Ad Widget

ಸುಳ್ಯ ತಾಲೂಕಿನ ಬೆಳ್ಳಾರೆ ಯಲ್ಲಿ ಹೊಸ 108 ಆಂಬುಲೆನ್ಸ್ ಲೋಕಾರ್ಪಣೆ

ಬೆಳ್ಳಾರೆ ಪ್ರದೇಶದಲ್ಲಿ ಹಲವು ವರ್ಷಗಳಿಂದ ಸೇವೆ ನೀಡುತ್ತಾ ಬಂದಿರುವ 108 ಆಂಬುಲೆನ್ಸ್ ಇದೀಗ ಹೊಸ ಹಾಗೂ ಅತ್ಯಾಧುನಿಕ ಸವಲತ್ತುಗಳಿಂದ ಕೂಡಿದ ಹೊಸ ಆಂಬುಲೆನ್ಸ್ ಸಾರ್ವಜನಿಕರ ಸೇವೆಗೆ ಸಜ್ಜಾಗಿದೆಇದರಲ್ಲಿ ಆಸ್ಪತ್ರೆ ಪೂರ್ವ ಚಿಕಿತ್ಸೆ ಯೊಂದಿಗೆ ರೋಗಿಗಳನ್ನು ಅತೀ ಶೀಘ್ರವಾಗಿ ಆಸ್ಪತ್ರೆಗೆ ಉಚಿತವಾಗಿ ತಲುಪಿಸುವ ವ್ಯವಸ್ಥೆ ಒಳಗೊಂಡಿದೆ. ಬೆಳ್ಳಾರೆಯ ಆಸುಪಾಸಿನ ಎಲ್ಲಾ ಗ್ರಾಮದ ಸಾರ್ವಜನಿಕರಿಗೆ ಇದು ಆಶಾದಾಯಕವಾಗಿದೆ. ಯಾವುದೇ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳಿಗೆ ಉಚಿತ ಸೇವೆ ನೀಡುತ್ತಿರುವ ಈ ಆಂಬುಲೆನ್ಸ್ ಆಸ್ಪತ್ರೆ ಪೂರ್ವ ಚಿಕಿತ್ಸೆ ನೀಡಿ ರೋಗಿಗಳನ್ನು ವೇಗವಾಗಿ ಆಸ್ಪತ್ರೆ ಗೆ ಉಚಿತ ವಾಗಿ ತಲುಪಿಸುವ ವ್ಯವಸ್ಥೆ ಹೊಂದಿದೆ. ಆರೋಗ್ಯದ ಸಮಸ್ಯೆಯ ಯಾವುದೇ ತುರ್ತು ಸಂದರ್ಭದಲ್ಲಿ 108 ನಂಬರ್ ಗೆ ಉಚಿತ ವಾಗಿ ಕಾಲ್ ಮಾಡಬಹುದು.

. . . . . . . . .

ಬೆಳ್ಳಾರೆಯ ಆಂಬ್ಯುಲೆನ್ಸ್ ನುರಿತ ಸಿಬ್ಬಂದಿಗಳನ್ನು ಹಾಗೂ ಡ್ರೈವರ್ ಗಳನ್ನು ಹೊಂದಿದ್ದು ಇದರ ಉಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳುವಂತೆ ಆಂಬುಲೆನ್ಸ್ ನ ಸಿಬ್ಬಂದಿ ವರ್ಗದವರು ವಿನಂತಿಸಿಕೊಂಡಿದ್ದಾರೆ. ವರ್ಷದ 365 ದಿನ.. ದಿನದ 24 ಗಂಟೆಯೂ ರಾತ್ರಿ ಹಾಗೂ ಹಗಲು ಪಾಳಯದಲ್ಲಿ ಈ ಆಂಬುಲೆನ್ಸ್ ಕಾರ್ಯ ನಿರ್ವಹಿಸಲಿದೆ.

. . . . . . .

Discover more from ಅಮರ ಸುದ್ದಿ

Subscribe to get the latest posts sent to your email.

Related Posts

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading