Ad Widget

ಸುಳ್ಯ; ಖಾಸಗಿ ಬಸ್ಸು ನಿಲ್ದಾಣದ ಬಳಿ ಕೆ. ಆರ್. ಎಸ್. ಪಕ್ಷದ ಪ್ರಚಾರ ಸಭೆ

ಸುಳ್ಯ ಖಾಸಗಿ ಬಸ್ಸು ನಿಲ್ದಾಣದ ಬಳಿ ಕೆ ಆರ್ ಎಸ್ ಪಕ್ಷದ ಪ್ರಚಾರ ಸಭೆಯು ಏ.18ರಂದು ನಡೆಯಿತು.
ಸಭೆಯಲ್ಲಿ ಮಾತನಾಡಿದ ಸುಳ್ಯದ ಮಣ್ಣಿನ ಮಗಳಾದ ವಿದ್ಯಾವಂತೆ ರಂಜಿನಿ ಎಂ, ನಮ್ಮ ಪಕ್ಷದಿಂದ ಮಂಗಳೂರು ಕ್ಷೇತ್ರದಿಂದ ಸ್ಪರ್ಧಿಸುತ್ತಿದ್ದು ಟಾರ್ಚ್ ಚಿನ್ನೆಗೆ ಮತವನ್ನು ನೀಡುವ ಮೂಲಕ ದೇಶ ಮತ್ತು ರಾಜ್ಯದ ಅಭಿವೃದ್ಧಿಗೆ ಕೆ ಆರ್ ಎಸ್ ಪಕ್ಷದೊಂದಿಗೆ ಸಹಕರಿಸುವಂತೆ  ಕೇಳಿಕೊಂಡರು. 

. . . . .

ಭ್ರಷ್ಟಾಚಾರದಿಂದ ತುಂಬಿರುವ ಮೂರು ಪಕ್ಷದವರನ್ನು ಮರೆತು ಕೆ ಆರ್ ಎಸ್ ಪಕ್ಷಕ್ಕೆ ಮತ ನೀಡಿ : ರವಿಕೃಷ್ಣಾ ರೆಡ್ಡಿ:
ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷ ಭ್ರಷ್ಟಾಚಾರದಲ್ಲಿ ಮುಳುಗಿದ್ದು, ಜೆಡಿಎಸ್ ಪಕ್ಷವು ಜಾತ್ಯತೀತ ನಿಲುವನ್ನು ಕಳೆದುಕೊಂಡು ಬಣ್ಣ ಬದಲಾಯಿಸುವ ರಾಜಕೀಯದಲ್ಲಿ ತೊಡಗಿಸಿಕೊಂಡಿದೆ. ಎರಡು ಪಕ್ಷದ ರಾಜ್ಯ ನಾಯಕರುಗಳು ಬಿಎಸ್ ಯಡಿಯೂರಪ್ಪ, ಹಾಗೂ ಡಿಕೆ ಶಿವಕುಮಾರ್ ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ಜೈಲು ಸೇರಿ ಬಂದವರಾಗಿದ್ದಾರೆ. ನಿಜವಾದ ರಾಮರಾಜ್ಯ ಜನರ ಸಂಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ನಾಯಕತ್ವದಿಂದ ಮಾತ್ರ ಸಾಧ್ಯ. ಕರ್ನಾಟಕದಲ್ಲಿ ಪ್ರಾಮಾಣಿಕ, ಜನಪರ ರಾಜಕಾರಣವನ್ನು ಸ್ಥಾಪಿಸಲು ಕೆ ಆರ್ ಎಸ್ ಪಕ್ಷ ಕಳೆದ ಐದು ವರ್ಷಗಳಿಂದ ನಿರಂತರವಾಗಿ ಶ್ರಮಿಸುತ್ತಿದ್ದು, ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕೆ ಆರ್ ಎಸ್ ಪಕ್ಷದ ಅಭ್ಯರ್ಥಿಗೆ ತಮ್ಮ ಅಮೂಲ್ಯವಾದ ಮತವನ್ನು ನೀಡಿ ಗೆಲ್ಲಿಸುವಂತೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ರಾಜ್ಯದ್ಯಕ್ಷರು ರವಿ ಕೃಷ್ಣಾರೆಡ್ಡಿ ಹೇಳಿದರು.
ಈ ಸಂದರ್ಭದಲ್ಲಿ ಪಕ್ಷದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ರಂಜಿನಿ ಎಂ, ಜಿಲ್ಲಾ ಅಧ್ಯಕ್ಷ ವೇಣುಗೋಪಾಲ್ ಕಡಬ, ರಾಜ್ಯ ಸಂಘಟನಾ ಕಾರ್ಯದರ್ಶಿ ಪ್ರವೀಣ್ ವಿಟ್ಲ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀತಾ ರಾಝ್ಯಾ, ಕಾರ್ಯದರ್ಶಿಗಳಾದ ಪ್ರಕಾಶ್, ಪುಷ್ಪಾ, ಹಾಗೂ ಪಕ್ಷದ ಮುಖಂಡರಾದ ಕೃಷ್ಣೇಗೌಡ ಮೊದಲಾದವರು ಉಪಸ್ಥಿತರಿದ್ದರು.

Related Posts

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!