ಮಂಡೆಕೋಲು ಗ್ರಾಮ ಪಂಚಾಯತ್ ಗ್ರಂಥಾಲಯದಲ್ಲಿ ಎ.12ರಂದು ಮಕ್ಕಳ ಬೇಸಿಗೆ ಶಿಬಿರವನ್ನು ಅಮರಮಡ್ನೂರು ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೂಪವಾಣಿ ಉದ್ಘಾಟಿಸಿದರು. ಎ. 22ವರೆಗೆ ಲತಾಮಧುಸೂದನ್ ರವರ ಮುಖೇನ ಶಿಬಿರವು ಸಂಪನ್ನಗೊಂಡಿತು.
ಶಿಬಿರದಲ್ಲಿ ವಿವಿಧ ಚಟುವಟಿಕೆಗಳಾದ ಯೋಗ ,ಧ್ಯಾನ, ಕ್ರಾಪ್ಟ್ , ಕಸದಿಂದ ರಸ, ಹಸಿರು ಎಲೆಗಳಿಂದ ಚಿತ್ರಗಳ ರಚನೆ ವ್ಯಕ್ತಿತ್ವ ವಿಕಸನ ಇಂಗ್ಲಿಷ್ ಸ್ಪೋಕನ್ ಕ್ಲಾಸ್ ಸ್ಕಿಲ್ ಡೆವಲವ್ ಮೆಂಟ್ ಸಾಹಿತ್ಯ ರಚನೆ ಕಥೆ ಬರೆಯುವುದು ಗೊಂಬೆ ತಯಾರಿಕೆ, ಮುಖವಾಡ ತಯಾರಿಕೆ ಕವನ ಶುಭಾಶಯಗಳು ರಂಗೋಲೀ ಬಿಡಿಸುವುದು ಪರಿಸರ ವೀಕ್ಷಣೆ ಮತ್ತು ಕಥೆ ಓದುವುದು ,ಓದಿನ ಮಹತ್ವ ಕವಿಗಳ ಪರಿಚಯ,ಕಥೆ ರಚನೆ ಸಂರಕ್ಷಣೆ,ಗೊಂಬೆಗಳು ತಯಾರಿ ವಿವಿಧ ರೀತಿಯ ಚಪ್ಪಾಳೆ, ಮೋಜಿನ ಗಣಿತ ವ್ಯಕ್ತಿತ್ವ ವಿಕಸನ ಚಟುವಟಿಕೆ,ಪದಬಂಧ ಭರತನಾಟ್ಯ, ಯಕ್ಷಗಾನ ಇನ್ನಿತರ ಅನೇಕ ಚಟುವಟಕೆಗಳನ್ನು ಮಾಡಿಸಲಾಗಿದ್ದು ಸಂಪನ್ಮೂಲ ವ್ಯಕ್ತಿಗಳಾಗಿ ಅಮರಮಡ್ನೂರು ಶಾಲೆಯ ಮುಖ್ಯೋಪಾಧ್ಯಾಯಿನಿ ರೂಪವಾಣಿ, ಡಿಂಪಲ್ ಕೆಪಿಎಸ್ ಸ್ಕೂಲ್ 9ನೆ ತರಗತಿ ವಿದ್ಯಾರ್ಥಿ , ಇವರು ಶಿಕ್ಷಣ ಮಹತ್ವ ಬಗ್ಗೆ , ಪತ್ರಿಕೆಗಳಿಂದ ಹೂ ಗುಚ್ಛ ತಯಾರಿ,ಮಾವಿನ ಎಲೆಗಳ ವಿವಿಧ ಶೈಲಿಯ ತೋರಣ, ಕ್ರಾಪ್ಟ್ ತಿಳಿಸಿಕೊಟ್ಟರೆ, ಚಂದ್ರಕಲಾ ಜಾಲ್ಸೂರುರವರು ಜಾನಪದ ಗೀತೆ,ರಂಗೋಲಿ ಬಿಡಿಸುವುದು ವಿವಿಧ ಜಾನಪದ ಶೈಲಿಯ ನೃತ್ಯ ವಿವಿಧ ಮನೋರಂಜನಾ ಆಟಗಳು ಬಗ್ಗೆ ತಿಳಿಸಿಕೊಟ್ಟರು. ಹೇಮ ವೈಲಾಯ, ನೀಲವೇಣಿ, ಲಕ್ಷ್ಮಿ ಲಾವಣ್ಯರ ವರು- ಗೊಂಬೇಗಳ ತಯಾರಿ ವೇಸ್ಟ್ ಪ್ಲಾಸ್ಟಿಕ್ ಗಳಿಂದ ಕರಕುಶಲ ವಸ್ತುಗಳ ತಯಾರಿಕೆ ಅಭಿನಯ ನೃತ್ಯ ಹೇಳಿಕೊಟ್ಟರು. ಅಕ್ಷತಾ ಚ್ರೈತ್ರಪ್ರಸಾದ್ ಉಗ್ರಾಣಿಮನೆ – ಕಾಗದಗಳಿಂದ ಬ್ಯಾಗ್ ತಯಾರಿ ಪರಿಸರ ಜಾಗೃತಿ ಸಂದೇಶ ಗಳು ವಿವಿಧ ರೀತಿಯ ಚಿತ್ರಗಳನ್ನು ಡ್ರಾಯಿಂಗ್ ಶೀಟಲ್ಲಿ ಬ್ಯಾಗ್ ತಯಾರಿಸಿ ಸಂದೇಶ. ಕೆಲವು ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ವಿತರಿಸಿದರು. mಪ್ರತೀಕ್ಷಾ ಮತ್ತು ತ್ರಿಶಾ ಮಾವಂಜಿರವರು ವಿವಿಧ ಎಲೆಗಳಿಂದ ಪ್ರಾಣಿಪಕ್ಷಿಗಳ ಆಕೃತಿ ತಯಾರಿ ವಿವಿಧ ಹಾಡುಗಾರಿಕೆ. ವಿವಿಧ ರೀತಿಯ ಆಟಗಳು ಬಗ್ಗೆ ವಿವರಿಸಿದರು. ಗೀತಾಂಜಲಿ , ಮೊಂಟೆಸ್ಸರಿ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರು -ಸ್ಪೋಕನ್ ಇಂಗ್ಲಿಷ್ ಸರಳವಾಗಿ ಇಂಗ್ಲಿಷ್ ಕಲಿಕೆಯ ಪರಿಚಯ ಸ್ಕಿಲ್ ಡೆವೆಲಪ್ ಮೆಂಟ್, ಇಂಗ್ಲಿಷಿನಲ್ಲಿ ಹಾಡುಗಳು
ಮತ್ತು ಪುತ್ಯ ಶಾಲೆಮುಖ್ಯೋಪಾಧ್ಯಾಯಿನಿ ಲಕ್ಷ್ಮಿ ಟೀಚರ್ ಮತ್ತು ಕನ್ಯಾನ ಶಾಲೆಯ ಸುನಿತಾ ಟೀಚರ್ ಅಭಿನಯ ಗೀತೆಗಳು,ಪದಬಂಧ ರಚನೆ ಮೋಜಿನ ಗಣಿತ ಮೋಜಿನ ಆಟಗಳು, ತೆಂಗಿನ ಗರಿಗಳಿಂದ ಪಕ್ಷಿಗಳ ಮಾದರಿ ತಯಾರಿಕೆ ಪೇಪರ್ ಕ್ರಾಫ್ಟ್ .ಪಕ್ಷಿಗಳ ಬಗ್ಗೆ ಮಾಹಿತಿ ಅಂತ್ಯಾಕ್ಷರಿ ಪದಗಳ ಆಟ ಕಲಿಸಿದರು.
ಸೌಮ್ಯಾ ವಲಯ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದವರು ಪರಿಸರ ವೀಕ್ಷಣೆ ಮತ್ತು ಕಾಡಿನ ರಕ್ಷಣೆ ನಮ್ಮ ಕರ್ತವ್ಯಗಳ ಪರಿಚಯ, ಹುದ್ದೆಯ ಪರಿಚಯ ಪಕ್ಷಿಗಳ ಪರಿಚಯ ಪ್ರಾಣಿಪಕ್ಷಿಗಳ ರಕ್ಷಣೆಯ ಬಗ್ಗೆ ಅರಿವು ಸ್ಪರ್ಧೆಗಳನ್ನು ನಡೆಸಿ ಬಹುಮಾನ ವಿತರಣೆ ಮಾಡಿದರು. ನವೀನ್ ಅಡ್ಕಾರ್ -ಕಲಾವಿದರು , ಕ್ರಿಯಾತ್ಮಕ ವಿನ್ಯಾಸಕಾರರು ಮುಖವಾಡ ತಯಾರಿಕೆ ಮತ್ತು ಮಾಹಿತಿ ಬಗ್ಗೆ ತಿಳಿಸಿಕೊಟ್ಟರು.
