾಳೆ ಮನೆ ಮನೆ ಭೇಟಿಗೆ ಅವಕಾಶ ಕಲ್ಪಿಸಲಾಗಿದ್ದು ಎ ೨೬ ರಂದು ಅಭ್ಯರ್ಥಿಗಳ ರಾಜಕೀಯ ಭವಿಷ್ಯದ ವಿಧಿಯನ್ನು ಮತದಾರ ಬರೆಯಲಿದ್ದಾನೆ.
- Saturday
- November 23rd, 2024