ಸುಳ್ಯ ; ಪುತ್ತೂರು ಮತ್ತು ಸೌಜನ್ಯ ಕೊಲೆಯ ಬಗ್ಗೆ ಯಾವ ಮಾತುಗಳನ್ನು ಆಡದೇ ಮೌನಕ್ಕೆ ಶರಣಾದ ಬಿಜೆಪಿ – ಎನ್ ಜಯಪ್ರಕಾಶ್ ರೈ
ಸುಳ್ಯ ನಗರ ಪಂಚಾಯತ್ ನಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಇದು ಗಂಭೀರವಾಗಿ ಪರಿಗಣಿಸಿ ಹೋರಾಟ ನಡೆಸುತ್ತೆವೆ – ಶಶಿಧರ ಎಂ ಜೆ
ಬಿಜೆಲಿಯು ಕೊನೆ ಘಳಿಗೆಯಲ್ಲಿ ಹಳೆಯ ಸುಳ್ಳಿನ ಮತ್ತು ಅಪಪ್ರಚಾರಕ್ಕೆ ಮರಳಿದ್ದಾರೆ. ಜನತೆ ಇದೀಗ ಬಿಜೆಪಿಯನ್ನು ತಿರಸ್ಕರಿಸುತ್ತಾರೆ ಎಂಬ ಭಯದಲ್ಲಿ ಸಾವಿನಲ್ಲಿ ರಾಜಕೀಯ ಕಂಡುಕೊಳ್ಳುತ್ತಿದೆ ಎಂದು ಎನ್ ಜಯಪ್ರಕಾಶ್ ರೈ ಹೇಳಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತನಾಡುತ್ತಾ ಬಿಜೆಪಿಗೆ ಸೋಲಿನ ಸುಳಿವು ಸಿಕ್ಕಿದೆ ಒದೀಗ ಸಾವಿನ ವಿಚಾರದಲ್ಲಿ ರಾಜಕೀಯ ಮತ್ತು ಸುಳ್ಳಿನ ಪ್ರಚಾರಕ್ಕೆ ಮುಂದಾಗಿದ್ದಾರೆ ಎಂದು ಸುಳ್ಯ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಎನ್ ಜಯಪ್ರಕಾಶ್ ರೈ ಹೇಳಿದರು ಅಲ್ಲದೆ ಬಿಜೆಪಿಗೆ ಪ್ರಮುಖವಾಗಿ ಬಿಜೆಪಿ ಜಿಳ್ಳೆಯಲ್ಲಿ ಮಾಡಿದ ಸಾಧನೆ ಏನು , ಅಲ್ಲದೇ ಇದೀಗ ಅಪಪ್ರಚಾರದ ಕಡೆಗೆ ಹೋಗುವುದು ಯಾಕೆ , ಸೌಜನ್ಯ ಪ್ರಕರಣದಲ್ಲಿ ಬಿಜೆಪಿ ನಿಲುವು ಏನು , ಸುಳ್ಯ , ಪುತ್ತೂರಿನಲ್ಲಿ ಯುವತಿಯ ಹತ್ಯೆಯಾದಗಾದ ಮೌನವಹಿಸಿದ್ದು ಯಾಕೆ ಅಲ್ಲಿ ಹಿಂದುಗಳು ಕೊಲೆಗಾರರು ಅಲ್ಲವೇ ಅಲ್ಲೊಂದು ನ್ಯಾಯ ಇಲ್ಲೊಂದು ನ್ಯಾಯ ಯಾವ ರೀತಿಯ ನಿಮ್ಮ ಹೋರಾಟ ಎಂದು ಬಿಜೆಪಿ ವಿರುದ್ದ ಪ್ರಶ್ನೆಗಳ ಸುರಿಮಳೆಗೈದರು. ಕಾಂಗ್ರೆಸ್ ಪಕ್ಷವನ್ನು ಎಸ್ ಡಿ ಪಿ ಐ ಜೊತೆಗೆ ಮೈತ್ರಿ ಎಂದು ಹೇಳುವ ಬಿಜೆಪಿ ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಎಲ್ಲಿಎಲ್ಲಾ ಹೊಂದಾಣಿಕೆ ಮಾಡಿಕೊಂಡಿದೆ ಎಂದು ಜನತೆಗೆ ಗೊತ್ತಿದೆ ಎಂದು ಅವರು ಹೇಳಿದರು . ಅಲ್ಲದೇ ಸುಳ್ಯದಲ್ಲಿ ಲೀಡ್ ಪಡೆಯುತ್ತೇವೆ ಎಂಬುವ ನಿಲುವು ಇಲ್ಲಾ ಆದರೆ ಈ ಭಾರಿ ಲಿಡ್ ಗಳನ್ನು ಶೂನ್ಯಕ್ಕೆ ತರುತ್ತೇವೆ ಆ ಪ್ರಕಾರ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ಕಾಣಲಿದ್ದಾರೆ ಎಂದು ಹೇಳಿದರು .
