ಹುಬ್ಬಳ್ಳಿಯಲ್ಲಿ ನಡೆದ ಕಾಂಗ್ರೆಸ್ ಕಾರ್ಪೊರೇಟರ್ ನಿರಂಜನ್ ಹಿರೇಮಠ್ ರವರ ಮಗಳು ನೇಹಾಳ ಭೀಕರ ಹತ್ಯೆ ಮಾಡಿದ್ದು ಸಮಾಜಕ್ಕೆ ಆಘಾತ ನೀಡಿದೆ ಎಂದು ಬಿಜೆಪಿ ಯುವ ಮೋರ್ಚಾ ಮಾಜಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕೇರ್ಪಳ ವಿಷಾದ ವ್ಯಕ್ತಪಡಿಸಿದರು.
ಪ್ರೀತಿಯನ್ನು ನಿರಾಕರಿಸಿದಕ್ಕಾಗಿ ಫಯಾಜ್ ಎಂಬ ವ್ಯಕ್ತಿ 9 ಬಾರಿ ಚೂರಿ ಇರಿದು ಹತ್ಯೆ ಮಾಡಿರುವುದು ಇಡೀ ಸಮಾಜಕ್ಕೆ ಕಳಂಕ ತರುವ ವಿಷಯ. ಸಿದ್ಧರಾಮಯ್ಯ ಸರಕಾರದಲ್ಲಿ ಇಂತಹ ಕೃತ್ಯಗಳು ದಿನೇ ದಿನೇ ಹೆಚ್ಚಳವಾಗುತ್ತಿದ್ದು, ಅಮಾಯಕರನ್ನು ಅದರಲ್ಲೂ ಹಿಂದೂಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಮಾತ್ರವಲ್ಲದೆ ಅಂಥ ಜಿಹಾದಿಗಳಿಗೆ ಕಾಂಗ್ರೆಸ್ ಸರಕಾರದ ಕೃಪಾಕಟಾಕ್ಷವೂ ಇರುವ ಹಾಗೆ ಕಾಣುತ್ತದೆ.
ಮುಖ್ಯಮಂತ್ರಿಗಳ ಮತ್ತು ಗೃಹ ಸಚಿವರ ಬೇಜವಾಬ್ದಾರಿ ಹೇಳಿಕೆಗಳನ್ನು ಗಮನಿಸಿದರೆ ಅವರು ಒಂದು ಕೋಮನ್ನು ಓಲೈಸುತ್ತಿರುವುದು ಸ್ಪಷ್ಟವಾಗಿ ಗೊತ್ತಾಗುತ್ತದೆ. ತಾವು ಇಡೀ ರಾಜ್ಯದ ಜನರ ಪ್ರತಿನಿಧಿಗಳು ಅನ್ನುವುದನ್ನು ಬಿಟ್ಟು ಒಂದೇ ಕೋಮಿನ ವಕ್ತಾರರ ಹಾಗೆ ಮಾತಾಡುತ್ತಾರೆ.
ಸಿದ್ದು ಆಡಳಿತದಲ್ಲಿ ಯಾವ ಭಾಗ್ಯ ಸಿಗುತ್ತದೋ ಗೊತ್ತಿಲ್ಲ, ಹಿಂದೂಗಳಿಗೆ ಹಲ್ಲೆ ಭಾಗ್ಯ , ಕೊಲೆ ಭಾಗ್ಯ ಮತ್ತು ಬಾಂಬ್ ಸ್ಫೋಟ ಭಾಗ್ಯ ಸರಕಾರದ ರಕ್ಷಣೆಯಲ್ಲೇ ಸಿಗುತ್ತಿದೆ.
ಈಗಾಗಲೇ ಬೆಂಗಳೂರಿನಲ್ಲಿ ಎರಡು ಮೂರು ಘಟನೆಗಳು ಬೆಳಕಿಗೆ ಬಂದಿದ್ದು , ಸರಕಾರದ ಸಚಿವರು ಅದನ್ನು ಪರೋಕ್ಷವಾಗಿ ಮುಚ್ಚಿಹಾಕುವ ಪ್ರಯತ್ನದಲ್ಲಿರುವಂತೆ ಕಂಡುಬರುತ್ತಿದೆ.
ಕಾಂಗ್ರೆಸ್ ಸರಕಾರದಲ್ಲಿ ಕಾಂಗ್ರೆಸ್ ಪಕ್ಷದ ಜನಪ್ರತಿನಿಧಿಯ ಮಕ್ಕಳಿಗೆ ರಕ್ಷಣೆ ಇಲ್ಲದ ಮೇಲೆ ಸಾಮಾನ್ಯರ ಗತಿಯೇನು. ಸಹೋದರಿ ನೆಹಾಳ ಆತ್ಮಕ್ಕೆ ಶಾಂತಿ ಕೋರುತ್ತಾ ಬಿಜೆಪಿ ಯುವ ಮೋರ್ಚಾ ನ್ಯಾಯ ಸಿಗುವ ತನಕ ಹೋರಾಟ ನಡೆಸಲಿದೆ ಎಂದು ಹೇಳಿಕೆಯಲ್ಲಿ ತಿಳಿಸಿದ್ದಾರೆ.