ಪ್ರಜಾಪ್ರಭುತ್ವವನ್ನು ಮತ್ತು ಒಕ್ಕೂಟ ವ್ಯವಸ್ಥೆಯನ್ನು ಉಳಿಸಿಕೊಳ್ಳಲು ಕರೆ ನೀಡುತ್ತಿದ್ದೇವೆ ಎಂದು ನಾಗರಿಕ ವೇದಿಕೆ ಸುಳ್ಯದ ವತಿಯಿಂದ ಗೋಪಾಲ ಪೆರಾಜೆ ಹೇಳಿದರು.
ಅವರು ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಕೇಂದ್ರದ ಮತ್ತೊಬ್ಬ ಸಚಿವರಿಂದ ಸಂವಿಧಾನ ಬದಲಾವಣೆಯ ಮಾತು ಹೊರಬಿದ್ದಿದೆ. ಇದರೊಂದಿಗೆ ಸಂವಿಧಾನ ಬದಲಾವಣೆಯೆನ್ನುವುದು ಬಿಜೆಪಿಯ ಸ್ಪಷ್ಟವಾದ ಕಾಮನ್ ಪ್ರೋಗ್ರಾಂಗಳಲ್ಲಿ ಒಂದು ಎನ್ನುವುದು ದೃಢೀಕರಿಸಲ್ಪಡುತ್ತಿದೆ ಎಂದು ಹೇಳಿದರು. ಅವರು ಪತ್ರಿಕಾಗೋಷ್ಠಿಯಲ್ಲಿ ಈ ಕೆಳಗಿನ ಪ್ರಶ್ನೆಗಳನ್ನು ಕೇಳಿದೆ.
1. ನಿಮಗೆ ಸರ್ವರನ್ನೂ ಸಮಾನವಾಗಿ ಕಾಣುವ, ಜಗತ್ತಿನ ಸರ್ವಶೇಷ್ಠ ಸಂವಿಧಾನಗಳಲ್ಲೊಂದಾದ ಭಾರತೀಯ ಸಂವಿಧಾನದ ಮೇಲೆ ಯಾಕಿಷ್ಟು ಸಿಟ್ಟು ?
2. ಒಂದು ಭಾಷೆ. ಒಂದು ಸಂಸ್ಕೃತಿ, ಒಂದು ಧರ್ಮ ಎನ್ನುವ ಮೂಲಕ ಒಕ್ಕೂಟ ವ್ಯವಸ್ತೆಗೆ ಧಕ್ಕೆ ತರಲು ಕೇಂದ್ರ ಯತ್ನಿಸುತ್ತಿಸುವುದೇಕೆ.
3. ದೆಹಲಿ ಸಿ.ಎಂ ಮತ್ತು ಜಾರ್ಖಂಡ್ ಮಾಜಿ ಸಿ.ಎಂ ಹೇಮಂತ್ ಸೋರೇನ್ ವಿರುದ್ಧ ಹಾಗೂ ಕೇವಲ ವಿರೋಧ ಪಕ್ಷಗಳ ಮೇಲೆ ಮಾತ್ರ ದ್ವೇಷದ ರಾಜಕಾರಣ ನಡೆಸಲು ದೇಶದ ಪ್ರತಿಷ್ಟಿತ ಸ್ವಾಯತ್ತ ಸಂಸ್ಥೆಗಳಾದ ಈಡಿ , ಸಿಬಿಐ ಐಟಿ ಯನ್ನು ಬಳಸಿ ತನಿಖಾ ಸಂಸ್ಥೆಗಳನ್ನು ಶಿಥಿಲಗೊಳಿಸುತ್ತಿರುದೇಕೆ.
4. ಭ್ರಷ್ಟಾಚಾರ ವಿರೋಧಿಸುತ್ತಲೇ ಬಂದ ಈಗಿನ ಕೇಂದ್ರ ಸರಕಾರಕ್ಕೆ ಚುನಾವಣಾ ಬಾಂಡ್‌ಗಳ ಬಗ್ಗೆ ಯಾವ ನಿಲುವುಗಳನ್ನು ಹೊಂದಿದೆ.
5. ನೈಜ ಇತಿಹಾಸವನ್ನು ತೆಗೆದು ಸತ್ಯ ಚರಿತ್ರೆಯ ಬದಲು ಮಿಥಾಲಜಿಗೆ ಒತ್ತುಕೊಟ್ಟು ಪಠ್ಯ ಪುಸ್ತಕಗಳನ್ನು ತಿರುಚಲೆತ್ನಿಸುತ್ತಿರುವುದು ಯಾಕೆ ?
ಅಮರ ಸುಳ್ಯ ನಾಗರೀಕ ವೇದಿಕೆಯು ಮತದಾರರಲ್ಲಿ ಮತದಾನಕ್ಕೆ ಮೊದಲು ಈ ನಿಟ್ಟಿನಲ್ಲಿ ಚಿಂತಿಸಲು ಒತ್ತಾಯಿಸುತ್ತದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಭರತ್ ಕುಕ್ಕುಜಡ್ಕ , ಭಾರತಿ ಚೆಂಬು , ಪ್ರಮೀಳಾ ಪೆಲ್ತಡ್ಕ , ಕರುಣಾಕರ ಪಳ್ಳತ್ತಡ್ಕ , ದಿವಾರಕ ಪೈ ಉಪಸ್ಥಿತರಿದ್ದರು.
- Thursday
- November 28th, 2024