Ad Widget

ಗುತ್ತಿಗಾರು ಗ್ರಾಮ ಕಾಂಗ್ರೆಸ್ ಸಮಿತಿ ಸಭೆ – ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಗೆ ಪಕ್ಷ ಸೇರ್ಪಡೆ

ಲೋಕಸಭಾ ಚುನಾವಣೆ ಪೂರ್ವಭಾವಿಯಾಗಿ ಗುತ್ತಿಗಾರು ಗ್ರಾಮ ಕಾಂಗ್ರೆಸ್ ಸಮಿತಿಯ ಸಭೆ ಇಂದು ಗುತ್ತಿಗಾರಿನ ಪ್ರಶಾಂತ್ ಕಾಂಪ್ಲೆಕ್ಸ್ ನಲ್ಲಿ ನಡೆಸಲಾಯಿತು.
ಸಭೆಯಲ್ಲಿ ಸುಳ್ಯ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಪಿ.ಸಿ ಜಯರಾಂ, ಗುತ್ತಿಗಾರು ಜಿಲ್ಲಾ ಪಂಚಾಯತ್ ಕ್ಷೇತ್ರದ ಉಸ್ತುವಾರಿ ದಿನೇಶ್ ಅಂಬೆಕಲ್ಲು, ಸುಳ್ಯ ವಿಧಾನಸಭಾ ಕ್ಷೇತ್ರದ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಂ ವೆಂಕಪ್ಪ ಗೌಡ, ಸುಳ್ಯ ವಿಧಾನಸಭಾ ಕ್ಷೇತ್ರದ ವೀಕ್ಷಕರಾದ ಎನ್ ಜಯಪ್ರಕಾಶ್ ರೈ, ಇಂಡಿಯಾ ಒಕ್ಕೂಟದ ಮೂಲಕ ಕಾಂಗ್ರೆಸ್ ಬೆಂಬಲಿಸುವ ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಮಿತಿ ಸದಸ್ಯರಾದ ಅಶೋಕ್ ಎಡಮಲೆ, ಕೆಪಿಸಿಸಿ ಸದಸ್ಯರಾದ ಶ್ರೀಮತಿ ಸರಸ್ವತಿ ಕಾಮತ್, ಜಿಲ್ಲಾ ಎಸ್.ಟಿ ಘಟಕದ ಉಪಾಧ್ಯಕ್ಷರಾದ ಭವಾನಿಶಂಕರ್ ಕಲ್ಮಡ್ಕ, ಸುಳ್ಯ ಬ್ಲಾಕ್ ಕಾಂಗ್ರೆಸ್ ಎಸ್. ಟಿ ಘಟಕ ಅಧ್ಯಕ್ಷರಾದ ಪರಮೇಶ್ವರ್ ಕೆಂಬಾರೆ, ಪರಮೇಶ್ವರ್ ಗೌಡ, ಸುಳ್ಯ ವಿಧಾನ ಸಭಾ ಕ್ಷೇತ್ರ ಚುನಾವಣೆ ಪ್ರಚಾರ ಸಮಿತಿ ಸಾಮಾಜಿಕ ಜಾಲತಾಣ ಸಂಚಾಲಕ ಚೇತನ್ ಕಜೆಗದ್ದೆ, ಭೋಜಪ್ಪ ನಾಯ್ಕ ಅಡ್ಕಾರು ಗುತ್ತಿಗಾರು ಗ್ರಾಮದ ಪ್ರಮುಖರಾದ ಸನತ್ ಮುಳುಗಾಡು, ಹರ್ಷಿತ್ ಕೊರಂಬಟ, ರಾಜೇಶ್ ನಡುಗಲ್ಲು, ದಿನೇಶ್ ಸರಸ್ವತಿಮಹಲ್, ರೋಹಿತಾಶ್ವ ಉತ್ರಂಬೆ, ಸುರೇಶ್ ಉಜಿರಡ್ಕ, ಅಭಿಜಿತ್ ಕೆಂಬಾರೆ, ಡಿ.ಜೆ ಜನಾರ್ಧನ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು..

. . . . . . . . .

. . . . . . .

ಈ ಸಭೆಯಲ್ಲಿ ಬಿಜೆಪಿಯ ಕಾರ್ಯಕರ್ತರಾದ ಧರ್ಮಪಾಲ ಸಂಪ್ಯಾಡಿ, ನಾಗೇಶ್ ವಲ್ಪಾರೆ, ರಂಜಿತ್ ವಲ್ಪಾರೆ, ಚೇತನ್ ನಡುಗಲ್ಲು, ಶೇಷಪ್ಪ ನಾಯ್ಕ್ ನಡುಗಲ್ಲು ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್ ಸೇರ್ಪಡೆಗೊಂಡರು.


Discover more from ಅಮರ ಸುದ್ದಿ

Subscribe to get the latest posts sent to your email.

Related Posts

06.03.2026 e paper

e paper 16.01.2026

Ad Widget
https://www.google.com/adsense/new/u/7/pub-8317931258687044/home

Leave a Reply

Your email address will not be published. Required fields are marked *

error: Content is protected !!

Discover more from ಅಮರ ಸುದ್ದಿ

Subscribe now to keep reading and get access to the full archive.

Continue reading