ಸಾರ್ವತ್ರಿಕ ಲೋಕಸಭಾ ಚುನಾವಣೆ-2024ರ ಪ್ರಯುಕ್ತ ಜನ ಜಾಗೃತಿ ಮೂಡಿಸುವ ಸಲುವಾಗಿ ಮೇಣದ ಬತ್ತಿ ಜಾಥಾ ಕಾರ್ಯಕ್ರಮವನ್ನು ಎ:19 ಶುಕ್ರವಾರದಂದು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಟ್ಟ ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಮುಂಭಾಗದ ರಥಬೀದಿಯಲ್ಲಿ ಹಮ್ಮಿಕೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನೆರವೇರಿಸಲಾಯಿತು. ಈ ಜಾಥಾ ಕಾರ್ಯಕ್ರಮವನ್ನು ಹಣತೆಗಳ ದೀಪಗಳಿಂದ ಉದ್ಘಾಟಿಸಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ತದನಂತರ ರಥಬೀದಿಯಲ್ಲಿ ಮೇಣದ ಬತ್ತಿ ಜಾಥಾ ಕಾರ್ಯಕ್ರಮವನ್ನು ಕಾಲ್ನಡಿಗೆಯಲ್ಲಿ ಸುಬ್ರಹ್ಮಣ್ಯದ ಬಸ್ ತಂಗುದಾಣದವರೆಗೆ ನಡೆಸಲಾಯಿತು. ಈ ಜಾಥಾ ಕಾರ್ಯಕ್ರಮವು ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸ್ವೀಪ್ ಸಮಿತಿ, ತಾಲೂಕು ಪಂಚಾಯತ್ ಕಡಬ & ಸುಳ್ಯ ತಾಲೂಕು ಸ್ವೀಪ್ ಸಮಿತಿ, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್, ಸಿಡಿಪಿಒ ಸುಳ್ಯ, ತಾಲೂಕು ಸಮಾಜ ಕಲ್ಯಾಣ ಇಲಾಖೆ & ಓಂ ಶ್ರೀ ಸಂಜೀವಿನಿ ತಾಲೂಕು ಸಂಯೋಜಕರು, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಮತ್ತು ಇನ್ನಿತರ ಸ್ಥಳೀಯ ಸಂಘ-ಸಂಸ್ಥೆಗಳ ಸಹಯೋಗದೊಂದಿಗೆ ಜರುಗಿತು. ಈ ಸಂದರ್ಭದಲ್ಲಿ ಕಡಬ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಾದ ಶ್ರೀ ಜಯಣ್ಣ sir, ಕುಕ್ಕೇ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿಗಳಾದ ನಿಂಗಯ್ಯ, ಸಿಡಿಪಿಓ ಶ್ರೀಮತಿ ಶೈಲಜಾ , ತಾಲೂಕು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಾದ ಕು. ಅರ್ಷಿಯಾ, ತಾಲೂಕು ಪಂಚಾಯತ್ ಕಡಬ ಇದರ ವ್ಯವಸ್ಥಾಪಕರಾದ ಭುವನೇಂದ್ರ, ಕಡಬ ತಾಲೂಕು ಪಂಚಾಯತ್ ಸಂಜೀವಿನಿ ಒಕ್ಕೂಟದ ತಾಲೂಕು ಸಂಯೋಜಕರಾದ ಜಗತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಪಿಡಿಒ ಮಹೇಶ್ ಜೆ.ಎನ್., ಗ್ರಾಮ ಪಂಚಾಯತ್ ಕಾರ್ಯದರ್ಶಿ ಮೋನಪ್ಪ ಡಿ, ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ಯಶವಂತ್, ಸುಬ್ರಹ್ಮಣ್ಯ ಗ್ರಾಮ ಪಂಚಾಯತು ವ್ಯಾಪ್ತಿಗೊಳಪಟ್ಟ ಅಂಗನವಾಡಿ ಕಾರ್ಯಕರ್ತೆಯರಾದ ಶ್ರೀಮತಿ ಸುಗುಣ-ಶ್ರೀಮತಿ ವಿಶಾಲಾಕ್ಷಿ-ಶ್ರೀಮತಿ ಕಮಲ-ಶ್ರೀಮತಿ ದೀಪಿಕಾ, ಆಶಾ ಕಾರ್ಯಕರ್ತೆಯರು, ಓಂ ಶ್ರೀ ಸಂಜೀವಿನಿ ಗ್ರಾಮ ಪಂಚಾಯತ್ ಮಟ್ಟದ ಒಕ್ಕೂಟ ಸುಬ್ರಹ್ಮಣ್ಯ ಇದರ ಎಂ.ಬಿ.ಕೆ. ಶ್ರೀಮತಿ ಹೇಮಲತಾ & ಪದಾಧಿಕಾರಿಗಳು, ಗ್ರಂಥಪಾಲಕಿ ಶ್ರೀಮತಿ ಲಲಿತ ಎಸ್.ಬಿ., ಸ್ಥಳೀಯ ವಿವಿಧ ಸಂಘ-ಸಂಸ್ಥೆಗಳ ಅಧ್ಯಕ್ಷರುಗಳು-ಪದಾಧಿಕಾರಿಗಳು-ಸದಸ್ಯರುಗಳು ಮತ್ತು ಸುಬ್ರಹ್ಮಣ್ಯ ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.
- Sunday
- November 24th, 2024