ನಗರ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ ಎಂ ಜೆ ಮತನಾಡುತ್ತಾ ಸುಳ್ಯದಲ್ಲಿ ಕುಡಿಯುವ ನೀರಿಗೆ ಬಹಳಷ್ಟು ಸಮಸ್ಯೆ ಉದ್ಭವಿಸಿದ್ದು ಇದೀಗ ಇಂತಹ ಬೇಸಿಗೆಯ ಸಂದರ್ಭದಲ್ಲಿ ಜನರಿಗೆ ನೀರಿಲ್ಲದಂತೆ ಮಾಡುವುದು ಸರಿಯಲ್ಲ ಎಂದು ಹೇಳಿದರು.
ನಗರ ಪಂಚಾಯತ್ ನಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆಯುತ್ತಿದೆ ,ಇದಕ್ಕೆ ಹೊಣೆ ಯಾರು ಎಂ ಜೆ ಶಶಿಧರ್
ಸುಳ್ಯದ ನಗರ ಪಂಚಾಯತ್ ನಲ್ಲಿ ಸಿಬ್ಬಂದಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಇದನ್ನು ಮನೆಮನೆಗೆ ತೆರಳಿದಾಗ ಜನತೆ ನಮ್ಮಲ್ಲಿ ಹೇಳುತ್ತಿದ್ದು ಇದು ಯಾರ ತಪ್ಪು ಎಂದು ಪ್ರಶ್ನಿಸಿದರು .ಅಲ್ಲದೇ ಒಂದು ಕಡೆಯಲ್ಲಿ ಲೇಔಟ್ ಮಾಡಿದ ಸಂದರ್ಭದಲ್ಲಿ ಫಾರಂ ನಂ.೩ ಗೆ ಸರಕಾರಕ್ಕೆ ಒಂದು ಲಕ್ಷದ ಐವತ್ತು ಸಾವಿರ ಕಟ್ಟಬೇಕು ನನಗೆ ನೀಡಿದರೆ ಇಪ್ಪತೈದು ಸಾವಿರ ಸಾಕು ಎಂದು ಓರ್ವ ಅಧಿಕಾರಿ ಹೇಳುತ್ತಾರೆ ಅಂದರೆ ಇದು ಯಾರ ತಪ್ಪು ಇಲ್ಲಿ ಎಂದು ಪ್ರಶ್ನಿಸಿದರು . ಅಲ್ಲದೇ ನಗರದಲ್ಲಿ ಬೀದಿ ದೀಪ ಸೇರಿದಂತೆ ಒಳಚರಂಡಿ ಸೇರಿದಂತೆ ಎಲ್ಲವೂದರಲ್ಲಿ ಲೋಪಗಳಾಗಿದ್ದು ಇದೀಗ ಮಲೇರಿಯಾ ದಂತಹ ಕಾಯಿಲೆಗಳು ಬರದಂತೆ ಎಚ್ಚರಿಕೆಯಿಂದ ಇವುಗಳ ಕ್ರಮ ವಹಿಸಬೇಕು ಎಂದು ಹೇಳಿದರು . ಪತ್ರಿಕಾಗೋಷ್ಠಿಯಲ್ಲಿ ಗೋಕುಲ್ ದಾಸ್ , ನಂದರಾಜ್ ಸಂಕೇಶ , ಸಂಶುದ್ದೀನ್ , ಮುಸ್ತಫಾ , ಶಾಫಿ ಕುತ್ತಮೊಟ್ಟೆ , ಭವಾನಿಶಂಕರ ಕಲ್ಮಡ್ಕ ಉಪಸ್ಥಿತರಿದ್ದರು.