ಉದಯಭಾಸ್ಕರ್ ಕವಿ ಸಾಹಿತಿ ಚಿಂತಕರು ವಿಷಯ -ಸಾಹಿತ್ಯದ ಅರಿವು ಕಾರ್ಯಾಗಾರ ಕಥೆಗಳ ರಚನೆ ಆಟಗಳು, ಶುಭಾಶಯ ಪತ್ರಗಳ ಬರೆಯುವಿಕೆ ಬರೆಯುವ ರೀತಿ ತಿಳಿಸುವುದು ಕವಿ ಲೇಖಕರ ಪರಿಚಯ ಮಾಡಿಕೊಟ್ಟರು.
ಮಧುಸೂದನ್ ಮತ್ತು ಲತಾ ಮಧುಸೂದನ್ -ವಿಷಯ, ಮಕ್ಕಳ ಜೊತೆಗೆ ಸಂವಾದ ಸಾಮಾನ್ಯ ಜ್ಞಾನ ಪರಿಶೀಲನೆ,ವಿವಿಧ ರಸಪ್ರಶ್ನೆ,ಸಂಸ್ಕಾರ ಮತ್ತು ಗೌರವ ಪುಸ್ತಕ ಗಳ ಬಳಕೆಯ ಬಗ್ಗೆ ಮಾಹಿತಿ ನೀಡಿದರು.
ಸಮಾರೋಪ ಸಮಾರಂಭ ಕಾರ್ಯಕ್ರಮ ಅಧ್ಯಕ್ಷತೆ ಮಧುಸೂದನ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಲತಾ ಮಧುಸೂದನ್
ರಮೇಶ್ ಪಿ ಪಿಡಿಓ ಗ್ರಾಮ ಪಂಚಾಯತ್ ಮಂಡೆಕೋಲು, ಪುತ್ಯ ಸ.ಕಿ.ಪ್ರಾ.ಶಾಲೆಯ ಮುಖ್ಯಶಿಕ್ಷಕಿ ಲಕ್ಷ್ಮಿ ಟೀಚರ್ ಭಾಗವಹಿಸಿದ್ದರು.
ಮಕ್ಕಳ ಅನಿಸಿಕೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಪ್ರಮಾಣ ಪತ್ರ ವಿತರಣೆ ಒಂದು ದಿನವೂ ತಪ್ಪದೇ ಹಾಜರಾದ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ, ಶಿಬಿರಕ್ಕೆ ಭಾಗವಹಿಸಿದ ಎಲ್ಲ ಮಕ್ಕಳಿಗೂ ಬಹುಮಾನ, ಮತ್ತು ಶಿಸ್ತಿನ 2 ವಿದ್ಯಾರ್ಥಿಗಳಿಗೆ ವಿಶೇಷ ಆಕರ್ಷಕ ಬಹುಮಾನ ನಿಡಲಾಯಿತು.
ಸಂಪನ್ಮೂಲ ವ್ಯಕ್ತಿಗಳ ಅಭಿನಂದನ ಪತ್ರದ ಬಾಬ್ತು ಶ್ರೇಯಸ್ ಎಂ.ಜಿ ಬಿನ್ ಗಂಗಾಧರ ಮಾವಂಜಿ ,ಮಕ್ಕಳ ಇಂದಿನ ಉಪಹಾರದ ವ್ಯವಸ್ಥೆ ದಾಮೋದರ ಪಾತಿಕಲ್ಲು ಎಲ್ಲಾ ಮಕ್ಕಳಿಗೂ ಶಿಸ್ತಿನ ವಿದ್ಯಾರ್ಥಿಗಳಿಗೆ ವಿಶೇಷ ಬಹುಮಾನ ಎಲ್ಲಾ ಶಿಬಿರಾರ್ಥಿಗಳಿಗೆ ಬಹುಮಾನ ಮತ್ತು ಸಿಹಿ ವಿತರಣೆ ಮಧುಸೂದನ್ ಮತ್ತು ಶ್ರೀಮತಿ ಲತಾ ಮಧುಸೂದನ್ ಕಸ್ತೂರಿ ನರ್ಸರಿ ಸುಳ್ಯ ಎಲ್ಲಾ ಮಕ್ಕಳಿಗೂ ಪ್ರಮಾಣ ಪತ್ರ ನೀಡಿದವರು. ರಾಮಚಂದ್ರ ಪಲ್ಲತಡ್ಕ, ಮಕ್ಕಳಿಗೆ ಸಿಹಿ ತಿಂಡಿಯ ವಿತರಣೆ ಸವಿತಾ ರಾಮಚಂದ್ರ ಯದುಗಿರಿ, ಖುಷಿ ಬೊಳುಗಲ್ಲು ತನ್ನ ಹುಟ್ಟು ಹಬ್ಬದ ಪ್ರಯುಕ್ತ ಚಾಕಲೇಟ್ ಮತ್ತು ಎಲ್ಲ ಮಕ್ಕಳಿಗೂ ಚಿಕ್ಕಿ ವಿತರಣೆ ಸನ್ಮಿತ್ ಮತ್ತು ಪ್ರನ್ವಿತ್ ಬಿನ್ ಜಗದೀಶ ಮೈಲೆಟ್ಟಿಪಾರೇ
ಧನ್ಯವಾದ ನಿರೂಪಣೆ ಮಾಡಿದರು.
ಶಿಬಿರದಲ್ಲಿ ಪ್ರತಿ ದಿನದ ವ್ಯವಸ್ಥೆ ಪೂರಕವಾಗಿ ಲಘುಪಾನೀಯ ವ್ಯವಸ್ಥೆ ಶ್ರೀಮತಿ ದಯಾಮಣಿ ಸುಧೀರ್. ರೂಪವಾಣಿ ಮುಖ್ಯೋಪಾಧ್ಯಾಯರು ಅಮರಮಡ್ನೂರು, ಶ್ರೀಮತಿ ಭವ್ಯ ಮುರಳೀಧರ, ಸ್ವಾತಿ ಶಿವಪ್ರಸಾದ್ ಉಗ್ರಾಣಿಮನೆ,ಶೈಲಜಾ ಯೋಗೀಶ್ ಕನ್ಯಾನ, ವಿಶಾಲಾಕ್ಷಿ ಪ್ರಮೋದ್ ಮಂಡೆಕೋಲು, ಲಾವಣ್ಯ ಬೊಳುಗಲ್ಲು,ಭಾರತಿರಘುಪತಿ ಉಗ್ರಾಣಿಮನೆ,ಅಕ್ಷತಾ ಚ್ರೈತ್ರಪ್ರಸಾದ್ ಉಗ್ರಾಣಿಮನೆ , ಅಸಿಸ್ ಶಾಲೆಕ್ಕಾರ್,ಅನಿಲ್ ತೋಟಪ್ಪಾಡಿ ಶ್ರೇಯಸ್ ಗಂಗಾಧರ್ ಮಾವಂಜಿ, ವಲಯ ಅರಣ್ಯಾಧಿಕಾರಿಗಳು ಸೌಮ್ಯ, ಸವಿತಾ ರಾಮಚಂದ್ರ, ಗೀತಾಂಜಲಿ ಶುಭಕರ್ ಬೊಳುಗಲ್ಲು, ಯದುಗಿರಿ,ಲಕ್ಷ್ಮಿ ಟೀಚರ್ ಸುನಿತಾ ಟೀಚರ್, ಸನ್ಮಿತ್ ಮತ್ತು ಪ್ರನ್ವಿತ್ ಕನ್ಯಾನ,ಲತಾಮಧುಸೂದನ್ ಚಂದ್ರಜಿತ್ ಮಾವಂಜಿ ನವೀನ್ ಮಾವಂಜಿ,ಚ್ರೈತ್ರಾ ನಿರಂಜನ್ ಮಾವಂಜಿ ,ಪ್ರಿಯಾ ಸುರೇಶ್ ಕಣೆಮರಡ್ಕ, ಶಶ್ಮಿ ಭಟ್ ಅಜ್ಜಾವರ, ಭವ್ಯಶ್ರಿ ಗೀತಾ ಮಾವಂಜಿ, ಸುಜಾತಾ ರವಿ ಕಣೆಮರಡ್ಕ,ಶೋಭಾ ಅಶೋಕ್ ಕಣೆಮರಡ್ಕ ಮೊದಲಾದವರು ಉಪ್ಥಸ್ಥಿತರಿದ್ದರು.
10 ದಿನದ ಶಿಬಿರಕ್ಕೆ ಒಂದು ರೂಪಾಯಿ ಖರ್ಚು ಪಂಚಾಯತ್ ನಿಂದ ಆಗಿರುವುದಿಲ್ಲ. ಸಂಪನ್ಮೂಲ ವ್ಯಕ್ತಿಗಳು ಸ್ವಂತ ಖರ್ಚಿನಲ್ಲಿ ಬಂದು ಮತ್ತು ತಮ್ಮ ಸಮಯವನ್ನು ನೀಡಿರುವುದು ಸಂತೋಷದ ವಿಷಯವಾಗಿದೆ ಎಂದು ಗ್ರಂಥಾಲಯ ಗ್ರಂಥ ಪಾಲಕಿ ಸಾವಿತ್ರಿ ಕಣೆಮರಡ್ಕ ತಿಳಿಸಿದ್ದಾರೆ.
- Thursday
- November 21st, 2024